Advertisement

Abu Dhabi: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕ-ಅಧ್ಯಕ್ಷರ ನೇಮಕ

03:46 PM Sep 23, 2023 | Team Udayavani |

ಅಬುಧಾಬಿ: ಇಲ್ಲಿ ಕಾಸರಗೋಡಿನ ಗಡಿನಾಡ ಸ್ವಾಭಿಮಾನಿ ಕನ್ನಡಿಗರು ಕನ್ನಡದ ಕಂಪನ್ನು ಪಸರಿಸಲು ಕಟ್ಟಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ 2023ನೇ ಸಾಲಿನ ವಾರ್ಷಿಕ ಸಭೆಯು ಸೆ.10ರಂದು ಅಬು ಹೈಲ್‌ ಬಳಿ ಯಶಸ್ವಿಯಾಗಿ ನಡೆಯಿತು. ಇದೇ ವೇಳೆ 2023-24ನೇ ಸಾಲಿಗೆ ನೂತನ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು.

Advertisement

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಮುಖ್ಯಸ್ಥರಾದ ಸುಬ್ಬಯ್ಯಕಟ್ಟೆ ಅವರು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಇಬ್ರಾಹಿಂ ಖಲೀಲ್‌, ಬೇಕಲ್‌ ರಾಜ್‌ ಮತ್ತು ಸದನ್‌ ದಾಸ್‌ ಮುಂತಾದವರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ನ್ಯಾ| ಇಬ್ರಾಹಿಂ ಖಲೀಲ್‌, ಉಪಾಧ್ಯಕ್ಷರು: ಮಂಜುನಾಥ ಕಾಸರಗೋಡು, ಶಾಫಿ ಭಂಡಶಾಲೆ, ಯೂಸುಫ್ ಶೇಣಿ, ಅಶ್ರಫ್ ಪಾವೂರ್‌, ಜೋಯ್‌ ವಿನ್‌ಸೆಂಟ್‌ ಕಯ್ನಾರ್‌, ಪ್ರಧಾನ ಕಾರ್ಯದರ್ಶಿ: ಅಮರದೀಪ್‌ ಕಲ್ಲೂರಾಯ, ಸಲಹಾ ಸಮಿತಿಯ ಗೌರವ ಅಧ್ಯಕ್ಷರು: ಅಬ್ದುಲ್ಲ ಮದುಮೂಲೆ, ಸಲಹಾ ಸಮಿತಿಯ ಸದಸ್ಯರು: ಡಾ| ಅಬ್ದುಲ್‌ ರಹಿಮಾನ್‌ ಬಾವ,ಸದನ್‌ ದಾಸ್‌ ಶಿರೂರು, ಸುಗಂದರಾಜ್‌ ಬೇಕಲ್‌ , ಅಮೀನ್‌ ಸಾಹೇಬ್‌ ಮಂಜೇಶ್ವರ, ಅಲಿ ಸಾಗ್‌, ಮೊಯಿದ್ದಿನ್‌ ಬಾವ ಹೊಸಂಗಡಿ, ಅಬ್ದುಲ್‌ ರಶೀದ್‌ ಬಾಯಾರ್‌, ಜತೆ ಕಾರ್ಯದರ್ಶಿ: ಆಸೀಫ್ ಹೊಸಂಗಡಿ, ಅನೀಶ್‌ ಶೆಟ್ಟಿ ಮಡಂದೂರು, ಅಶ್ರಫ್ ಕ್ಲಾಸಿಕ್‌,
ಅಶ್ರಫ್ ಬಾಯಾರ್‌, ಅಮಾನ್‌ ಮೀಂಜ, ಕೋಶಾಧಿಕಾರಿ :ಇಬ್ರಾಹಿಂ ಬಾಜೂರಿ, ಸಾಂಸ್ಕೃತಿಕ ಸಂಯೋಜಕರು: ರಾಮಚಂದ್ರ ಬೆದ್ರಡ್ಕ, ಮಾಧ್ಯಮ ಸಂಯೋಜಕರು: ವಿಜಯ ಕುಮಾರ್‌ ಶೆಟ್ಟಿ ಗಾಣದಮೂಲೆ ಮಜಿಬೈಲ್‌ , ಕ್ರೀಡಾ ಸಂಯೋಜಕರು: ಹಸ್ಸನ್‌ ಕುಡ್ವ

ವರದಿ: ರಫೀಕಲಿ ದುಬೈ

 

Advertisement
Advertisement

Udayavani is now on Telegram. Click here to join our channel and stay updated with the latest news.

Next