ದುಬಾೖ: ಯುಎಇಯ ಅಬುಧಾಬಿಯಲ್ಲಿ ನಿರ್ಮಾಣಗೊಳ್ಳಲಿರುವ ಮೊದಲ ಹಿಂದೂ ಮಂದಿರದ ಅಂತಿಮ ವಿನ್ಯಾಸದ ವೀಡಿಯೋವನ್ನು ದೇವಾಲಯ ನಿರ್ವಹಣಾ ಮಂಡಳಿ ಬಿಡುಗಡೆಗೊಳಿಸಿದೆ. ಮಂದಿರ ಹೇಗಿರಲಿದೆ ಎನ್ನುವುದನ್ನು ಸಾರುವ ವೀಡಿಯೋವೊಂದನ್ನು ಈಗ ಬಿಡುಗೊಳಿಸಲಾಗಿದ್ದು, ಇದರ ಜತೆಯಲ್ಲೇ, ಭಾರತದಲ್ಲಿ ಸಿದ್ಧವಾಗುತ್ತಿರುವ ಕಲ್ಲಿನ ಕಂಬಗಳ ಚಿತ್ರಗಳನ್ನೂ ಮೊದಲ ಬಾರಿ ಬಿಡುಗಡೆಗೊಳಿಸಲಾಗಿದೆ.
ಈ ಮಂದಿರದಲ್ಲಿ ಹಿಂದೂ ಮಹಾಕಾವ್ಯಗಳು, ಧರ್ಮಗ್ರಂಥಗಳು, ಪುರಾಣ ಕಥೆಗಳನ್ನು ಸಾರುವ ಕೆತ್ತನೆಗಳು, ಚಿತ್ರಗಳು ಇರಲಿವೆ. ಅಲ್ಲದೇ, ಗಲ್ಫ್ ರಾಷ್ಟ್ರಗಳಲ್ಲಿ ಪ್ರಖ್ಯಾತವಾಗಿರುವ ಕಲಾಪ್ರಕಾರಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ.
ಭಾವೈಕ್ಯದ ಸಂಕೇತವಾಗಿ ಗುರುತಿಸಿಕೊಳ್ಳಲಿರುವ ಈ ಮಂದಿರದ ಶಂಕುಸ್ಥಾಪನೆಯನ್ನು 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದರು. “”ಈ ದೇವಾಲಯವು ವಾಸ್ತುಶಿಲ್ಪ, ವೈಭವ, ವೈಶಿಷ್ಟéದಿಂದ ಕೂಡಿರುವುದಷ್ಟೇ ಅಲ್ಲದೇ, ವಿಶ್ವಾದ್ಯಂತ ಸಮುದಾಯಗಳಿಗೆ ವಸುಧೈವ ಕುಟುಂಬಕಂ ಸಂದೇಶವನ್ನು ಸಾರುತ್ತದೆ” ಎಂದಿದ್ದರು ಮೋದಿ.