Advertisement
ತಾಲೂಕಿನ ಹೊನ್ನೂಣಸಿ ಗ್ರಾಮದಲ್ಲಿ ರವಿವಾರ ನಡೆದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಡೆದ ಜನವಿರೋಧಿ ನೀತಿಗೆ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮೊನ್ನೆ ನಡೆದ ಪಂಚರಾಜ್ಯ ಚುನಾವಣೆ ಫಲಿತಾಂಶ ರಾಜ್ಯ ರಾಷ್ಟ್ರದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನೇ ಕಳೆದುಕೊಂಡಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ಜನ ವಿರೋಧಿ ಹೇಳಿಕೆಯಿಂದ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷ ರೇವಣಸಿದ್ಧಯ್ಯ, ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ಮುಖಂಡ ವಿಶ್ವನಾಥ ಮರಿಸಬಸಪ್ಪನವರ, ವೀರಭದ್ರಪ್ಪ ಹಾವಾರಿ, ವೀರಣ್ಣ ಹುಬ್ಬಳ್ಳಿ, ಎಂ.ಬಿ. ಅಳವುಂಡಿ, ಎಇಇ ಹೇಮಂತ್‌ರಾಜ್ ಇನ್ನಿತರರಿದ್ದರು.
ಗ್ರಾಮದಲ್ಲಿ ಕಾಮಗಾರಿ ಪೂಜೆ ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವಾಗ ರಸ್ತೆಯಲ್ಲಿ ಉಂಟಾದ ಚರಂಡಿ ಅವ್ಯವಸ್ಥೆಯನ್ನು ಕಂಡು ಸಚಿವರು ಗ್ರಾಪಂ ಅಭಿವೃದ್ಧಿ ಅಧಿಕಾರಿ ದೊಡ್ಡಬಸಮ್ಮನನ್ನು ತರಾಟೆ ತೆಗೆದುಕೊಂಡರು. ಇದೇನೆ ನಿಮ್ಮ ಅಭಿವೃದ್ಧಿ ಗ್ರಾಮದಲ್ಲಿ ಜನ ನಡೆದಾಡುವುದಾರೂ ಹೇಗೆ? ಮೊದಲು ಚರಂಡಿ ನಿರ್ಮಿಸಿ ರಸ್ತೆ ಸುಧಾರಣೆಗೊಳಿಸಿ. ಇಲ್ಲದಿದ್ದರೆ ಸಸ್ಪೆಂಡ್ ಮಾಡಿ ಮನೆಗೆ ಕಳಿಸುತ್ತೇನೆ. ಇದೇ ಸಂದರ್ಭದಲ್ಲಿ ಗ್ರಾಮದ ಜನರ ವಿವಿಧ ಸಮಸ್ಯೆಗಳ ಕುರಿತು ಮನವಿ ಪಡೆದು ನಿವಾರಣೆಗೆ ಕ್ರಮ ತೆಗೆದುಕೊಳ್ಳುವದಾಗಿ ತಿಳಿಸಿದರು.
ಕಾಮಗಾರಿಗೆ ಭೂಮಿಪೂಜೆ: ರೂ. 50 ಲಕ್ಷ ವೆಚ್ಚದಲ್ಲಿ ಹೊನ್ನುಣುಸಿ-ಹನುಮನಹಟ್ಟಿ 1 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ, 1 ಕೋಟಿ ರೂ. ವೆಚ್ಚದ ಚಿಕ್ಕಬೀಡಿನಾಳ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ, 98 ಲಕ್ಷದ ರೂ. ಕದ್ರಳ್ಳಿ-ಹಿರೇಬಿಡಿನಾಳದ ರಸ್ತೆ ನಿರ್ಮಾಣ, 1.20 ಕೋಟಿ ರೂ. ವೆಚ್ಚದ ಕದ್ರಳ್ಳಿ ಗ್ರಾಮದಿಂದ ಮುತ್ತಾಳ ರಸ್ತೆ ಸುಧಾರಣೆ ಕಾಮಗಾರಿ, 10 ಕೋಟಿ ರೂ. ವೆಚ್ಚದಲ್ಲಿ ತಿಪ್ಪರಸನಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪಪೂ ವಸತಿ ಕಾಲೇಜು ಕಟ್ಟಡ ಕಾಮಗಾರಿ, 1 ಕೋಟಿ ರೂ. ವೆಚ್ಚದ ತಿಪ್ಪರಸನಾಳ ಗಾವರಾಳ ರಸ್ತೆ ಸುಧಾರಣೆ, 50 ಲಕ್ಷ ರೂ.ವೆಚ್ಚದ ತಿಪ್ಪರಸನಾಳ- ಚಂಡೂರ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.