Advertisement
ಕರಾವಳಿ ಭಾಗದಲ್ಲಿ ದಿನಂಪ್ರತಿ 37 ಡಿ.ಸೆ.ಗೂ ಹೆಚ್ಚಿನ ಉಷ್ಣಾಂಶ ಏರಿಕೆ ಕಾಣುತ್ತಿದೆ. ಬಿಸಿಲಿನ ಝಳ ಹೆಚ್ಚಾಗಿದೆ. ಹೀಗಿದ್ದಾಗ ದೂರ ಪ್ರಯಾಣಕ್ಕೆ ಹೆಚ್ಚಿನ ಮಂದಿ ಎಸಿ ಬಸ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಹವಾನಿಯಂತ್ರಿತ ಬಸ್ ಸಂಚಾರ ಆರಂಭವಾಗಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಒಂದು ವರ್ಷ ಹಿಂದೆ ಕೆಎಸ್ಸಾರ್ಟಿಸಿ ಎಸಿ ಬಸ್ ಸಂಚಾರ ರದ್ದುಗೊಂಡಿತ್ತು. ಜೂನ್ ತಿಂಗಳಲ್ಲಿ ಹಂತ ಹಂತವಾಗಿ ಬಸ್ ಆರಂಭಿಸಲು ನಿಗಮ ತೀರ್ಮಾನಿಸಿತ್ತು. ಆದರೂ ಇನ್ನೂ ಕೂಡ ಪೂರ್ಣಮಟ್ಟದಲ್ಲಿ ಬಸ್ ಕಾರ್ಯಾಚರಣೆ ನಡೆಸುತ್ತಿಲ್ಲ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ಬಸ್ ಕಾರ್ಯಾಚರಣೆ ಹಂತ ಹಂತವಾಗಿ ಆರಂಭಗೊಂಡರೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾ ಚರಿಸಿಲ್ಲ. ಆದರೆ ಸದ್ಯ ಸುಮಾರು ಶೇ. 95ರಷ್ಟು ಬಸ್ ಕಾರ್ಯಾರಿಸುತ್ತಿದೆ.
Related Articles
Advertisement
ಆದಾಯಕ್ಕಿಂತ ಖರ್ಚು ಹೆಚ್ಚು5 ವರ್ಷಗಳ ಹಿಂದೆ ಮಂಗಳೂರಿನಿಂದ ಮಣಿಪಾಲಕ್ಕೆ ಕೆಎಸ್ಸಾರ್ಟಿಸಿ ಪರಿಚಯಿಸಿದ್ದ ಹವಾನಿಯಂತ್ರಿತ ವೋಲ್ವೋ ಬಸ್ ಸೇವೆ ಇನ್ನೂ ಆರಂಭಗೊಂಡಿಲ್ಲ. ಈ ಹಿಂದೆ ಮಂಗಳೂರಿನಿಂದ ಮಣಿಪಾಲಕ್ಕೆ ಕೆಎಸ್ಸಾರ್ಟಿಸಿ ಎಸಿ ಬಸ್ ಸಂಚಾರದಿಂದಾಗಿ ನಿಗಮಕ್ಕೆ ಪ್ರತೀ ದಿನಕ್ಕೆ 1.50 ಲಕ್ಷ ರೂ. ನಷ್ಟ ಉಂಟಾಗುತ್ತಿತ್ತು. ಎಸಿ ಬಸ್‌ಗಳಲ್ಲಿ ಒಂದು ಲೀಟರ್ ಡೀಸೆಲ್‌ಗೆ ಪ್ರತೀ ಕಿ.ಮೀ.ಗೆ 2.5ರಿಂದ 2.8 ಕಿ.ಮೀ.ವರೆಗೆ ಮೈಲೇಜ್ ಸಿಗುತ್ತದೆ. ಕಾರ್ಯಾಚರಣೆ ವೇಳೆ 2 ಟೋಲ್ ಇದ್ದು, ಟೋಲ್ ದರದಲ್ಲಿ ಯಾವುದೇ ರೀತಿಯ ರಿಯಾಯಿತಿ ಇಲ್ಲ. ಒಟ್ಟಾರೆ ವೋಲ್ವೋ ಸಂಚಾರದಿಂದ ಪ್ರತೀ ಕಿ.ಮೀ. 60 ರೂ. ಖರ್ಚು ತಗುತ್ತಿದ್ದು, ಕೊರೊನಾಗೂ ಮುನ್ನ ಕೇವಲ 30 ರೂ. ಮಾತ್ರ ಆದಾಯ ಸಿಗುತ್ತಿದೆ. ಮಂಗಳೂರಿನಿಂದ ಮಣಿಪಾಲಕ್ಕೆ ದಿನವೊಂದಕ್ಕೆ ಒಟ್ಟು ಬಸ್‌ಗಳು 6,500 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, 1.50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು. ಶೇ.40ರಷ್ಟು ಬಸ್ ಸಂಚಾರ
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಹವಾನಿಯಂತ್ರಿತ ಬಸ್ ಸಂಚಾರ ಆರಂಭಗೊಂಡಿಲ್ಲ. ಕೋವಿಡ್‌ಗೂ ಹಿಂದೆ ಮಂಗಳೂರಿನಿಂದ ವಿವಿಧ ಕಡೆಗಳಿಗೆ ಸುಮಾರು 100ರಷ್ಟು ಕೆಎಸ್ಸಾರ್ಟಿಸಿ ಎಸಿ ಬಸ್‌ಗಳು ಸಂಚರಿಸುತ್ತಿತ್ತು. ಸದ್ಯ ಸುಮಾರು 40 ಬಸ್‌ಗಳು ಕಾರ್ಯಾಚರಿಸುತ್ತಿವೆೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಬಸ್ ಕಾರ್ಯಾಚರಣೆ ಮಾಡುತ್ತೇವೆ.
-ಕಮಲ್ ಕುಮಾರ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಡಿಟಿಒ