Advertisement

ACB ಭರ್ಜರಿ ದಾಳಿ;ಕೆಐಎಡಿಬಿ ಅಧಿಕಾರಿ ಟಾರ್ಗೆಟ್‌;ಕೋಟ್ಯಂತರ ಹಣ ಜಪ್ತಿ

12:17 PM Oct 05, 2018 | Team Udayavani |

ಬೆಂಗಳೂರು: ಎಸಿಬಿ ಅಧಿಕಾರಿಗಳು ಭ್ರಷ್ಟರ ಬೇಟೆ ಮುಂದುವರಿಸಿದ್ದು ಶುಕ್ರವಾರ ಬೆಳಗ್ಗೆ  ಬೆಂಗಳೂರಿನ ಇಬ್ಬರು ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ, ಮಾತ್ರವಲ್ಲದೆ ಅಪಾರ ಪ್ರಮಾಣದ ಹಣ ಮತ್ತು ದಾಖಲೆಗಳನ್ನು ವಶಕ್ಕೆ  ಪಡಿಸಿಕೊಂಡಿದ್ದಾರೆ. 

Advertisement

ಮಲ್ಲೇಶ್ವರಂನಲ್ಲಿರುವ ಬಹಮಹಡಿ ಅಪಾರ್ಟ್‌ಮೆಂಟ್‌ನಲ್ಲಿರುವ ಕೆಐಎಡಿಬಿ ಮುಖ್ಯ ಇಂಜಿನಿಯರ್‌ ಟಿ.ಆರ್‌.ಸ್ವಾಮಿ ಅವರನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ. 

ಅಧಿಕಾರಿಗಳು ಟಿ.ಆರ್‌.ಸ್ವಾಮಿ ಅವರ 14 ನೇ ಮಹಡಿಯಲ್ಲಿರುವ ನಿವಾಸಕ್ಕೆ ಬಾಗಿಲು ಒಡೆದು ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಹಣ ಎಣಿಸುವ ಯಂತ್ರವನ್ನು ಒಯ್ದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. 

5 ಕೋಟಿಗೂ ಹೆಚ್ಚು  ಹಣ ಪತ್ತೆಯಾಗಿದೆ ಎನ್ನಲಾಗಿದ್ದು, 2 ಕಾರುಗಳಲ್ಲಿ ಅಪಾರ ದಾಖಲೆಗಳು ಸಿಕ್ಕಿರುವ ಬಗ್ಗೆ ತಿಳಿದು ಬಂದಿದೆ. 

ಬಿಡಿಎ ಅಧಿಕಾರಿಯ ಮೇಲೂ ದಾಳಿ 

Advertisement

ಬಸವೇಶ್ವರ ನಗರದಲ್ಲಿರುವ  ಬಿಡಿಎ ಮುಖ್ಯ ಇಂಜಿನಿಯರ್‌ ಗೌಡಯ್ಯ  ನಿವಾಸದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಣದ ಚೀಲವನ್ನು ಮನೆಯಿಂದ ಎಸೆದಿದ್ದಾರೆ ಎನ್ನಾಲಾಗಿದೆ. 

ಅಧಿಕಾರಿಗಳು ವಿವಿಧ ಪ್ರದೇಶಗಳಲ್ಲೂ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next