Advertisement

ಬಿಜೆಪಿಯಿಂದ ಅಧಿಕಾರ ದುರ್ಬಳಕೆ: ಪಾಟೀಲ

02:33 PM Apr 22, 2019 | Team Udayavani |

ಗಜೇಂದ್ರಗಡ: ಸಮಗ್ರ ಅಭಿವೃದ್ಧಿ ಕಾಣದೇ ಹಿಂದುಳಿದಿರುವ ಹಾವೇರಿ ಕ್ಷೇತ್ರದ ಗ್ರಾಮಾಭಿವೃದ್ಧಿಗೆ ಡಿ.ಆರ್‌. ಪಾಟೀಲರ ಗೆಲುವು ಅನಿವಾರ್ಯ. ಹೀಗಾಗಿ ಅಭಿವೃದ್ಧಿ ಬಯಸಿರುವ ಕ್ಷೇತ್ರದ ಜನತೆ ಬದಲಾವಣೆಗೆ ನಾಂದಿ ಹಾಡಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಹೇಳಿದರು.

Advertisement

ಪಟ್ಟಣದ ದುರ್ಗಾ ವೃತ್ತದಲ್ಲಿ ರವಿವಾರ ಅಭ್ಯರ್ಥಿ ಡಿ.ಆರ್‌. ಪಾಟೀಲ ಪರ ಪ್ರಚಾರದಲ್ಲಿ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ಹಾವೇರಿ ಲೋಕಸಭೆ ಕ್ಷೇತ್ರ ಅಭಿವೃದ್ಧಿಯಿಂದ ಸಂಪೂರ್ಣ ವಂಚಿತವಾಗಿದೆ. ಕೇಂದ್ರದಿಂದ ಯಾವೊಂದು ಹೇಳಿಕೊಳ್ಳುವ ಯೋಜನೆ ಜಾರಿಗೊಳಿಸಿಲ್ಲ. ಈ ಭಾಗದ ಜನತೆ ಮುಗ್ಧತೆ ದುರುಪಯೋಗಪಡಿಸಿಕೊಂಡಿರುವ ಬಿಜೆಪಿಗರು ಅಧಿಕಾರ ದುರ್ಬಳಕೆ ಮಾಡಿಕೊಂಡು ಆಡಳಿತ ನಡೆಸಿದ್ದಾರೆ. ಇಂಥವರ ಆಡಳಿತದಿಂದ ಬೇಸತ್ತಿರುವ ಮತದಾರರು ಈ ಬಾರಿ ಅಭಿವೃದ್ಧಿಗೆ ಸಂಪೂರ್ಣ ಬೆಂಬಲಿಸಲು ನಿರ್ಧರಿಸಿದ್ದು, ಡಿ.ಆರ್‌. ಪಾಟೀಲ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಅಶೋಕ ಬಾಗಮಾರ ಮಾತನಾಡಿ, ಹಸಿ ಸುಳ್ಳು ಹೇಳುವುದಲ್ಲದೇ, ಬಣ್ಣದ ಮಾತುಗಳನ್ನಾಡಿ ಮತದಾರರ ದಿಕ್ಕು ತಪ್ಪಿಸುವ ಬಿಜೆಪಿ ಆಟ ಈ ಬಾರಿ ಚುನಾವಣೆಯಲ್ಲಿ ನಡೆಯೋದಿಲ್ಲ. ಈಗಾಗಲೇ ದೇಶಾದ್ಯಂತ ಪ್ರಧಾನಿ ಮೋದಿ ಸುಳ್ಳಿನಾಟಕ್ಕೆ ಬ್ರೇಕ್‌ ಹಾಕುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸುಳ್ಳಿನ ಭರವಸೆಗಳಿಗೆ ಮತದಾರರು ಸೊಪ್ಪು ಹಾಕುವುದಿಲ್ಲ ಎಂದರು.

ಇದಕ್ಕೂ ಮುನ್ನ ಕಾಲಕಾಲೇಶ್ವರ ವೃತ್ತದಿಂದ ಆರಂಭವಾದ ಬೃಹತ್‌ ರೋಡ್‌ ಶೋ ಜೋಡು ರಸ್ತೆ, ಹಿರೇಬಜಾರ್‌, ಕಟ್ಟಿಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ ಮೂಲಕ ದುರ್ಗಾ ವೃತ್ತದಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

Advertisement

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಐ.ಎಸ್‌. ಪಾಟೀಲ, ವೀರಣ್ಣ ಸೊನ್ನದ, ಶಿವರಾಜ ಘೋರ್ಪಡೆ, ಪರಶುರಾಮ ಅಳಗವಾಡಿ, ಯಲ್ಲಪ್ಪ ಬಂಕದ, ಎಸ್‌.ಎಂ. ಆರಗಿದ್ದಿ, ಎಂ.ವೈ. ಅವಧೂತ್‌, ಮಾರುತೆಪ್ಪ ಕಲ್ಲೋಡ್ಡರ, ಮುರ್ತುಜಾ ಡಾಲಾಯತ್‌, ರಾಜು ಸಾಂಗ್ಲಿಕಾರ, ಶಾರದಾ ರಾಠೊಡ, ಸುಮಂಗಲಾ ಇಟಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next