Advertisement
ಲಂಚದ ಹಣದ ಸಮೇತ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಣಿಕ್ಯಾಳ ಈಚೆಗಷ್ಟೇ ಪಾಲಿಕೆ ಆಯುಕ್ತರಾಗಿದ್ದು, ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ.
Related Articles
Advertisement
ಪಾಲಿಕೆ ಲೆಕ್ಕಾಧಿಕಾರಿ ಚನ್ನಪ್ಪ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪಾಲಿಕೆ ಆಯುಕ್ತ ಶಂಕರಣ್ಣ ವಣಿಕ್ಯಾಳ್ ಅವರಿಗೆ ಹಣ ನೀಡಬೇಕು ಅಂತ ಚನ್ನಪ್ಪ ಹೇಳಿದ್ದರು. ಈ ಬಗ್ಗೆ ಎಸಿಬಿಗೆ ಕೋವಿಡ್ ಸುರಕ್ಷ ಚಕ್ರ ಹೆಲ್ಪ್‌ಲೈನ್ ಗುತ್ತಿಗೆ ಪಡೆದಿದ್ದ ಶರಣು ದೂರು ನೀಡಿದ್ದರು. ಬುಧವಾರ ಸಂಜೆ ಹಣ ಪಡೆಯುವಾಗ ಲೆಕ್ಕಾಧಿಕಾರಿ ಚೆನ್ನಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇಬ್ಬರೂ ಅಧಿಕಾರಿಗಳನ್ನು ನ್ಯಾಯಾಂಗ ಬಂಧಿನಕ್ಕೊಪ್ಪಿಸಲಾಗಿದೆ. 14500 ರೂಪಾಯಿ ಲಂಚ ಪಡೆದಿದ್ದ ಲೆಕ್ಕಾಧಿಕಾರಿ ಚೆನ್ನಪ್ಪ ಶರಣು ಅವರಿಂದ ಹಣ ಪಡೆದಿದ್ದರು. ಶರಣು ಹಣ ನೀಡಿರೋ ಬಗ್ಗೆ ಪಾಲಿಕೆ ಆಯುಕ್ತ ಶಂಕರಣ್ಣ ವಣಿಕ್ಯಾಳರಿಗೆ ಮಾಹಿತಿ ಚೆನ್ನಪ್ಪ ಮಾಹಿತಿ ನೀಡಿದ್ದರು.
ಆಗ ಮನೆಗೆ ಹಣ ತಗೆದುಕೊಂಡು ಬಂದು ಕೊಡುವಂತೆ ವಣಿಕ್ಯಾಳ ಹೇಳಿದ್ದರು. ಚೆನ್ನಪ್ಪನನ್ನು ಟ್ರ್ಯಾಪ್ ಮಾಡಿದಾಗ ಒಂದು ಲಕ್ಷ ನಲವತ್ತೆರಡು ಸಾವಿರ ರೂಪಾಯಿ ಕೂಡಾ ಪತ್ತೆಯಾಗಿದೆ.ಕಳೆದ ಎರಡು ದಿನಗಳಿಂದ ಸಂಗ್ರಹಿಸಿದ್ದ ಲಂಚದ ಹಣ ಪತ್ತೆಯಾಗಿದೆ.