ಚಿಕ್ಕಬಳ್ಳಾಪುರ: ಆರೋಗ್ಯ ಸಚಿವಸುಧಾಕರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪ್ರಕರಣ ಸಂಬಂಧ ಇಬ್ಬರುಜೈಲುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಂತಾಮಣಿ ಮೂಲದ ಗಣೇಶ್,ಶಶಿಕುಮಾರ್ ಬಂಧಿತರು.
ಎರಡುದಿನಗಳ ಹಿಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಂತಾಮಣಿ ಮೂಲದ24 ವರ್ಷದ ಅನುಪಮಾ ಎಂಬ 8ತಿಂಗಳ ಗರ್ಭಿಣಿ ಕೋವಿಡ್‌ಸೋಂಕಿನಿಂದ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆಕೆಯಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಸರ್ಕಾರ, ಸಚಿವ ಸುಧಾಕರ್, ವೈದ್ಯರವಿರುದ್ಧ ಅವಾಚ್ಯ ಪದ ಬಳಸಿ ಆಕ್ರೋಶ ಹೊರಹಾಕಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಚಿವರು ಸಹ ಮುಜುಗರ ಅನುಭವಿಸುವಂತಾಗಿತ್ತು. ದೂರಿನನ್ವಯಸದ್ಯ ಮೃತಳ ತಂದೆ ಗಣೇಶ್, ಸಹೋದರಶಶಿಕುಮಾರ್ ನನ್ನು ನ್ಯಾಯಾಂಗಬಂಧನಕ್ಕೆ ಪ್ರಕರಣ ದಾಖಲಿಸಿದ್ದ ಚಿಕ್ಕಬಳ್ಳಾಪುರ ನಗರ ಪೊಲೀಸರುಒಪ್ಪಿಸಿದ್ದಾರೆ.
ಬಿಡುಗಡೆಗೆ ಆಗ್ರಹ: ಆರೋಗ್ಯ ಸಚಿವಡಾ.ಕೆ.ಸುಧಾಕರ್ ಅವರನ್ನು ಅವಾಚ್ಯಶಬ್ಧಗಳಿಂದ ನಿಂಧಿಸಿಬಂಧನಕ್ಕೊಳಗಾಗಿರುವ ಗಣೇಶ್,ಅವರ ಪುತ್ರ ಶಶಿಕುಮಾರ್ ಅವರನ್ನುಕೂಡಲೇ ಬಿಡುಗಡೆ ಮಾಡಬೇಕೆಂದುಎನ್‌ಎಸ್‌ಯುಐ ರಾಜ್ಯ ಸಂಚಾಲಕಕಂದಲಗುರ್ಕಿ ಮುನೀಂದ್ರಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆನೀಡಿರುವ ಅವರು, ಪುತ್ರಿ ಕಳೆದಕೊಂಡಗಣೇಶ್, ಅವರ ಪುತ್ರ ಶಶಿಕುಮಾರ್‌ನೋವಿನಿಂದ ತಮ್ಮ ಆಕ್ರೋಶವ್ಯಕ ¤ಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿಅವರನ್ನು ಬಂಧಿಸಿರುವುದು ಸರಿಯಲ್ಲ.ಕೂಡಲೇ ಅವರನ್ನು ಬಿಡುಗಡೆಮಾಡಬೇಕೆಂದು ಒತ್ತಾಯಿಸಿದ್ದಾರೆ.