Advertisement

ದೇಶದ್ರೋಹಿಗಳ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

05:35 PM Feb 23, 2020 | Suhan S |

ನೆಲಮಂಗಲ: ರಾಷ್ಟ್ರದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿ, ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವ ಪ್ರತಿಯೊಬ್ಬರಿಗೂ ದೇಶದ ಅನ್ನ, ನೀರು ನೀಡದೆ ಗಡಿಪಾರು ಮಾಡಬೇಕು ಎಂದು ಎಬಿವಿಪಿ ಬೆಂಗಳೂರು ಜಿಲ್ಲಾ ಪ್ರಮುಖ ಭರತ್‌ ಆಗ್ರಹಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಎದುರು ತಾಲೂಕು ಎಬಿವಿಪಿ ಘಟಕದಿಂದ ದೇಶ ದ್ರೋಹಿ ಹೇಳಿಕೆ ವಿರೋಧಿಸಿ ಪ್ರತಿಭಟನೆ ಮಾಡಿದರು. ಸಿಎಎ ವಿರೋಧಿಸುವ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುವ ದೇಶದ್ರೋಹಿ ಗಳನ್ನು ಮುಲಾಜಿಲ್ಲದೆ ಕಠಿಣ ಶಿಕ್ಷೆ ನೀಡಬೇಕು. ಭಾರತದ ಅನ್ನ, ನೀರು ದೇಶದ್ರೋಹಿಗಳಿಗೆ ನೀಡಬಾರದು. ನಮ್ಮ ದೇಶದಲ್ಲಿ ಬದುಕುವುದು, ಆದರೆ ಪ್ರೀತಿ, ಪ್ರೇಮ ಮಾತ್ರ ಶತ್ರು ರಾಷ್ಟ್ರಗಳ ಮೇಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಮೂಲ್ಯ ವೇದಿಕೆಯಲ್ಲಿ ದೇಶದ್ರೋಹಿ ಘೋಷಣೆ ಮಾಡುತ್ತಿದ್ದಾಳೆ ಎಂದರೆ ಅವಳ ಹಿಂದೆ ಬಹಳಷ್ಟು ಜನ ಸಂಚುಕೋರರಿದ್ದಾರೆ. ಸೂಕ್ತ ತನಿಖೆಯಾಗ ಬೇಕು. ಕಾರ್ಯಕ್ರಮ ಆಯೋಜಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಗ್ರಾಮಾಂತರ ವಿಭಾಗ ಸಂಘಟನೆ ಕಾರ್ಯದರ್ಶಿ ಪ್ರಶಾಂತ್‌ ಮಾತನಾಡಿ, ದೇಶದ ಭದ್ರತೆ ದೃಷ್ಟಿಯಿಂದ ಅಮೂಲ್ಯನಂತಹ ದೇಶದ್ರೋಹಿಗಳನ್ನು ಮರಣದಂಡನೆ ಶಿಕ್ಷೆಯಾಗಬೇಕು. ಕಾಲೇಜು ವಿದ್ಯಾರ್ಥಿಗಳನ್ನು ಯಾವ ದಿಕ್ಕಿಗೆ ಕೆಲವು ಸಂಘಟನೆಗಳು ಕರೆದುಕೊಂಡು ಹೋಗುತ್ತಿವೆ ಎಂಬುದು ಮನಗಾಣಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಬಿವಿಪಿ ಹಿರಿಯ ಕಾರ್ಯಕರ್ತ ಸಂತೋಷ್‌, ರಾಜ್ಯಕಾರ್ಯಕಾರಣಿ ಸದಸ್ಯ ರಾಘವೇಂದ್ರ, ಜಿಲ್ಲಾ ಸಂಚಾಲಕ ಸುಧಾಕರ್‌, ತಾಲೂಕು ಸಂಚಾಲಕ ಗೌತಮ್‌,ನಗರ ಕಾರ್ಯದರ್ಶಿ ಧನುಷ್‌, ಸೌಂದರ್ಯ ಅಂಬಿಕಾ ಕಾಲೇಜು ಪ್ರಾಂಶುಪಾಲ ಸೇರಿದಂತೆವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next