Advertisement

ಎಸಿ ಭರವಸೆ; ಪಾದಯಾತ್ರೆ ಕೈಬಿಟ್ಟ ವಿದ್ಯಾರ್ಥಿಗಳು

01:42 PM Sep 17, 2022 | Team Udayavani |

ಅಫಜಲಪುರ: ತಾಲೂಕಿನ ಘತ್ತರಗಾ ಗ್ರಾಮದ ಸರಕಾರಿ ಪ್ರೌಢ ಶಾಲೆಯು ಮುಜರಾಯಿ ಇಲಾಖೆಯ ನಿವೇಶನದಲ್ಲಿ ಇರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ, ಅದಕ್ಕಾಗಿ ಗ್ರಾಮದ ಬೇರೆ ಕಡೆ ಜಮೀನು ಖರೀದಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಶನಿವಾರ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅದಕ್ಕಾಗಿ ಈಗಿರುವ ಪ್ರೌಢ ಶಾಲೆಗೆ ತಾತ್ಕಾಲಿಕವಾಗಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಾಹಾಯುಕ ಆಯುಕ್ತೆ ಮೋನಾ ರೋತ ತಿಳಿಸಿದರು.

Advertisement

ತಾಲೂಕಿನ ಘತ್ತರಗಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಗ್ರಾ ಪಂ ಅಧ್ಯಕ್ಷರು, ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅವರು ಮಾತನಾಡಿದರು.

ಶನಿವಾರ ಮುಖ್ಯಮಂತ್ರಿಗಳಿಗೆ ಶಾಲಾ ಕೋಣೆಗಳನ್ನು ನಿರ್ಮಿಸುವ ಕುರಿತು ಮನವಿ ಪತ್ರ ಸಲ್ಲಿಸಲು ಎರಡರಿಂದ ಮೂವರು ಜನರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next