Advertisement

ಸಿಸಿಬಿ ಅಧಿಕಾರಿಗಳ ಮೇಲೆ ಎಸಿಬಿ ಸವಾರಿ!

04:52 AM May 23, 2020 | Lakshmi GovindaRaj |

ಬೆಂಗಳೂರು: ಸಿಗರೇಟ್‌ ವಿತರಕರಿಂದ ಹಣ ಪಡೆದಿದ್ದ ಸಿಸಿಬಿ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ ಗಳಿಗೆ ಭ್ರಷ್ಟಚಾರ ನಿಗ್ರಹ ದಳ ಶುಕ್ರವಾರ  ದಾಳಿಯ ಶಾಕ್‌ ನೀಡಿದೆ. ಎಸಿಪಿ, ಇಬ್ಬರು ಇನ್ಸ್‌ಪೆಕ್ಟರ್‌ಗಳ ನಿವಾಸ, ಸಿಸಿಬಿ ಕಚೇರಿ, ಮಧ್ಯವರ್ತಿಗಳ  ನಿವಾಸಗಳು ಸೇರಿ ಏಳು ಕಡೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಸಿಸಿಬಿ ಎಸಿಪಿಯಾಗಿ ಅಮಾನತು ಗೊಂಡಿ ರುವ ಪ್ರಭುಶಂಕರ್‌ ಅವರ  ಸಹಕಾರ ನಗರದಲ್ಲಿರುವ ವಾಸದ ಮನೆ, ಮೈಸೂರು ವೃತ್ತದ ಬಳಿಯಲ್ಲಿರುವ ಕಚೇರಿ, ಸಿಸಿಬಿ ಇನ್‌ಸ್ಪೆಕ್ಟರ್‌ ಅಜಯ್‌ ಅವರ ಎಚ್‌ ಆರ್‌ಬಿಆರ್‌ ಲೇಔಟ್‌ನಲ್ಲಿರುವ ಮನೆ, ಸಿಸಿಬಿ ಇನ್‌ಸ್ಪೆಕ್ಟರ್‌ ನಿರಂಜನ್‌ ಕುಮಾರ್‌ ಅವರ ಬಸವೇಶ್ವರ  ನಗರದಲ್ಲಿರುವ ನಿವಾಸ, ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಮಧ್ಯ ವರ್ತಿ ಬಾಬು ರಾಜೇಂದ್ರ ಪ್ರಸಾದ್‌ ಎಂಬಾತನ ಯಲಹಂಕ ಉಪನಗರದಲ್ಲಿನ ನಿವಾಸ,

ಖಾಸಗಿ ವ್ಯಕ್ತಿಗಳಾದ ಆದೀಲ್‌ ಅಜೀಜ್‌ನ ಶಾಂತಿನಗರದಲ್ಲಿರುವ ಮನೆ, ಭೂಷಣ್‌ ಎಂಬಾತ ಯಲಹಂಕ ಉಪನಗರದಲ್ಲಿ ಹೊಂದಿರುವ ನಿವಾಸ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆದಿದೆ. ದಾಳಿ ವೇಳೆ ಮದ್ಯವರ್ತಿಗಳ ಮನೆಯಲ್ಲಿ ಕೆಲ ಮಹ ತ್ವದ ದಾಖಲೆ ಪತ್ತೆಯಾಗಿದೆ. ಜಪ್ತಿ  ಮಾಡಿದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ: ಲಾಕ್‌ ಡೌನ್‌ ಸಂದರ್ಭದಲ್ಲಿ ಸಿಗರೇಟ್‌ ವಿತರಕ ರಿಂದ ಎಸಿಪಿ ಪ್ರಭುಶಂಕರ್‌ ಇನ್ಸ್‌ಪೆಕ್ಟರ್‌ ಗಳಾದ ಅಜಯ್‌, ನಿರಂ ಜನ್‌  ಕುಮಾರ್‌ ಸೇರಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದರು ಎಂಬ ಆರೋಪ ಸಂಬಂಧ ಎಸಿಬಿ ಮೂರು ಪ್ರತ್ಯೇಕ ಕೇಸ್‌ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next