Advertisement

ಎಸಿಬಿ ದಾಳಿ: ಅಕ್ರಮ ಹಣ ವಶ

07:07 PM Mar 25, 2021 | Team Udayavani |

ಕೆಜಿಎಫ್: ನಗರಸಭೆಯ ಆಯುಕ್ತೆ ಸರ್ವರ್‌ಮರ್ಚೆಂಟ್‌ ಕಚೇರಿ ಮತ್ತು ಇತರ ಸಿಬ್ಬಂದಿ ಮೇಲೆದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆಯುಕ್ತೆಬಳಿ ಇದ್ದ 38 ಸಾವಿರ ರೂ. ಅಕ್ರಮ ಹಣವನ್ನುವಶಪಡಿಸಿಕೊಂಡಿದ್ದಾರೆ.ನಗರಸಭೆ ಇತರೆ ಸಿಬ್ಬಂದಿಯಿಂದ 73 ಸಾವಿರ ರೂ.ವಶಪಡಿಸಿಕೊಂಡಿದ್ದಾರೆ.ಕೋಲಾರದ ಎಸಿಬಿಡಿವೈಎಸ್‌ಪಿ ಪುರುಷೋತ್ತಮ ನೇತೃತ್ವದಲ್ಲಿ ಇಪ್ಪತ್ತುಜನರ ಎಸಿಬಿ ತಂಡ ಕಚೇರಿ ಮೇಲೆ ದಾಳಿ ನಡೆಸಿತು.ಕಚೇರಿಯಲ್ಲಿದ್ದ ಎಲ್ಲಾ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಒಳಗೆ ಕೂರಿಸಲಾಯಿತು. ನಂತರ ಸಾರ್ವಜನಿಕರನ್ನು ವಿಚಾರಣೆ ನಡೆಸಿ, ಹೊರಗೆ ಬಿಡಲಾಯಿತು.

Advertisement

ಆಯುಕ್ತೆ ಸರ್ವರ್‌ ಮರ್ಚೆಂಟ್‌ ಟೇಬಲ್‌ನಲ್ಲಿ 38 ಸಾವಿರ ರೂ. ಅಕ್ರಮ ಹಣ ಪತ್ತೆಯಾಯಿತು. ಇತರ ಸಿಬ್ಬಂದಿ ಬಳಿ ಕೂಡ 73 ಸಾವಿರರೂ. ಲೆಕ್ಕವಿಲ್ಲದ ಹಣಪತ್ತೆಯಾಯಿತು.ನಗರಸಭೆ ಮೇಲೆ ದೂರುಗಳು: ನಗರಸಭೆ ಮೇಲೆಸಾಕಷ್ಟು ದೂರುಗಳು ಬರುತ್ತಿದ್ದವು. ಖಾತೆಮಾಡಲು ಹಣ ಕೇಳುವುದು, ವಿಳಂಬ ಮಾಡುವುದು, ಆಸ್ತಿ ತೆರಿಗೆ ಹಾಕುವಲ್ಲಿ ಅಕ್ರಮ ಮಾಡುವುದು, ವ್ಯಾಪಾರಸ್ಥರಿಗೆ ಕೊಡುವ ಪರವಾನಗಿಯಲ್ಲಿಹಣ ಕೀಳುವುದು, ಸಕಾಲದಲ್ಲಿ ದಾಖಲೆ ನೀಡದೆಇರುವುದು ಮೊದಲಾದ ಅಕ್ರಮಗಳು ನಡೆದಿದೆ.

ಮಧ್ಯವರ್ತಿಗಳು ಆಯುಕ್ತೆಯ ಕಚೇರಿಯಲ್ಲಿ ಕುಳಿತಿರುತ್ತಿದ್ದರು. ಇದರಿಂದ ಸಾರ್ವಜನಿಕರಿಗೆತೊಂದರೆಯಾಗುತ್ತಿತ್ತು. ಹಲವು ಬಾರಿ ಸಾರ್ವಜನಿಕರ ದೂರಿನ ಬಗ್ಗೆ ನಗರಸಭೆ ಅಧಿಕಾರಿಗಳಿಗೆಬುದ್ಧಿ ಹೇಳಲಾಗಿತ್ತು. ಆದರೂ, ತಿದ್ದಿಕೊಳ್ಳಲಿಲ್ಲಎಂದು ಡಿವೈಎಸ್ಪಿ ಪುರುಷೋತ್ತಮ ಹೇಳಿದ್ದಾರೆ.ಎಸಿಬಿ ಅಧಿಕಾರಿಗಳ ತಂಡ ಸುಮಾರು ಐದುಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಆಯುಕ್ತೆಯಕಾರನ್ನು ಕೂಡ ಕೂಲಂಕುಷವಾಗಿ ಪರಿಶೀಲನೆನಡೆಸಲಾಯಿತು. ಎಸಿಬಿ ಇನ್ಸ್‌ಪೆಕ್ಟರ್‌ ಗಳಾದಫ‌ಯಾಜ್‌, ವಿರೇಂದ್ರಕುಮಾರ್‌, ಲಕ್ಷಿ ¾àದೇವಿ,ರವಿಕುಮಾರ್‌ ದಾಳಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next