Advertisement

ಜೂ. 9: ಚಿಣ್ಣರ ಬಿಂಬದ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳಿಗೆ ಚಾಲನೆ

04:03 PM Jun 09, 2019 | Vishnu Das |

ಮುಂಬಯಿ: 2019-2020 ನೇ ಶೈಕ್ಷಣಿಕ ಸಾಲಿನ ತರಗತಿಗಳು ಜೂ. 9 ರಿಂದ ಚಿಣ್ಣರ ಬಿಂಬದ ನಗರ ಮತ್ತು ಉಪನಗರಗಳಲ್ಲಿ ಸ್ಥಾಪನೆಗೊಂಡಿರುವ ವಿವಿಧ ಶಿಬಿರಗಳಲ್ಲಿ ಪ್ರಾರಂಭಗೊಳ್ಳಲಿದೆ.

Advertisement

ಪ್ರಸ್ತುತ ಚಿಣ್ಣರ ಬಿಂಬದಲ್ಲಿ ಐದು ಸಾವಿರಕ್ಕೂ ಅಧಿಕ ಚಿಣ್ಣರು ಮುಂಬಯಿಯಲ್ಲಿ ತುಳು-ಕನ್ನಡ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿಯುತ್ತಿರುವ 6 ರಿಂದ 14 ವರ್ಷದೊಳಗಿನ ಹರೆಯದ ಚಿಣ್ಣರು ಚಿಣ್ಣರ ಬಿಂಬದ ಸದಸ್ಯರಾಗಿದ್ದು, ಶೈಕ್ಷಣಿಕ ವರ್ಷದ ಚಿಣ್ಣರ ಬಿಂಬದ ತರಗತಿಗೆ ಸೇರಲಿಚ್ಚಿಸುವ ಮಕ್ಕಳು ಆಯಾಯ ಶಿಬಿರದ ಮುಖ್ಯಸ್ಥರು, ಶಿಕ್ಷಕಿಯರು, ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.

ಜಾತಿ-ಮತ-ಧರ್ಮವಿಲ್ಲದ ಸಂಸ್ಥೆ

ಯಾವ ಜಾತಿ, ಮತ, ಭೇದವಿಲ್ಲದೆ ಮುಗª ಮನಸಿನ ಚಿಣ್ಣರಿಗಾಗಿ ಸ್ಥಾಪಿತವಾದ ಸಂಸ್ಥೆ ಚಿಣ್ಣರಬಿಂಬ. ಮುಂಬಯಿ ತುಳು-ಕನ್ನಡಿಗರ ಮನೆ ಮನದಲ್ಲಿ ಅಚ್ಚೊತ್ತಿ ನಿಂತಿರುವ ಈ ಸಂಸ್ಥೆಯ ಮುಖೇನ ಮಕ್ಕಳಿಗೆ ಉತ್ತಮ ಸಂಸ್ಕಾರ, ನಡೆ-ನುಡಿಯನ್ನು ಕಲಿಸುತ್ತಿದೆ. ಜೊತೆಗೆ ನಮ್ಮ ನಾಡು, ನುಡಿಯ ಬಗ್ಗೆ ಪ್ರೀತಿ ಮೂಡಿಸಿ ಆ ಮೂಲಕ ಒಂದು ಆದರ್ಶ ಸಮಾಜ, ಉತ್ತಮ ಜನಾಂಗ, ಭವ್ಯ ರಾಷ್ಟ್ರ ನಿರ್ಮಾಣ ಮಾಡುವ ಕನಸನ್ನು ಹೊತ್ತಿದೆ. ಹಿರಿಯರು ಕಾಪಿಟ್ಟುಕೊಂಡು ಬಂದಿರುವ ಈ ಸಂಸ್ಕೃತಿಯನ್ನು ಇಂದು ಉಳಿಸಿ ಬೆಳೆಸುವುದು ಚಿಣ್ಣರಬಿಂಬದ ಮುಖ್ಯ ಧ್ಯೇಯೋದ್ಧೇಶಗಳಲ್ಲಿ ಒಂದಾಗಿದೆ.

