Advertisement

ಎಸಿಬಿ ದಾಳಿ: ಅಪಾರ ಪ್ರಮಾಣದ ಆಸ್ತಿ ಪತ್ತೆ

07:52 AM Jun 12, 2020 | Lakshmi GovindaRaj |

ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಭ್ರಷ್ಟಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು ನಾಲ್ವರು ಸರ್ಕಾರಿ ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ  ಪತ್ತೆಯಾಗಿದೆ. ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್‌.ಸತೀಶ್‌ ಕುಮಾರ್‌ಗೆ ಮೈಸೂರಿನ ಸರಸ್ವತಿಪುರದ ವಾಸದ ಮನೆ, ಬೆಂಗಳೂರಿನಲ್ಲಿ 2 ಫ್ಲ್ಯಾಟ್‌, ಒಂದು 1.17 ಕೆ.ಜಿ. ಚಿನ್ನ, 7.290 ಕೆ.ಜಿ. ಬೆಳ್ಳಿ, 2 ಕಾರು, 1  ಬೈಕ್‌, 2.92 ಲಕ್ಷ ರೂ. ಸಿಕ್ಕಿದೆ.

Advertisement

ಕೋಲಾರ ಜಿಲ್ಲೆಯ ಶ್ರೀನಿವಾಸ ವಲಯ ಅರಣ್ಯಾಧಿಕಾರಿ ಎನ್‌.ರಾಮಕೃಷ್ಣ ಅವರ ಕೋಲಾರ ಮತ್ತು ಬೆಂಗಳೂರಿನ 2 ಮನೆ, ಬೆಂಗಳೂರಿ ನಲ್ಲಿ 3 ನಿವೇಶನ, ಬಂಗಾರಪೇಟೆ ಚಿನ್ನಕಾಮನಹಳ್ಳಿಯಲ್ಲಿ 1 ಎಕರೆ  23 ಗುಂಟೆ ಕೃಷಿ ಜಮೀನು, 877 ಗ್ರಾಂ ಚಿನ್ನ, 1 ಕೆ.ಜಿ.586 ಗ್ರಾಂ ಬೆಳ್ಳಿ, 1 ಕಾರು, 3 ಬೈಕ್‌, ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 8.22 ಲಕ್ಷ ಪತ್ತೆಯಾಗಿದ್ದು, 2.27 ಲಕ್ಷ ರೂ.ನಗದು, 26.97 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು  ಪತ್ತೆಯಾಗಿವೆ.

ರಾಯಚೂರಿನ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಅಭಿಯಂತರ ಗೋಪಶೆಟ್ಟಿ ಮಲ್ಲಿಕಾರ್ಜುನ ಅವರ ರಾಯಚೂರಿನಲ್ಲಿ 3, ಬೆಂಗಳೂರಿನಲ್ಲಿ 1 ಮನೆ, ರಾಯಚೂರಿನಲ್ಲಿ 2 ಫ್ಲ್ಯಾಟ್‌, ರಾಯಚೂರು  1, ಕೊಪ್ಪಳದಲ್ಲಿ 2 ನಿವೇಶನ, 1 ಕೆ.ಜಿ. ಚಿನ್ನ, 10 ಕೆ.ಜಿ. 925 ಗ್ರಾಂ ಬೆಳ್ಳಿ, 74 ನಗದು, ರಾಯಚೂರಿನಲ್ಲಿ ಪೆಟ್ರೋಲ್‌ ಬಂಕ್‌, 2 ಟ್ರ್ಯಾಕ್ಟರ್‌ ಷೋರೂಂ, 8 ಎಕರೆ 38 ಗುಂಟೆ ಕೃಷಿ ಜಮೀನು, 2 ಕಾರು, 1 ಬೈಕ್‌,  ಕೋಟಿ ರೂ. ಮೌಲ್ಯದ ಗೃಹೋಪಯೋಗಿ ವಸ್ತು  ಸಿಕ್ಕಿವೆ.

ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಭಾಗ್ಯ ಗಮ ಎಫ್‌ಆರ್‌ಎಲ್‌ ಸರ್ವೆ ವಿಭಾಗದ ಸಹಾಯಕ ಅಭಿಯಂತರ ರಾಘಪ್ಪ ಲಾಲಪ್ಪ ಲಮಾಣಿ ಅವರ ಬಾಗಲಕೋಟೆಯಲ್ಲಿ 2 ಮನೆ, 1ಕಾರು, 1 ಬೈಕ್‌, 334 ಗ್ರಾಂ ಚಿನ್ನ, 1 ಕೆ.ಜಿ.277 ಗ್ರಾಂ  ಬೆಳ್ಳಿ, 1ಕಾರು, 1 ಬೈಕ್‌ , ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 2, 88 ಲಕ್ಷ ರೂ. ಠೇವಣಿ, 1, 92 ಲಕ್ಷ ರೂ., 5 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು ಸಿಕ್ಕಿವೆ. ಈ ಅಧಿಕಾರಿಗಳ ವಿರುದ್ಧ ತನಿಖೆ ಮುಂದು ವರಿದಿದ್ದು, ಪತ್ತೆಯಾದ ಹಣ,  ಆಸ್ತಿ-ಪಾಸ್ತಿ, ಬ್ಯಾಂಕ್‌ ಲಾಕರ್‌ ಮೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾ ಗುವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next