Advertisement

ಎಬಿವಿಪಿ ಬಂಟ್ವಾಳ ತಾಲೂಕು ಅಭ್ಯಾಸ ವರ್ಗ ಸಂಪನ್ನ

12:50 PM Feb 06, 2022 | Team Udayavani |

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ತಾಲೂಕು ಅಭ್ಯಾಸ ವರ್ಗವು ಫೆ. 05 ರಂದು ಬಿ.ಸಿ ರೋಡಿನ ಗೀತಾಂಜಲಿ ಸಬಾ ಭವನದಲ್ಲಿ ಜರುಗಿತು.

Advertisement

ಕಾರ್ಯಕ್ರವನ್ನ ನಿವೃತ್ತ ಯೋಧ, ಇಂಡಿಯಾನಾ ಹಾಸ್ಪಿಟಲ್ ಮಂಗಳೂರು ಇಲ್ಲಿಯ Physiotherapy ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ್ ಕುಂಪಲ ಇವರು ಉದ್ಘಾಟಿಸಿದರು. ವಿದ್ಯಾರ್ಥಿ ಪರಿಷತ್ ನ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ. ವೆಂಕಟೇಶ್ ಕುಂಪಲ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀ ಲಕ್ಷ್ಮೀ ಮಠದಮೂಲೆ, ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್ ಶೆಣೈ ಉಪಸ್ಥಿತರಿದ್ದರು.

ಅಭ್ಯಾಸ ವರ್ಗದ ಮೊದಲ ಅವದಿಯಾದ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ಇವರ ನಡೆಸಿಕೊಟ್ಟರು. ಎರಡನೇ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವವನ್ನು ಹಿರಿಯ ಕಾರ್ಯಕರ್ತರಾದ ಸಂದೇಶ್ ರೈ ಮಜಕ್ಕಾರ್ ಇವರು ನಡೆಸಿಕೊಟ್ಟರು.ಅಭ್ಯಾಸ ವರ್ಗದ ಮೂರನೇ ಅವಧಿ ಹೋರಾಟವನ್ನು ಚಟುವಟಿಕೆಗಳ ಮೂಲಕ ಪ್ರಾತ್ಯಕ್ಷಿಕೆಯ ಮೂಲಕ ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನಡೆಸಿಕೊಟ್ಟರು.

Advertisement

ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನೂತನ ತಾಲೂಕು ತಂಡ ಮತ್ತು ನಗರ ತಂಡಗಳ ಜವಾಬ್ದಾರಿ ಘೋಷಣೆ ಮಾಡಿದರು.ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಸಂಚಾಲಕ ದಿನೇಶ್ ಕೊಯಿಲ, ಸಹ ಸಂಚಾಲಕ ಅಖಿಲಾಶ್ ಉಪಸ್ಥಿತರಿದ್ದರು..ಸಿದ್ದಕಟ್ಟೆ ನಗರ ಕಾರ್ಯದರ್ಶಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next