Advertisement

ಎಸಿಬಿ ದಾಳಿ: ಹೆಸ್ಕಾಂನ ಗ್ರೂಪ್ ಸಿ ನೌಕರನ ಮನೆಯಲ್ಲಿ ಡಾಲರ್, ಪ್ಲಾಟಿನಂ!

11:58 AM Nov 24, 2021 | Team Udayavani |

ಬೆಳಗಾವಿ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ರಾಜ್ಯದ 68 ಕಡೆಗಳಲ್ಲಿ ಭ್ರಷ್ಟ ಅಧಿಕಾರುಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಬೆಳಗಾವಿಯಲ್ಲಿ ಹೆಸ್ಕಾಂನ ಗ್ರೂಪ್ ಸಿ ನೌಕರನ ಮನೆಯ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.

Advertisement

ಪ್ಲಾಟಿನಂ ಮತ್ತು ಚಿನ್ನಾಭರಣ, ಡಾಲರ್ ನೋಟುಗಳ ಜೊತೆ ಹೆಸ್ಕಾಂನ ಕೆಲ ಕಡತಗಳು, ಜಮೀನು ಪತ್ರಗಳನ್ನೂ ಎಸಿಬಿ  ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ವೈಭವ ನಗರದಲ್ಲಿರುವ ತನ್ನ 3 ಅಂತಸ್ತಿನ ಮನೆಗೆ ಲಿಫ್ಟ್ ಅಳವಡಿಸಿದ್ದು ಎಸಿಬಿ ಅಧಿಕಾರಿಗಳು ಜಾಲಾಟ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಅಧಿಕಾರಿಯೊಬ್ಬನ ಮನೆಯಲ್ಲಿ 7 ಕೆಜಿ ಚಿನ್ನ!!: 68 ಕಡೆ ಏಕ ಕಾಲದಲ್ಲಿ ಎಸಿಬಿ ದಾಳಿ

ಬೆಳಗಾವಿ ಜಿಲ್ಲೆಯ ಇನ್ನೂ ಮೂವರು ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದ್ದು, ಆರ್‌ಟಿಒ ಇನ್ಸ್‌ಪೆಕ್ಟರ್‌ ಸದಾಶಿವ ಮರಲಿಂಗಣ್ಣನವರ್ ಅವರ ಗೋಕಾಕ್ ನಗರದಲ್ಲಿರುವ ಮನೆ ಸೇರಿ ಒಟ್ಟು 6 ಕಡೆ ದಾಳಿ ನಡೆಸಲಾಗಿದ್ದು, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಅವರ ಬೈಲಹೊಂಗಲದ ನಿವಾಸ ಸೇರಿ 3 ಕಡೆ ಏಕ ಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next