Advertisement

Court 15 ದಿನಕ್ಕೊಮ್ಮೆ ಗಂಗಾವತಿಯಲ್ಲಿ ಎಸಿ ಕೋರ್ಟ್ ಕಾರ್ಯಕಲಾಪ: ಎಸಿ ಕ್ಯಾಪ್ಟನ್ ಮಾಲಗಿತ್ತಿ

06:47 PM Oct 25, 2023 | |

ಗಂಗಾವತಿ :ಪ್ರತಿ 15 ದಿನಗಳಿಗೊಮ್ಮೆ ಗಂಗಾವತಿಯಲ್ಲಿ ಎಸಿ ಕೋರ್ಟ್ ಕಾರ್ಯಕಲಾಪ ನಡೆಸಿ ಭೂ ವಿವಾದಗಳು ಮತ್ತು ಪೊಲೀಸ್ ಇಲಾಖೆಯ ಕೆಲ ಕೇಸ್ ಗಳಿಗೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ. ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ವ್ಯಾಜ್ಯಗಳು ಎಸಿ ಕೋರ್ಟು ವ್ಯಾಪ್ತಿಗೆ ಬರುತ್ತವೆ ಎಂದು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.

Advertisement

ಗಂಗಾವತಿ ತಹಸಿಲ್ ಕಚೇರಿಯಲ್ಲಿ ಅಧಿಕೃತವಾಗಿ ಎಸಿ ಕೋರ್ಟ್ ಕಲಾಪಕ್ಕೆ ಚಾಲನೆ ನೀಡಿ ವಕೀಲರ ಸಂಘದಿಂದ ಸನ್ಮಾನಾನ ಸ್ವೀಕರಿಸಿ ಮಾತನಾಡಿದರು.ವಕೀಲರು ಮತ್ತು ಸಂಘ ಸಂಸ್ಥೆಗಳ ಮನವಿ ಮೇರೆಗೆ ಜಿಲ್ಲಾಡಳಿತ ಮತ್ತು ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಗಂಗಾವತಿಯಲ್ಲಿ ಎಸಿ ಕೋರ್ಟ್ ಕಾರ್ಯಕಲಾಪ ನಡೆಸುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಭೂ ವ್ಯಾಜ್ಯ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಕೆಲವು ವ್ಯಾಜ್ಯಗಳ ಕುರಿತು ವಿಚಾರಣೆಗಳನ್ನು ನಡೆಸಿ ಸೂಕ್ತ ಆದೇಶಗಳನ್ನು ನೀಡಲಾಗುತ್ತದೆ.

ಕಾರಟಗಿ, ಗಂಗಾವತಿ ಮತ್ತು ಕನಕಗಿರಿ ಈ ಭಾಗದ ಕಕ್ಷಿದಾರರು ಎಸಿ ಕೋರ್ಟ್ ಕಾರ್ಯಕಲಾಪಗಳ ಲಾಭವನ್ನು ಪಡೆಯಬೇಕು ಮತ್ತು ತಹಸಿಲ್ದಾರ್ ಅವರಿಂದ ಪರಿಹಾರ ಕಾಣದ ಕೆಲ ವ್ಯಾಜ್ಯಗಳನ್ನು ಸಹ ವಿಚಾರಣೆ ಮಾಡಿ ಸೂಕ್ತ ಪರಿಹಾರ ನೀಡಲಾಗುತ್ತದೆ. ಜನಸಾಮಾನ್ಯರ ಬೇಕು ಬೇಡಿಕೆಗಳ ಕುರಿತು ಕೋರ್ಟ್ ಕಲಾಪಕ್ಕ ಮುಂಚೆ ಅಥವಾ ನಂತರ ಮನವಿಗಳನ್ನು ಸ್ವೀಕರಿಸಲಾಗುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಮಾತನಾಡಿ, ವಕೀಲರ ಸಂಘದಿಂದ ಗಂಗಾವತಿಯಲ್ಲಿ ಎಸಿ ಕೋರ್ಟ್ ಕಾಯಂ ಪೀಠ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಲಾಗಿತ್ತು ಇದಕ್ಕೆ ಸ್ಪಂದಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಸಂಗಡಗಿ ಹಾಗೂ ಜಿಲ್ಲಾಡಳಿತ ತಾತ್ಕಾಲಿಕವಾಗಿ ಪ್ರತಿ 15 ದಿನಗಳಿಗೊಮ್ಮೆ ಎಸಿ ಕೋರ್ಟ್ ಕಾರ್ಯಕ್ರಮ ನಡೆಸಿ ಭೂ ಮತ್ತು ಇತರೆ ವ್ಯಾಜ್ಯಗಳ ಕುರಿತು ವಿಚಾರಣೆ ನಡೆಸಿ ಪರಿಹಾರ ದೊರಕಿಸಿಕೊಡಲಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಸಮಸ್ತ ವಕೀಲರ ಪರವಾಗಿ ಸಲ್ಲಿಸಲಾಗುತ್ತದೆ ಎಂದರು.

ಎಚ್.ಎಂ. ಮಂಜುನಾಥ ಅವರು ಮಾತನಾಡಿ, ಅಖಂಡ ಗಂಗಾವತಿ ತಾಲೂಕಿಗೆ ಸಂಬಂಧಪಟ್ಟ ಮುಟೇಷನ್ಸ್ ಅಪಿಲ್ ಪ್ರಕರಣಗಳು ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಪ್ರಕರಣಗಳು ಕೊಪ್ಪಳದಲ್ಲಿದ್ದು ಮುಂದಿನ ದಿನಮಾನಗಳಲ್ಲಿ ಈ ಪ್ರಕರಣಗಳನ್ನು ಸಹ ಗಂಗಾವತಿಯಲ್ಲಿ ವಿಚಾರಣೆ ನಡೆಸಲು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಪ್ರಧಾನ ಕಾರ್ಯದರ್ಶಿ ಎಚ್ ಎಂ ಮಂಜುನಾಥ, ಉಪಾಧ್ಯಕ್ಷ ಪರಸಪ್ಪ ನಾಯಕ್, ಖಜಾಂಜಿ ವೆಂಕಟೇಶ್ ಗೌಡ, ರಾಘವೇಂದ್ರ, ಗಂಗಾವತಿ ತಹಸಿಲ್ದಾರ್ ಮಂಜುನಾಥ ಹಿರೇಮಠ ಭೋಗಾವತಿ, ಹಿರಿಯ ವಕೀಲರಾದ ವೈದ್ಯನಾಥ ಸ್ವಾಮಿ ಹಿರೇಮಠ, ಕೆ ಕೃಷ್ಣಪ್ಪ, ಶರದ್ ದಂಡಿನ, ಎಂ. ಗೋವಿಂದ್, ಸೋಮನಾಥ್ ಪಟ್ಟಣಶೆಟ್ಟಿ, ಪಂಪಯ್ಯ ಸ್ವಾಮಿ, ಬಸವರಾಜ ಆರಾಪುರ, ಬಸನಗೌಡ, ಎಸ್ ಎಮ್ ಸಜ್ಜಿಹೋಲ, ರಾಜೇಶ್ವರಿ, ಅಕ್ಕಮಹಾದೇವಿ, ಶಾಯಿನ್ ಕೌಸರ್ ಸೇರಿ ವಕೀಲರು ಮತ್ತು ಕಕ್ಷಿದಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next