Advertisement

ಎಸಿಬಿ ದಾಳಿಗೆ ಸಿಕ್ಕಿ ಬಿದ್ದ ತಹಶೀಲ್ದಾರ್ ಕಛೇರಿಯ ಗುಮಾಸ್ತ: ಪಿಕೆಎನ್ ಸ್ವಾಮಿ.

08:01 PM Sep 07, 2021 | Team Udayavani |

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಕಲ್ಲುಗುಟ್ಟರಹಳ್ಳಿ ಗ್ರಾಮದ ರೈತನಿಗೆ ತನ್ನ ಜಮೀನಿನ ಸರ್ವೇ ನಂಬರ್ 20/5 ಬಳವೀರನಹಳ್ಳಿ, ಸರ್ವೆ ನಂಬರ್ 9/5 ರ ಖಾತೆಗೆ ಸಂಬಂಧಿಸಿದಂತೆ ತಕರಾರು ವ್ಯಾಜ್ಯವು ಕೊರಟಗೆರೆ ತಾಲ್ಲೂಕು ತಹಸೀಲ್ದಾರ್ ರವರ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುಮಾಸ್ತ  ಪಿಕೆಎನ್ ಸ್ವಾಮಿ  ಖಾತೆ ಮಾಡಿಕೊಡಲು ನೆಪವೊಡ್ಡಿ 20000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ನೀಡಿದ್ದ ದೂರಿನ ಮೇರೆಗೆ ತುಮಕೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಮಂಗಳವಾರ  ಸಂಜೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಡ್ಡಗೆರೆ ರಸ್ತೆಯಲ್ಲಿರುವ ಶ್ರೀಕಂಠಪ್ಪ ಟೀ ಸ್ಟಾಲ್ ಬಳಿ ಇರುವ ಹೊಂಗೆ ಮರದ ಹತ್ತಿರ ಆರೋಪಿ ಸ್ವಾಮಿ, ಪಿಕೆಎನ್  ಬಿನ್ ಚಿಕ್ಕಹನುಮಯ್ಯ ಗ್ರಾಮ ಲೆಕ್ಕಾಧಿಕಾರಿ ಜೊತೆಯಲ್ಲಿದ್ದ ರವಿಕಿರಣ್ ಎಂಬವರಿಗೆ ಲಂಚದ ಹಣ 10000/-ರೂಪಾಯಿ ಕೊಡುವಂತೆ ಪಿರ್ಯಾದಿಗೆ ಸೂಚಿಸಿದ್ದು. ಅದರಂತೆ ರವಿಕಿರಣ್ ರವರು ಪಿರ್ಯಾದಿ ರವರಿಂದ ಲಂಚದ ಹಣವನ್ನು ಪಡೆದುಕೊಳ್ಳುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಮತ್ತು ಲಂಚದ ಹಣವನ್ನು ಪಡೆಯುತ್ತಿದ್ದ ರವಿಕಿರಣ್ ರವರನ್ನು ವಶಕ್ಕೆ ಪಡೆದಿರುತ್ತಾರೆ.

ಇದನ್ನೂ ಓದಿ:ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಗಣೇಶನ ದರ್ಶನ

ತುಮಕೂರು ಎಸಿಬಿ ಘಟಕದ ಡಿವೈಎಸ್ಪಿ ಎಸ್. ಮಲ್ಲಿಕಾರ್ಜುನ ಚುಕ್ಕಿ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀ ವೀರೇಂದ್ರ ಎಂ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸಿಬ್ಬಂದಿಗಳಾದ ನರಸಿಂಹರಾಜು, ಶಿವಣ್ಣ ಕೆ.ಪಿ, ಚಂದ್ರಶೇಖರ್ ಎಂ,  ನರಸಿಂಹರಾಜು, ಗಿರೀಶ್ ಕುಮಾರ್,ಶ್ರೀಮತಿ ಯಶೋಧ ರಮೇಶ್, ಮಹೇಶ್ ಕುಮಾರ್ ರವರು ದಾಳಿಯಲ್ಲಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next