ಚಿಣ್ಣರ ಬಿಂಬದ ಧ್ಯೇಯೋದ್ದೇಶಗಳು

Advertisement

ಮಕ್ಕಳಿಗೆ ನಮ್ಮ ನಾಡಿನ ರೀತಿ ನೀತಿಗಳನ್ನು, ಕಟ್ಟು-
ಕಟ್ಟಲೆಗಳನ್ನು ಧಾರ್ಮಿಕ ವಿಧಿ ವಿಧಾನಗಳನ್ನು, ಎಲ್ಲಕ್ಕೂ
ಮುಖ್ಯವಾಗಿ ನಮ್ಮ ಪುರಾತನ ಹಾಗೂ ಸನಾತನ ಸಂಸ್ಕೃತಿಯ ಎಳೆ ಎಳೆಗಳನ್ನು ಬಿಡಿಸಿ ಹೇಳಿ, ಈ ಮಕ್ಕಳು ಇವೆಲ್ಲವನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿ, ನಾಳಿನ ಬಾಳಿಗೆ ನಾಂದಿ
ಹಾಡುವಂತೆ ಮಾಡಿದಲ್ಲಿ ಈ ಮಕ್ಕಳ ಸರ್ವತೋ
ಮುಖ ಬೆಳವಣಿಗೆಯಾಗಬಹುದು ಎನ್ನುವ ದೂರದೃಷ್ಟಿಯಿಂದ ಚಿಣ್ಣರ ಬಿಂಬವು ಕಾರ್ಯನಿರ್ವಹಿಸುತ್ತಿದೆ. ಚಿಣ್ಣರಬಿಂಬ ಹೊಸ ಯೋಜನೆ, ಹೊಸ ಯೋಚನೆಗಳೊಂದಿಗೆ ನಿತ್ಯ ನಿರಂತರವಾಗಿ ಬೆಳೆಯುತ್ತಿದೆ. ಚಿಣ್ಣರ ಬಿಂಬ ಹೆಸರೆ ಸೂಚಿಸುವಂತೆ ಮುದ್ದು ಚಿಣ್ಣರ ನಗು, ಕೇಕೆಗಳ ನಡುವೆ ಅವರ ಭವಿಷ್ಯ ನಿರೂಪಿಸಲು ಸಹಕರಿಸುತ್ತಿದೆ. ಇಲ್ಲಿ ನಾಟಕ, ಯಕ್ಷಗಾನ, ಹಬ್ಬ ಹರಿದಿನಗಳ ಆಚರಣೆ, ಅವುಗಳ ಮೌಲ್ಯಜನಪದ ಕಲೆ, ದೈವಾರಾಧನೆಯ ಮಹತ್ವ, ಭಜನೆ, ನಾಡಿನ ಮೇಲೆ ಮಕ್ಕಳಿಗೆ ಇರಬೇಕಾದ ಪ್ರೀತಿ, ಭಾಷೆಯ ಬಗೆಗಿನ ಅಭಿಮಾನ, ನಮ್ಮ ಸಂಸ್ಕೃತಿಯ, ಮಣ್ಣಿನ ಸೊಗಡಿನ ಆಳ ಅರಿವು, ಕನ್ನಡ ನುಡಿಯ ಬಗೆಗಿನ ಪ್ರೇಮ ಇವೆಲ್ಲವನ್ನು ಒಂದೇ ಕಡೆ ನಿಸ್ವಾರ್ಥವಾಗಿ ಚಿಣ್ಣರಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ
ವಿವಿಧೆಡೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು, ಆಮಂತ್ರಿಸಿ ಆ ಮೂಲಕ ಸದ್ವಿಚಾರಗಳನ್ನು ಪುಟಾಣಿಗಳಿಗೆ ತಿಳಿಯಪಡಿಸಲಾಗುತ್ತದೆ. ಚಿಣ್ಣರ ಬಿಂಬವು ತನ್ನದೇ ಆದ ವೈವಿಧ್ಯಮಯ ಚಟುವಟಿಕೆಗಳಿಂದಾಗಿ ಇಂದು
ಹೊರನಾಡು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಒಳನಾಡಾದ ಕರ್ನಾ
ಟಕದಲ್ಲೂ ಮನೆಮಾತಾಗಿದೆ. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಯೋಗ್ಯ ತರಬೇತಿ, ಮಾರ್ಗದರ್ಶನ ದೊರಕಿದಲ್ಲಿ ಈ ಎಳೆಯರು ಯಾವ ಮಟ್ಟಕ್ಕೆ ಏರಬಹುದು, ಇವರ ಪ್ರತಿಭೆ ಯಾವ ಶಿಖರವನ್ನು ಮುಟ್ಟಬಹುದು ಎಂಬುದಕ್ಕೆ
ಚಿಣ್ಣರಬಿಂಬವೇ ಸಾಕ್ಷಿ. ಮಕ್ಕಳು ತಮ್ಮ ಮುಂದಿನ
ಜೀವನವನ್ನು ಒಳ್ಳೆಯ ಸಂಸ್ಕಾರವಂತ ನಾಗರಿಕರಾಗಿ ಬಾಳಲು ಬೇಕಾದ ಎಲ್ಲ ರೀತಿಯ ತರಬೇತಿಯನ್ನು ಪಡೆಯುವ ಸದಾವ
ಕಾಶವನ್ನು ಇಲ್ಲಿ ಕಲ್ಪಿಸಿಕೊಡಲಾಗುತ್ತದೆ. ಈ
ಪುಟಾಣಿಗಳು ನಿಜಕ್ಕೂ ಶಿಷ್ಟರು ಮತ್ತು ಅದೃಷ್ಟ
ವಂತರು. ಇಲ್ಲಿ ಅವರಿಗೆ ದಾರಿ ತೋರುವ ಮಾರ್ಗದರ್ಶಕರಿದ್ದಾರೆ. ಚಿಣ್ಣರಬಿಂಬವು ಕಳೆದ ಒಂದೂವರೆ ದಶಕಗಳಿಗಿಂತಲೂ ಅಧಿಕ
ಕಾಲದಿಂದ ಕ್ಷಣ ಕ್ಷಣಕ್ಕೂ ಕಂಡು ಬರುವ ಹೊಸತನಗಳೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಅಭಿವೃದ್ಧಿಯನ್ನು ಧ್ಯೇಯ
ವಾಗಿಟ್ಟುಕೊಂಡು ಸದೃಢ ಸಮಾಜ ನಿರ್ಮಾಣದ ಕಾರ್ಯದಲ್ಲಿ ಕ್ರಿಯಾಶೀಲವಾಗಿದೆ.

