ದಾವಣಗೆರೆ: ತಬ್ಲಿಕ್ ಉಲ್ ಜಮಾಯತ್ ಟ್ರಸ್ಟ್ ಆಡಳಿತಾಧಿಕಾರಿ ಅಧಿಕಾರವಧಿ ವಿಸ್ತರಣೆ, ಮಸೀದಿಗೆ ಸಂಬಂಧಪಟ್ಟ ಆಸ್ತಿ, ಹಣದ ಬಗ್ಗೆ ನಿರ್ಗಮಿತ ಕಾರ್ಯದರ್ಶಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ಭಗತ್‌ಸಿಂಗ್ ನಗರದ ಮುಸ್ಲಿಂ ಸಮಾಜದವರು ಪ್ರತಿಭಟನೆ ನಡೆಸಿ, ಜಿಲ್ಲಾ ವಕ್³ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ತಬ್ಲಿಕ್ ಉಲ್ ಜಮಾಯತ್ ಟ್ರಸ್ಟ್‌ನ ನಿರ್ಗಮಿತ ಕಾರ್ಯದರ್ಶಿ ಸ್ಟಾರ್ ಎಚ್.ಕೆ. ಅಬ್ದುಲ್ ಜಬ್ಟಾರ್ ಅಧಿಕಾರವಧಿಯಲ್ಲಿ ನಡೆದ ದುರುಪಯೋಗದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕ್³ ಮಂಡಳಿಗೆ ಮನವಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ಸಮಾಜ ಬಾಂಧವರು ಪ್ರಯತ್ನ ಪಟ್ಟು ಎಚ್.ಕೆ. ಅಬ್ದುಲ್ ಜಬ್ಟಾರ್ ಅಧಿಕಾರವಧಿ ಮೊಟಕುಗೊಳಿಸಿ, ವಕ್ಫ್ ಸಚಿವರಿಂದ ಅನುಮತಿ ಪಡೆದು, ಆಡಳಿತಾಧಿಕಾರಿ ನೇಮಕ ಆಗುವಂತೆ ಮಾಡಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ತಬ್ಲಿಕ್ ಉಲ್ ಜಮಾಯತ್ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ ಇಲ್ಲವೇ ಚುನಾವಣೆಗೆ ಮುಂದಾಗುತ್ತಿದ್ದಂತೆ ನಿಗರ್ಮಿತ ಕಾರ್ಯದರ್ಶಿ ಎಚ್.ಕೆ. ಅಬ್ದುಲ್ ಜಬ್ಟಾರ್ ರಾಜಕೀಯ ಪ್ರಭಾವ ಬೀರಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ವಕ್ಫ್ ಮಂಡಳಿ ಅಧಿಕಾರಿಗಳು ಕ್ರಮ ಈ ಹಿಂದೆ ನೇಮಕವಾಗಿದ್ದ ಆಡಳಿತಾಧಿಕಾರಿ ಅಧಿಕಾರವಧಿ ವಿಸ್ತರಿಸಬೇಕು.
ನಿರ್ಗಮಿತ ಕಾರ್ಯದರ್ಶಿಯಿಂದ ನಾಲ್ಕು ನಿವೇಶನ, ಹಣ ವಾಪಾಸ್ಸು ಪಡೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಜಿಲ್ಲಾ ವಕ್ಫ್ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೋಳಿ ಇಬ್ರಾಹಿಂ, ಇಮಿ¤ಯಾಜ್, ಹಜರ್‌ಅಲಿ, ಇಸಮ್ ಸಾಬ್, ರಿಯಾಜ್ ಇತರರು ಇದ್ದರು.