Advertisement

ಖಾತೆಯಲ್ಲಿ ಹೆಸರು ಸೇರ್ಪಡೆಗೆ ಲಂಚ : ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್

08:56 PM Mar 21, 2022 | Team Udayavani |

ವಿಜಯಪುರ : ನಗರದ ಅರ್ಜಿದಾರರೊಬ್ಬರಿಂದ ಖಾತೆಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂದಾಖಲೆಗಳ ಇಲಾಖೆಯ ನಗರ ಸರ್ವೇಯರ್ ರವಿ ರಾಮಸಿಂಗ್ ನಾಯ್ಕ ಲಂಚದ ಹಣದ ಸಮೇತ ಎಸಿಬಿ ಬಲೆಗೆ ಬಿದ್ದಾರೆ.

Advertisement

ಉಮರ ಫಾರೂಕ್ ಬಾಂಗಿ ಎಂಬವರು ತಮ್ಮ ತಂದೆ ಇಮಾಮ್ ಖಾಸಿಂ ಬಾಂಗಿ ಅವರು ಮೃತರದ ಕಾರಣ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ತಮ್ಮ ಹೆರಿಗೆ ದಾಖಲಿಸಲು ನಗರ ಭೂದಾಖಲೆಗಳ ಕಛೇರಿಗೆ ಮಾ.14 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಸದರಿ ಅರ್ಜಿಯಂತೆ ವಾರ್ಡ್ ನಂ.6 ರಲ್ಲಿರುವ ಮನೆಯನ್ನು ನಿಮ್ಮ ಹೆಸರಿಗೆ ಮಾಡಲು ಕಛೇರಿ ಖರ್ಚಿನ ವೆಚ್ಚವಾಗಿ 4 ಸಾವಿರ ರೂ, ನೀಡುವಂತೆ ರವಿ ನಾಯ್ಕ ಮಾ.21 ರಂದು ಉಮರ ಅವರಿಗೆ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇರಿಸಿದ್ದರು.

ಲಂಚ ಕೊಡಲು ಒಪ್ಪದ ಉಮರ್ ಅವರು, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸೋಮವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚದ ಹಣ ಸ್ವೀಕರಿಸುವಾಗಲೇ ಸಿಟಿ ಸರ್ವೇಯರ್ ರವಿ ನಾಯಕ ಎಂಬ ಆರೋಪಿಯನ್ನು ಲಂಚದ ಹಣದ ಸಮೇತ ಬಂಧಿಸಿದ್ದಾರೆ.

ಡಿಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಸಿಪಿಐಗಳಾದ ಚಂದ್ರಕಲಾ, ಪರಮೇಶ್ವರ ಕವಟಗಿ, ಸಿಬ್ಬಂದಿಗಳಾದ ಎ.ಐ.ಶೇಖ್, ಆಶೋಕ ಸಿಂಧೂರ, ಚನ್ನನಗೌಡ ಯಾಳವಾರ, ಸದಾಶಿವ ಕೋಟ್ಯಾಳ, ಮಾಳಪ್ಪ ಸಲಗೊಂಡ, ಮದಸನಿಂಗ್, ಎಸ್.ಎಸ್.ಮುಂಜೆ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next