ಉಡುಪಿ: ಇತ್ತೀಚೆಗೆ ಜಿಲ್ಲೆಯಲ್ಲಿ ನಾರೀಶಕ್ತಿ/ ಅತ್ಯಾಚಾರ/ ಮಹಿಳಾ ಸಶಕ್ತೀಕರಣದ ಹೆಸರಿನಲ್ಲಿ ಮಹಿಳಾ ಕಾನೂನು ದುರುಪಯೋಗ ವಾಗಿ ಸುಳ್ಳು ಕೇಸುಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಪುರುಷರ ಜತೆಗೆ ಮಕ್ಕಳು, ವೃದ್ಧರು, ಮಗಳು/ ಸೊಸೆ ಹೀಗೆ ನಾನಾ ಜನರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ದ್ವೇಷದಿಂದಾಗಿ 498ಎ, ದೈಹಿಕ ಹಿಂಸೆ ಕಾಯಿದೆಗಳು ಮಹಿಳೆಯರಿಂದ ದುರುಪ ಯೋಗವಾಗುವ ಪ್ರಕರಣ ಜಾಸ್ತಿಯಾಗಿದೆ. ಕೆಲವು ಬಾರಿ ಸಾಕ್ಷಿಗಳೇ ಇಲ್ಲದೆ ಅಥವಾ ಸುಳ್ಳು ಸಾಕ್ಷಿಗಳಿಂದ ಪ್ರಕರಣ ದಾಖಲಾಗುತ್ತಿದೆ. ಈ ಬಗ್ಗೆ ಪ್ರಾಥಮಿಕ ಹಂತದಲ್ಲೇ ಸಮಗ್ರ ಪರಿಶೀಲನೆ ಕೈಗೊಂಡು ಬಳಿಕವೇ ಪ್ರಕರಣ ದಾಖಲಿಸುವಂತೆ ಸಾರ್ವಜನಿಕರ ವತಿಯಿಂದ ಎಸ್‌ಪಿಯವರ ಪರವಾಗಿ ಜಿಲ್ಲಾ ಹೆಚ್ಚುವರಿ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಮಹಿಳಾ ಕಾನೂನುಗಳು ದುರುಪಯೋಗದ ಜತೆ ವ್ಯಕ್ತಿಗಳ ಹೆಸರು ಸತ್ಯಾಸತ್ಯತೆ ನಿರ್ಣಯವಾಗದೆ ಮಾಧ್ಯ ಮಗಳಲ್ಲೂ ಭಿತ್ತರವಾಗುತ್ತಿದ್ದು ಏನೂ ತಪ್ಪು ಮಾಡದವರ ಬಗ್ಗೆ ಮಾನಹಾನಿ ಆಗುತ್ತಿದೆ. ಈ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳು ಕೇಸು ದಾಖಲಿಸುವಾಗಲೂ ಸರಿಯಾದ ಮಾರ್ಗ ಪಾಲಿಸುವ ಕುರಿತು ಕೋರಲಾಯಿತು.
ಅಮಿತ್ ಶೆಟ್ಟಿ ಕುಂಭಾಸಿ, ಶರಣ್ ಶೆಟ್ಟಿ ಮುಂಡ್ಕೂರು, ಕೆ.ಚಂದ್ರಶೇಖರ್ ಶೆಟ್ಟಿ ಕೋಟ, ಸರಿತಾ ಶೆಟ್ಟಿ ಮುಂಡ್ಕೂರು, ರೇಖಾ ಶೆಟ್ಟಿ ಸಾರ್ವಜನಿಕರ ಪರವಾಗಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಪ್ರಕರಣಗಳಲ್ಲಿ ಒಟ್ಟಾರೆ ಅನ್ಯಾಯವಾಗುತ್ತಿರುವುದರ ಬಗ್ಗೆ ನಾವು “ಮೈ ನೇಶನ್’ ಮೊದಲಾದ ಎನ್‌ಜಿಒ ಜತೆ ಸೇರಿ ಜನಜಾಗೃತಿ ಮೂಡಿಸಲು ಯತ್ನಿಸುತ್ತಿದ್ದೇವೆ. ದೇಶದಲ್ಲಿ ಸುಮಾರು 15,000 ಸದಸ್ಯರು ಇಂತಹ ಆಂದೋಲನದಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೇ.87.8 ಪ್ರಕರಣಗಳು ಬಿದ್ದುr ಹೋಗುತ್ತಿರುವುದನ್ನು ಕಂಡಾಗ ಸುಳ್ಳು ಕೇಸುಗಳೆನ್ನುವುದು ಸಾಬೀತಾಗುತ್ತಿದೆ.
ಕೌಟುಂಬಿಕ ಸದಸ್ಯರ ಜತೆ ಕೌನ್ಸೆಲಿಂಗ್ ನಡೆಸದೆ ನ್ಯಾಯಾಲಯಗಳಲ್ಲಿಯೇ ಕಾಲ ಕಳೆದು ಹೋಗುತ್ತಿರುವುದು ಕಳವಳಕಾರಿ ಎಂದು ಅಮಿತ್ ಶೆಟ್ಟಿ ಕುಂಭಾಸಿ ಮತ್ತು ಶರಣ್ ಶೆಟ್ಟಿ ತಿಳಿಸಿದರು.