ಮಕ್ಕಳಿಂದ ಮಕ್ಕಳಿಗಾಗಿ
ಪ್ರತಿಭೆಯ ಹೊಸ್ತಿಲಲ್ಲಿ ನಿಂತ ಮಕ್ಕಳನ್ನು ಬೆಳೆಸುವ ಕಾರ್ಯವನ್ನು ಚಿಣ್ಣರ ಬಿಂಬ ಮಾಡುತ್ತಿದೆ. ಮಕ್ಕಳ ಜ್ಞಾನವನ್ನು ವೃದ್ಧಿಸಿ, ವಿಕಾಸಪಥದತ್ತ ಕೊಂಡೊಯ್ದು ಉತ್ತಮ ನಾಗರಿಕರನ್ನಾಗಿಸಲು ಅಗತ್ಯವಾದ ವಿಶಿಷ್ಟ ಗುಣ ವಿಶೇಷಗಳನ್ನು ಅಳವಡಿಸಿಕೊಳ್ಳಲು ಈ ಸಂಸ್ಥೆಯು ಒಂದು ಉತ್ತಮ ತಳಹದಿಯಾಗಿದೆ. ನಮ್ಮ ಮಕ್ಕಳಲ್ಲಿ ಅಡಗಿರುವ, ಸುಪ್ತ ಚೇತನವನ್ನು ಬಡಿದೆಬ್ಬಿಸುವ, ಅವರಲ್ಲಿ ಸೃಜನಶೀಲತೆ, ಕ್ರೀಯಾಶೀಲತೆ ಹಾಗೂ ಸುವಿಚಾರಗಳೆಂಬ ಜ್ಞಾನದೀವಿಗೆಯನ್ನು ಹಚ್ಚಿ ಮಕ್ಕಳಲ್ಲಿ ಕನ್ನಡ ಅಕ್ಷರ ಜ್ಞಾನವನ್ನು ತುಂಬುತ್ತಿರುವುದು ಮಹತ್ತರವಾದ ಕಾರ್ಯ. ಮಕ್ಕಳಿಂದ…ಮಕ್ಕಳಿ
ಗಾಗಿಯೇ ಇರುವ ಅಪರೂಪದ ಸಂಸ್ಥೆ ಚಿಣ್ಣರ
ಬಿಂಬದಲ್ಲಿ ಹಕ್ಕಿಗಳಂತೆ ಉಲಿಯುವ ಸಾವಿ
ರಾರು ಚಿಣ್ಣರು ಸ್ಪರ್ಧೆಗಳು ಬಂದಾಗ ತಮ್ಮ ಪ್ರೌಢ ಕನ್ನಡ ಭಾಷೆಯಿಂದ ನಿರರ್ಗಳವಾಗಿ ಮಾತನಾಡುವುದನ್ನು ನೋಡಿದರೆ ಪ್ರೇಕ್ಷಕರಲ್ಲಿ ಬೆರಗು ಮೂಡಿಸುವುದು ಸತ್ಯ. ಮನುಷ್ಯನಲ್ಲಿ ಇರಬೇಕಾದ ಗುಣಗಳೆಂದರೆ ಶಿಸ್ತು, ಸಂಯಮ, ಅಚ್ಚುಕಟ್ಟುತನ, ಧೈರ್ಯ, ಆತ್ಮವಿಶ್ವಾಸ, ಹಿರಿಯರ ಬಗೆಗಿನ ಗೌರವ ಇತ್ಯಾದಿ. ಈ ಗುಣಗಳನ್ನು ಆತ ಬಾಲ್ಯದಲ್ಲಿಯೇ ಕಲಿತು
ಕೊಳ್ಳಬೇಕು. ಆಗ ಮಾತ್ರ ಮಗು ಪರಿಪೂರ್ಣ ಸದ್ಗುಣವಂತನಾಗಿ ಬೆಳೆಯಲು, ಬಾಳಲು ಸಾಧ್ಯ ಎಂಬ ಸದುದ್ದೇಶದಿಂದ ಚಿಣ್ಣರಬಿಂಬ ಆ ನಿಟ್ಟಿನಲ್ಲಿ ಅಹರ್ನಿಶಿಯಾಗಿ ಶ್ರಮಿಸುತ್ತಿದೆ.

