Advertisement

ವಿಟಿಯು ಫ‌ಲಿತಾಂಶಕ್ಕಾಗಿ ಎಬಿವಿಪಿ ಪ್ರತಿಭಟನೆ

12:33 PM Apr 21, 2017 | Team Udayavani |

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ (ವಿಟಿಯು)ದ ನಿಧಾನಗತಿಯ ಫ‌ಲಿತಾಂಶ ಪ್ರಕ್ರಿಯೆಯನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮೌಲ್ಯಮಾಪನ, ಮರು ಮೌಲ್ಯಮಾಪನ ಮತ್ತು ಹಣಕಾಸಿನ ವಿಷಯದಲ್ಲಿ ಅವೈಜಾnನಿಕ ಆಡಳಿತ ನಡೆಸುತ್ತಿದ್ದು. ಇದರಿಂದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು ರಾಮಸ್ವಾಮಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯವಾಗಿರುವ ಈ ಸಂಸ್ಥೆಯಲ್ಲಿ  ಪದೇ ಪದೇ ನಾನಾ ಸಮಸ್ಯೆ ಉಂಟಾಗುತ್ತಿದ್ದು. ವಿಷಯ ತಿಳಿದಿದ್ದರೂ ವಿವಿಯ ಆಡಳಿತ ಮಂಡಳಿ ತಟಸ್ಥವಾಗಿದೆ ಎಂದು ಅಕ್ರೋಶ ವ್ಯಕ್ತ ಪಡಿದರು.

ಕಳೆದ ಡಿಸೆಂಬರ್‌ ಮತ್ತು ಜನವರಿಯಲ್ಲಿ ನಡೆದ ಪರೀಕ್ಷೆಯ ಫ‌ಲಿತಾಂಶವನ್ನು ಮೂರು ತಿಂಗಳು ಕಳೆದರೂ ಪ್ರಕಟಿಸಿಲ್ಲ. ಈ ಕಾರಣದಿಂದ ರಾಜ್ಯದ ಲಕ್ಷಾಂತರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ವಿವಿಯ ಕಾರ್ಯವೈಖರಿ ಹದಗೆಟ್ಟದ್ದು. ನಿಧಾನಗತಿಯ ಫ‌ಲಿತಾಂಶ ದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ.

ಮುಂದಿನ ದಿನಗಳಲ್ಲಿ ಫ‌ಲಿತಾಂಶ ನಂತರ ಮರು ಮೌಲ್ಯಮಾಪನ ಕುರಿತಂತೆ ಮತ್ತೆ ಗೊಂದಲಗಳು ಮರುಕಳಿಸದಂತೆ ಎಚ್ಚರವಹಿಸಿ. ತಕ್ಷಣವೇ ಫ‌ಲಿತಾಂಶ ಪ್ರಕಟಿಸಬೇಕು, ಎದುರಾಗಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು  ಎಂದು ಒತ್ತಾ ಯಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿಯ ಶರತ್‌, ನವೀನ್‌, ಪ್ರಶಾಂತ್‌,  ಸೂರ್ಯರಾಮ, ನಿಖೀಲ್‌, ಹರೀಶ್‌, ಭರತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next