Advertisement

ವೇತನ, ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ

02:29 PM Sep 14, 2019 | Suhan S |

ಕೊರಟಗೆರೆ: ಎರಡು ತಿಂಗಳ ವೇತನ ಮತ್ತು 1 ವರ್ಷದ ವಿಶೇಷ ಭತ್ಯೆ ಜೊತೆ ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗಾರ್ಮೆಂಟ್ಸ್‌ ಎದುರು 300ಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕಸಬಾ ಹೋಬಳಿ ಬಜ್ಜನಹಳ್ಳಿ ಬಳಲಿಯ ಬಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳ ಸಂಬಳ ಮತ್ತು 1 ವರ್ಷದಿಂದ ಭವಿಷ್ಯನಿಧಿ ನೀಡದೆ ಮಾಲೀಕರು ದಬ್ಟಾಳಿಕೆ ನಡೆ ಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಗಾರ್ಮೆಂಟ್ಸ್‌ ಲೆಕ್ಕಾಧಿಕಾರಿ ರಾಘವೇಂದ್ರ ರಾಜಅರಸ್‌ ಮಾತನಾಡಿ, ಕಂಪನಿ ಪ್ರಾರಂಭ ಆದಾಗ 1600 ಕಾರ್ಮಿಕರಿದ್ದರು. ಈಗ ಕೇವಲ 300 ಕಾರ್ಮಿಕರಿದ್ದಾರೆ. ಐದು ಘಟಕದಲ್ಲಿ ನಾಲ್ಕು ಮುಚ್ಚಿದ್ದಾರೆ. ಈಗ ಗಾರ್ಮೆಂಟ್ಸ್‌ ಮಾತ್ರ ಉಳಿದಿದೆ. ನಮ್ಮ ಸಮಸ್ಯೆ ಹೇಳಿದರೆ ವರ್ಗಾವಣೆ ಅಥವಾ ಕೆಲಸದಿಂದ ವಜಾ ಮಾಡುತ್ತಾರೆ ಎಂದು ಕಿಡಿಕಾರಿದರು.

ಕಾರ್ಮಿಕ ಹರೀಶ್‌ ಮಾತನಾಡಿ, ಕಾರ್ಮಿಕರು ಪ್ರತಿಭಟನೆ ಮಾಡಿದಾಗ ಸಂಬಳ ಕೊಡುತ್ತಾರೆ. ಸಂಬಳದಿಂದ ಭವಿಷ್ಯನಿಧಿ ಕಡಿತ ಮಾಡಿ ಸರ್ಕಾರಕ್ಕೆ ಹಣ ಕಟ್ಟದೆ ನಿರ್ಲಕ್ಷ್ಯ ಮಾಡಿದ್ದಾರೆ. ನಮಗೆ ಎರಡು ತಿಂಗಳ ಸಂಬಳದ ಜೊತೆ ಒಂದು ವರ್ಷದ ಭವಿಷ್ಯನಿಧಿ ಬರಬೇಕಾಗಿದೆ ಎಂದು ಆಗ್ರಹಿಸಿದರು.

ಶಿವಮ್ಮ ಮಾತನಾಡಿ, ಆರು ವರ್ಷದಿಂದ ಗಾರ್ಮೆಂಟ್ಸ್‌ ನಂಬಿ ಜೀವನ ಮಾಡುತ್ತಿದ್ದೇನೆ. ಈಗ ಏಕಾಏಕಿ ಗಾರ್ಮೆಂಟ್ಸ್‌ ವಾಹನಗಳಿಗೆ ವಿಮೆ ಮತ್ತು ದಾಖಲೆ ಇಲ್ಲವೆಂದು ಕಂಪನಿ ವಾಹನ ನಿಲ್ಲಿಸಿದ್ದಾರೆ. ಸಮಸ್ಯೆ ಕೇಳುವ ಕಾರ್ಮಿಕ ಅಧಿಕಾರಿ ಮತ್ತು ಭವಿಷ್ಯನಿಧಿ ಅಧಿಕಾರಿಗಳು ನಾಪತ್ತೆಯಾಗಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರಾದ ರಾಕೇಶ್‌, ರಾಘವೇಂದ್ರ, ಈಶ್ವರ, ಸುರೇಶ್‌, ಲೊಕೇಶ್‌, ನಾಗರಾಜು, ಕೃಷ್ಣ, ಮೋಹನ, ಗೋಪಾಲ, ಅಂಬಿಕಾ, ಮಂಜುಳ, ಗಂಗಮ್ಮ, ರತ್ನಮ್ಮ, ಶಶಿ, ವೀರಕ್ಯಾತ, ಹರೀಶ, ರವಿಕುಮಾರ 300ಕ್ಕೂ ಹೆಚ್ಚು ಕಾರ್ಮಿಕರು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next