Advertisement
ಪೆಡಿಕ್ಯೂರ್ ಮಾಡಿಸಿಕೊಳ್ಳಲು ಬಿಡುವಿಲ್ಲ ಎಂದೋ, ಅಥವಾ ಪಾದಗಳ ಬಗ್ಗೆ ಕಾಳಜಿ ವಹಿಸಲು ಆಗುವುದಿಲ್ಲ ಎಂದೋ ಜನರು ಕಾಲ್ಗಳನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ನಾವು ಓಪನ್ ಶೂಸ್, ಚಪ್ಪಲಿ, ಫ್ಲಿಪ್ ಫ್ಲಾ±Õ…, ಸ್ಯಾಂಡಲ್ಸ… ಅಥವಾ ಗ್ಲಾಡಿಯೇಟರ್ ಹಾಕಿಕೊಳ್ಳಲು ಹಿಂದೆ- ಮುಂದೆ ನೋಡುತ್ತೇವೆ. ಒಡೆದ ಹಿಮ್ಮಡಿ ಕಾಣಿಸಿಕೊಂಡರೆ ಮುಜುಗರವಾಗುತ್ತದೆ ಎಂದು ಬಹುತೇಕ ಮಂದಿ ಶೂ, ಬ್ಯಾಲರೀನಾ ಶೂಸ್, ಸ್ಲಿಪ್-ಆ®Õ…, ಮುಂತಾದ ಪಾದರಕ್ಷೆಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ.
ಬೇಸಿಗೆ ಶುರುವಾಗಿದೆ. ಇಂಥ ಸೆಕೆಯಲ್ಲೂ ಶೂಸ್ ಹಾಕೊಂಡು ಓಡಾಡೋದು ಕಷ್ಟ. ಬೆವರಿನಿಂದ ಶೂ ದುರ್ನಾತ ಕೂಡ ಬೀರಲು ಶುರು ಮಾಡುತ್ತೆ ಈ ಸಮಯದಲ್ಲಿ! ಆದ್ದರಿಂದ ಶಾಲಾ ಮಕ್ಕಳು ಯುನಿಫಾರ್ಮ್ ಎಂದು ಮತ್ತು ಆಫೀಸ್ ಹೋಗೋರು ಫಾರ್ಮಲ್ಸ… ಎಂದು ಶೂಸ್ ಧರಿಸಲೇಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಮಿಕ್ಕವರು ಹವಾಯಿ ಚಪ್ಪಲಿ ಹಾಕಬೇಕೆಂದಲ್ಲ! ಸ್ಟೈಲಿಶ್ ಮತ್ತು ಟ್ರೆಂಡಿ ಓಪನ್ ಶೂಸ್‌ನ ಟ್ರೈ ಮಾಡಿ ನೋಡಿ! ಏಕೆಂದರೆ ಕಾಲಿಗೂ ಬೇಕು ಏಸಿ, ಸ್ಟೈಲಿಶ್ ಏಸಿ! ಇದುವೇ ಸಮ್ಮರ್ ಫೂಟ್‌ವೇರ್. ಕಾಲ್ಗಗಂಟಿನವರೆಗೆ ಇರುವ ಓಪನ್ ಶೂಗಳನ್ನೂ ಸೀರೆ, ಚೂಡಿದಾರ್, ಲಂಗ, ಪ್ಯಾಂಟ್, ಎಲ್ಲದರ ಜೊತೆ ಹಾಕಿಕೊಳ್ಳಬಹುದು. ಆದರೆ ಮೊಣಕಾಲವರೆಗೆ ಕಟ್ಟುವಂತಹ ಗ್ಲಾಡಿಯೇಟರ್/ ರೋಮನ್ ಸ್ಯಾಂಡಲ್ಸ… ಮುಂತಾದ ಮೆಟ್ಟು ಕೇವಲ ಸಾರ್ಟ್ ಡ್ರೆಸ್‌ಗಳ ಜೊತೆ ಹಾಕಿಕೊಳ್ಳಬಹುದು. ಇನ್ನು ಇಂಥ ಚಪ್ಪಲಿಗಳಲ್ಲಿ ankle ಸಪೋರ್ಟ್ ಇದ್ದರೆ, ಇವುಗಳನ್ನು ಡಾನ್ಸ್ ಫೋ›ಔ ನಲ್ಲೂ ಹಾಕಬಹುದು! ankle ಸಪೋರ್ಟ್ ಇಲ್ಲದ ಚಪ್ಪಲಿಗಳಲ್ಲಿ ಡಾನ್ಸ್ ಮಾಡುವುದು ಕಷ್ಟ. ಏಕೆಂದರೆ ಅವು ಬಾರಿ, ಬಾರಿ ಬಿಚ್ಚಿ ಹೋಗುತ್ತವೆ.
Related Articles
Advertisement
– ಅದಿತಿಮಾನಸ ಟಿ ಎಸ್