Advertisement
ಅಕಾಡೆಮಿಯ ಈ ಪತ್ರಕ್ಕೆ ಕರಾವಳಿಯ ಹೆಚ್ಚಿನ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಖ್ಯಮಂತ್ರಿಗಳಲ್ಲಿ ಈ ಸಂಬಂಧ ಚರ್ಚೆ ಮಾಡುವ ಭರವಸೆ ನೀಡಿದ್ದಾರೆ. ರಾಜ್ಯ ಸರಕಾರ ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದರೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಬೇಡಿಕೆಗೆ ಬಲ ಬರುತ್ತದೆ.
ಕರಾವಳಿಯಷ್ಟೇ ಅಲ್ಲದೆ ಕೇರಳ, ಮಹಾರಾಷ್ಟ್ರ, ತ.ನಾಡು, ಆಂಧ್ರ, ಗುಜರಾತ್, ಹೊಸದಿಲ್ಲಿಗಳಲ್ಲಿಯೂ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು, ಮುಂಬಯಿ, ಹೈದರಾಬಾದ್, ಚೆನ್ನೆ , ಅಹಮದಾಬಾದ್, ಬರೋಡ, ಕೋಲ್ಕತ್ತಾ ಸೇರಿದಂತೆ ಇನ್ನಿತರ ಪಟ್ಟಣಗಳಲ್ಲಿ ತುಳುವರು ತಮ್ಮ ನೆಲೆ ಕಂಡುಕೊಂಡಿದ್ದಾರೆ. ಸುಮಾರು 40 ಭಾಷೆಗಳಿಂದ ಬೇಡಿಕೆ,22 ಭಾಷೆಗಳಿಗೆ ಮಾನ್ಯತೆ
ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸಬೇಕು ಎಂಬ ಕೂಗು ತುಳು ಸಹಿತ ಅನೇಕ ಭಾಷೆಗಳಿಂದ ಕೇಳಿಬರುತ್ತಿದೆ. ಕೊಡವ, ಲೆಪc, ಬಂಜಾರ, ಹರಿಯಾನ್ವಿ, ಗೊಂಡಿ, ಗುಜ್ಜಾರಿ, ಕರ್ಬಿ, ಮುಂಡಾರಿ, ನಾಗ್ಪುರಿ, ರಾಜಸ್ಥಾನಿ ಸೇರಿ ದಂತೆ ಸುಮಾರು 40ಕ್ಕೂ ಹೆಚ್ಚಿನ ಭಾಷೆಗಳು ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಿವೆ. ಸಂವಿಧಾನ ರಚನೆಯ ಸಮಯದಲ್ಲಿ 14 ಭಾಷೆಗಳಿಗೆ ಮಾನ್ಯತೆ ನೀಡಲಾಗಿತ್ತು. 1967ರಲ್ಲಿ ಸಿಂಧಿ, 1992ರಲ್ಲಿ ನೇಪಾಳಿ, ಕೊಂಕಣಿ, ಮಣಿಪುರಿಗಳನ್ನು ಸೇರ್ಪಡೆ ಮಾಡ ಲಾಯಿತು. 2003ರಲ್ಲಿ ಕಾಶ್ಮೀರದ ಡೋಗ್ರಿ, ಅಸ್ಸಾಂನ ಬೋಡೊ, ಸಾಂಥಾಲಿ, ಬಿಹಾರದ ಮೈಥಿಲಿ ಭಾಷೆಯನ್ನು ಕೇಂದ್ರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಿದೆ.
Related Articles
*ರಾಷ್ಟ್ರಮಟ್ಟದಲ್ಲಿ ತುಳು ಭಾಷೆಗೆ ಮಾನ್ಯತೆ ಸಿಗಲಿದೆ
* ಮಾನ್ಯತೆ ಪಡೆದ ಭಾಷೆಗಳ ಸಂಶೋಧನೆಗೆ ಕೇಂದ್ರದಿಂದ ಹೆಚ್ಚಿನ ಹಣ ಬಿಡುಗಡೆ
*ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಪ್ರಶಸ್ತಿಗೆ ತುಳು ಸಾಹಿತ್ಯ ಪರಿಗಣನೆ
* ತುಳು ವಿಶ್ವವಿದ್ಯಾನಿಲಯದ ಬೇಡಿಕೆಗೆ ಮತ್ತಷ್ಟು ಬಲ
* ವಿಧಾನಸಭೆ, ಲೋಕಸಭೆಯಲ್ಲಿ ಜನಪ್ರತಿನಿಧಿಗಳು ತುಳು ಭಾಷೆಯಲ್ಲಿಯೂ ಪ್ರಮಾಣ ವಚನ ಸೀÌಕರಿಸಲು ಅವಕಾಶ
Advertisement
ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ರಾಜ್ಯ ಸರಕಾರ ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸರಕಾರಕ್ಕೆ ಮತ್ತು ಕರಾವಳಿ ಭಾಗದ ಶಾಸಕರಿಗೆ ಈಗಾಗಲೇ ತುಳು ಸಾಹಿತ್ಯ ಅಕಾಡೆಮಿಯಿಂದ ಪತ್ರವನ್ನು ಬರೆಯಲಾಗಿದೆ. ಹೆಚ್ಚಿನ ಶಾಸಕರು ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಸರಕಾರ ಅಧಿಕೃತ ಭಾಷೆಯಾಗಿ ಘೋಷಿಸಿದರೆ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆಗೆ ಮತ್ತಷ್ಟು ಬಲ ಬರುತ್ತದೆ.
ಎ.ಸಿ. ಭಂಡಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