ಚಿಣ್ಣರ ಬಿಂಬದ ಆಶಯ
ಚಿಣ್ಣರ ಬಿಂಬದ ಮೂಲಭೂತ ಆಶಯ ಅಥವಾ ಅದರ ಪರಿಕಲ್ಪನೆ ಸಾರ್ವಕಾಲಿಕ ಮೌಲ್ಯವುಳ್ಳದ್ದು. ಈ ಪರಿಕಲ್ಪನೆಯಿಂದಾಗಿಯೇ ಆರಂಭದಿಂದಲೇ ಮಕ್ಕಳು, ಪಾಲಕರು ಚಿಣ್ಣರ ಬಿಂಬಕ್ಕೆ ಆಕರ್ಷಿತರಾದರು. ಇಲ್ಲಿ ಎಲ್ಲರು ಗಮನಿಸಬೇಕಾದ ಒಂದು ಅಂಶವೆಂದರೆ, ಸಂಸ್ಥೆಯಲ್ಲಿ 5,000 ಚಿಣ್ಣರಿದ್ದಾರೆ. 10,000 ಪಾಲಕರು ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ನಾಳೆ ಈ ಚಿಣ್ಣರು ಮದುವೆಯಾದಾಗ ಮತ್ತೆ ಐದು ಸಾವಿರ ಅವರ ಜೀವನ ಸಂಗಾತಿಗಳು, ಅವರ ಮಕ್ಕಳು ಹೀಗೆ ಈ ಬಳ್ಳಿ ಮುಂದುವರಿದು ಚಿಣ್ಣರ ಬಿಂಬದ ಧ್ಯೇಯೋದ್ದೇಶವನ್ನು ಅರ್ಥಮಾಡಿ
ಕೊಂಡಾಗ ಒಂದು ಸುಸಂಸ್ಕೃತಲೋಕ ನಿರ್ಮಾಣ ವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಚಿಣ್ಣರ ಬಿಂಬ ಎಂಬ ಸಂಸ್ಥೆಯು ಸಮಾಜವನ್ನೇ ಬದಲಾಯಿಸಬಹುದು. ಹೀಗಿರುವಾಗ ಮುಂದಿನ ಜನಾಂಗದ ಈ ಸಹಸ್ರ ಸಹಸ್ರ ಚಿಣ್ಣರಿಂದ ಎಂತಹ ಕ್ರಾಂತಿ ಮಾಡಲು ಸಾಧ್ಯವಿದೆ ಎಂಬುವುದನ್ನು ವಿಚಾರ ಮಾಡಬೇಕಾಗಿದೆ.

