ಮಣಿಪಾಲ: ಶೈಕ್ಷಣಿಕ, ಸಂಶೋಧನೆ ಹಾಗೂ ಪರಿಣಿತರ ಸಲಹೆ ಸಂಬಂಧ ಮಾಹೆ ವಿ.ವಿ. ಜತೆಗೆ ಸ್ಕಾನ್ ರಿಸರ್ಚ್ ಟ್ರಸ್ಟ್ ಹಾಗೂ ಹೆಪಿಯೆಸ್ಟ್ ಹೆಲ್ತ್ ಹೊಸ ಒಡಂ ಬಡಿಕೆಗೆ ಸಹಿ ಹಾಕಿದೆ.
ನಿರ್ದಿಷ್ಟ ಪರಿಧಿಯೊಳಗಿನ ಸೂಕ್ಷ್ಮ ಜೀವಿಗಳ ಅಧ್ಯಯನ, ಮೂಳೆಮಜ್ಜೆಗೆ ಸಂಬಂಧಿಸಿದ ಸಂಶೋಧನೆ, ಜೈವಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹ ಭಾಗಿತ್ವದ ಸಂಶೋಧನೆಯನ್ನು ಈ ಒಡಂಬಡಿಕೆ ಒಳಗೊಂಡಿದೆ. ಇದರಿಂದ “ಹೆಪಿಯೆಸ್ಟ್ ಹೆಲ್ತ್‌ನ ಆರೋಗ್ಯ ಆರೈಕೆ ಕಾರ್ಯಕ್ರಮಗಳಿಗೆ ಮಾಹೆಯು ಪರಿಣಿತ ಸಲಹೆ ನೀಡಲಿದೆ.
ವಿವಿಧ ಆರೋಗ್ಯ ರಕ್ಷಣೆ ಕಾರ್ಯಕ್ರಮ ಗಳಿಗೆ ಇರುವ “ಹೆಪಿಯೆಸ್ಟ್ ಹೆಲ್ತ್ ಗೆ ಸಲಹೆ ನೀಡುವ ಒಪ್ಪಂದವನ್ನೂ ಮಾಡಿದ್ದೇವೆ ಎಂದು ಸ್ಕಾನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪನ ವಿಶ್ವಸ್ಥ ಅಶೋಕ್ ಸೂಟಾ ಹೇಳಿದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಮಾತನಾಡಿ, ಈ ಸಹಭಾಗಿತ್ವವು ನಾವೀನ್ಯವನ್ನು ಉತ್ತೇಜಿ ಸುವ ಮತ್ತು ಸಂಶೋಧನೆಯನ್ನು ಸುಧಾರಿಸುವ ಮಾಹೆಯ ಆಶಯಕ್ಕೆ ಪೂರಕವಾಗಿದೆೆ ಎಂದರು.
ಮಾಹೆಯು ಹಲವು ವರ್ಷಗಳ ಸಂಶೋಧನ ಇತಿಹಾಸ ಹೊಂದಿದ್ದು ಆರೋಗ್ಯವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಸಹ ಕುಲಪತಿ ಡಾ| ಶರತ್ ಕೆ. ರಾವ್ ಹೇಳಿದರು. ಸ್ಕಾನ್‌ನ ನಿರ್ದೇಶಕ ಡಾ| ಯೋಗೇಶ ಶೌಚೆ ಮಾತನಾಡಿ, ಒಪ್ಪಂ ದದಂತೆ ಮಾಹೆಯೊಂದಿಗೆ ಸದ್ಯವೇ ಕೆಲವು ನಿರ್ದಿಷ್ಟ ಸಂಶೋಧನ ಯೋಜ ನೆಗಳನ್ನು ನಡೆಸಲಿದ್ದೇವೆ ಎಂದರು.
ಮಾಹೆ ಕುಲಸಚಿವ ಡಾ| ಪಿ. ಗಿರಿಧರ ಕಿಣಿ, ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ, ಕೆಎಂಸಿ ಅಸೋಸಿಯೇಟ್ ಡೀನ್ ಡಾ| ನವೀನ್ ಸಾಲಿನ್ಸ್, ಕಾರ್ಪೊರೇಟ್ ರಿಲೇಶನ್ಸ್ ನಿರ್ದೇಶಕ ಡಾ| ಹರೀಶ್ ಕುಮಾರ್, ಸ್ಕಾನ್ ಸಂಸ್ಥೆ ಯ ಉಪಾಧ್ಯಕ್ಷ ಡೆವಿಡ್ ಕೆರಾಡಿನ್ ಉಪಸ್ಥಿತರಿದ್ದರು.