ಯಾದಗಿರಿ: ಸಾರಿಗೆ ಹಾಗೂ ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಕುರಿತು ಅವಹೇಳನ ಕಾರಿಯಾಗಿ ನಿಂದಿಸಿದ್ದ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ರೆಡ್ಡಿ ಜನಸಂಘ ಯುವ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಸಿದ್ದುಪ್ರಕಾಶರೆಡ್ಡಿ ಅವರ ನೇತೃತ್ವದಲ್ಲಿ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಚಿವ ರಾಮಲಿಂಗಾರೆಡ್ಡಿ ಅವರ ವಿರುದ್ಧ ಮನುಗೌಡ ದೊಡ್ಡಬಳ್ಳಾಪುರ ಎಂಬ ವ್ಯಕ್ತಿಯು ಇತ್ತಿಚೆಗೆ ಅವಹೇಳನಕಾರಿಯಾಗಿ ನಿಂದನೆ ಮಾಡಿದ್ದು ಈಗಾಗಲೇ ಆರೋಪಿಗೆ ಪೊಲೀಸರು ಬಂಧಿಸಿದ್ದಾರೆ.ಕೂಡಲೇ ನಿಂದಿಸಿರುವ ಆರೋಪಿಗೆ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಪ್ರತಿಭಟನೆ ನಿರತರು ಒತ್ತಾಯಿಸಿದರು.
ಈ ವೇಳೆ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಸಿದ್ದುಪ್ರಕಾಶರೆಡ್ಡಿ ಅವರು ಮಾತನಾಡಿ, ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯದ ಸರ್ವ ಜನಾಂಗದ ಎಳ್ಗೆ ಬಯಸುವ ಮುತ್ಸದ್ದಿ ರಾಜಕೀಯ ನಾಯಕರಾಗಿದ್ದಾರೆ.ಬಡವರು ,ನಿರ್ಗತರಿಗೆ ಸಹಾಯ ಮಾಡುತ್ತಾ ಅನೇಕ ಸೇವೆಗೈಯ್ಯುತ್ತಿದ್ದಾರೆ. ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಾರೆ.ರಾಜಕೀಯದಲ್ಲಿ 40 ವರ್ಷಗಳ ಕಾಲ ಜನ ಸೇವೆ ಮಾಡುತ್ತಿದ್ದಾರೆ.ರಾಜ್ಯದ ಅಭಿವೃದ್ಧಿಗಾಗಿ ತಮ್ಮದೆ ಕೊಡುಗೆ ನೀಡುತ್ತಿದ್ದಾರೆ.ಸಾರಿಗೆ ಕ್ಷೇತ್ರದಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಇಂತಹ ನಾಯಕರ ವಿರುದ್ದ ಅವಹೇಳನ ಕಾರಿಯಾಗಿ ಹೇಳಿಕೆ ನೀಡಿರುವ ಮನೆಗೌಡ ಅವರ ಮನಸ್ಥಿತಿ ಸರಿಯಲ್ಲ.ಇಂತಹ ಹೇಳಿಕೆ ನೀಡಿರುವ ವ್ಯಕ್ತಿಗೆ ಯಾರು ಪ್ರಚೋದನೆ ನೀಡಿದ್ದಾರೆಂದು ಪೊಲೀಸರು ತನೀಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ನಂತರ ಕಾಂಗ್ರೆಸ್ ಮುಖಂಡ ಮಾಣೀಕರೆಡ್ಡಿ ಕುರಕುಂದಿ ಮಾತನಾಡಿ, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಿಂದನೆ ಮಾಡಿರುವ ಕ್ರಮ ಸರಿಯಲ್ಲ.ಇಂತಹ ಹೇಳಿಕೆ ನೀಡಿರುವ ವ್ಯಕ್ತಿಗೆ ಪೊಲೀಸರು ಕಠಿಣ ಶಿಕ್ಷೆ ನೀಡಬೇಕು. ಸಾರ್ವಜನಿಕವಾಗಿ ಕ್ಷಮೆ ಕೋರಬೇಕೆಂದರು.ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.ನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿದ್ದುಗೌಡ ಕಾಮರೆಡ್ಡಿ,ಸಿದ್ದುರೆಡ್ಡಿ ತಂಗಡಗಿ,ಚಂದ್ರಶೇಖರ ಪಾಟೀಲ ಕಂದಳ್ಳಿ,ಬಾಬುಗೌಡ ಮಾಚನೂರು,ಮಂಜು ಹೂಗಾರ,ಹಣಮಂತರಾಯ ಮಾಲಿಪಾಟೀಲ ತೆಕರಾಳ,ವೆಂಕಟರೆಡ್ಡಿ ಅಬ್ಬೆತುಮಕೂರು,ಸಂಜೀವ್ ಕವಲಿ,ಬಸ್ಸು ನಾಟೇಕರ್ ಸೇರಿದಂತೆ ಅನೇಕರಿದ್ದರು.