ಚಿಣ್ಣರ ಬಿಂಬದ ಶೈಕ್ಷಣಿಕ ಸಾಲಿನ ತರಗತಿಗಳು ಹಾಗೂ ಸಂಸ್ಥೆಯ ಕಾರ್ಯಚಟುವಟಿಕೆಗಳು ಜೂ. 9 ರಿಂದ ಪ್ರಾರಂಭಗೊಳ್ಳಲಿದೆ. 6 ರಿಂದ 14 ವರ್ಷದೊಳಗಿನ ಮಕ್ಕಳು ಚಿಣ್ಣರ ಬಿಂಬದ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಸಂಸ್ಥೆಗೆ ಸೇರಲಿಚ್ಚಿಸುವ ಮಕ್ಕಳು ತಮ್ಮ ಪರಿಸರದಲ್ಲಿರುವ ಚಿಣ್ಣರ ಬಿಂಬದ ಆಯಾಯ ಶಿಬಿರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದು. ಎಲ್ಲಾ ಶಿಬಿರಗಳ ಮುಖ್ಯಸ್ಥರು, ಶಿಕ್ಷಕರು, ಪಾಲಕ-ಪೋಷಕರು, ಪದಾಧಿಕಾರಿಗಳು, ಹಿರಿಯ ಮಕ್ಕಳು, ತಮ್ಮ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇತರ ಮಕ್ಕಳನ್ನು ಆಕರ್ಷಿಸುವಲ್ಲಿ ಮುಂದಾಗಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿರುವ ಚಿಣ್ಣರ ಬಿಂಬದ ಶೈಕ್ಷಣಿಕ ಸಾಲಿನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ತುಳು-ಕನ್ನಡಿಗರ ಸಹಕಾರ, ಪ್ರೋತ್ಸಾಹ ಸದಾಯಿರಲಿ
– ಪ್ರಕಾಶ್‌ ಭಂಡಾರಿ (ಚಿಣ್ಣರ ಬಿಂಬದ ರೂವಾರಿ).

Advertisement

Udayavani is now on Telegram. Click here to join our channel and stay updated with the latest news.

Next