ಮೊದಲಿನಿಂದಲೂ ವಿದೇಶ ಸುತ್ತಿ ನೇೂಡಿ ಬರ ಬೇಕು ಅನ್ನುವ ಕನಸನ್ನುಕಂಡವ ನಾನಲ್ಲ. ಅಂತೂ ಮನಸ್ಸಿನಲ್ಲೂ ಏಣಿಸದ ಅವಕಾಶವೊಂದು ಕೂಡಿ ಬಂತು. ಸರಿ ಮಾತೃ ಭೂಮಿಯಿಂದ ಹೊರದೇಶಕ್ಕೆ ಹೇೂಗ ಬೇಕಾದ ಅನಿವಾರ್ಯತೆ. ಸಂಸಾರ ಸಮೇತ ಹೊರಟೆ ಬಿಟ್ಟೆ ಯು.ಎ.ಇ.ರಾಜಧಾನಿ ಅಬುಧಾಬಿಯ ಕಡೆಗೆ.
ನನ್ನ ಮೊದಲ ವಿದೇಶಿ ಪ್ರವಾಸಕ್ಕೆ ಸಾಕ್ಷಿಯಾದ ದೇಶವೆಂದರೆ ಬಹು ಹಿಂದಿನಿಂದಲೂ ನಾನು ಹೇಳಿ ಕೇಳಿದ ದೇಶವೆಂದರೆ ಗಲ್ಫ್ ಪ್ರಾಂತ್ಯದ ಪ್ರಮುಖ ನಗರ ಅಬುಧಾಬಿ ಅರ್ಥಾತ್ ಯು.ಎ.ಇ.ರಾಜಧಾನಿ. ಇದೊಂದು ಮರಳು ನೆಲದ ಶ್ರೀಮಂತ ರಾಷ್ಟ್ರ ಆಂತ ಕೇಳಿದ್ದೆ ಮಾತ್ರವಲ್ಲ ನಾನ್ನೊಬ್ಬ ವಿದೇಶಾಂಗ ನೀತಿಪಾಠ ಮಾಡುವ ಪ್ರಾಧ್ಯಾಪಕನಾಗಿ” ಒಪೆಕ್” ರಾಷ್ಟ್ರಗಳ ಜೊತೆ ಭಾರತದ ಸಂಬಂಧಗಳನ್ನು ಓದಿದ ಅನುಭವವೂ ಇತ್ತು. ಆದರೆ ಈಗ ಇದನ್ನು ಕಣ್ಣಾರೆ ಕಾಣುವ ಭಾಗ್ಯ ನನಗೆ ಒದಗಿ ಬಂದಿದೆ ಅನ್ನುವುದು ತುಂಬಾ ಖುಷಿ ನೀಡಿದೆ. ಗಲ್ಫ್ ರಾಷ್ಟ್ರ ಗಳ ಪ್ರಮುಖ ನಗರಗಳಲ್ಲಿ ದುಬೈ ಅಬುಧಾಬಿಗಳಲ್ಲಿ ಕನಾ೯ಟಕದ ಲಕ್ಷಾಂತರ ಮಂದಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ ಅನ್ನುವ ಬಗ್ಗೆಯೂ ನನಗೆ ಮೊದಲೇ ಅರಿವಿತ್ತು.
ಅಬುಧಾಬಿ ಅಂದ ತಕ್ಷಣವೇ ನನಗೆ ಮೊದಲಾಗಿ ನೆನಪಿಗೆ ಬಂದ ವ್ಯಕ್ತಿ ಅಂದರೆ ನಮ್ಮ ಪರೀಕದ ಚೆನ್ನಿ ಬೆಟ್ಟು ವಸಂತ ಶೆಟ್ಟಿಯವರ ಅಣ್ಣ ಸವೇೂ೯ತ್ತಮ ಶೆಟ್ಟಿಯವರು.ನಾನು ಅಬುಧಾಬಿಗೆ ಹೇೂಗುತ್ತೇನೆ ಅನ್ನುವ ಸುದ್ದಿ ತಿಳಿದ ನನ್ನ ಆತ್ಮೀಯ ಸ್ನೇಹಿತರಾದ ಪರೀಕ ಚೆನ್ನಿ ಬೆಟ್ಟು ವಸಂತ ಶೆಟ್ಟಿಯವರು ತಮ್ಮ ಅಣ್ಣನವರಿಗೆ ವಿಷಯ ಮೊದಲೇ ತಿಳಿಸಿ ಬಿಟ್ಟಿದ್ದರು.
ಸಂದರ್ಭಗಳು ಹೇಗೆ ಕಾಕತಾಳೀಯವಾಗಿಕೂಡಿ ಬರುತ್ತದೆ ಅನ್ನುವುದಕ್ಕೆ ಸಾಕ್ಷಿಯಾದ ಪ್ರಸಂಗ ನೇೂಡಿ. ಅಬುಧಾಬಿಗೆ ಹೇೂಗುವ ವಿಮಾನಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ಒಳಗೆ ಪ್ರವೇಶ ಮಾಡುವಾಗಲೇ ನನ್ನ ಗಮನ ಸೆಳೆದ ವ್ಯಕ್ತಿ ಅಂದರೆ ಅಬುಧಾಬಿಯ ಹೀರೆುಾ ಸವೇೂ ೯ತ್ತಮ ಶೆಟ್ಟಿಯವರು. ಅದು ಕೂಡಾ ನಾನು ಅವರನ್ನು. ಮೊದಲ ಬಾರಿಗೆ ನೇೂಡಿದ್ದು. ಇವರನ್ನು ಎಲ್ಲಿಯೆಾ ನೇೂಡಿದ ಅನುಭವಕ್ಕೆ ಬಂತು. ಅದು ಹೇಗೆ ಕೇಳಿದರೆ ಅವರ ಹೆಸರು ಕೇಳಿದ್ದೇನೆ ಅದೇ ರೀತಿಯಲ್ಲಿ ಅವರ ಮುಖವನ್ನು ಪತ್ರಿಕೆಯಲ್ಲಿ ನೇೂಡಿದ್ದೇನೆ. ಬಹು ಹಿಂದೆ ಉದಯವಾಣಿಯ ಗಲ್ಫ್ ಸುದ್ದಿಗಳಲ್ಲಿ ಪ್ರಮುಖವಾಗಿ ಬಿಂಬಿತವಾದ ಅಬುಧಾಬಿಯ ಸಾಧಕ ವ್ಯಕ್ತಿ ಅಂದರೆ ಅದು ಸವೇೂ೯ತ್ತಮ ಶೆಟ್ಟಿಯವರು. ಹಾಗಾಗಿ ತಕ್ಷಣವೇ ಅವರನ್ನು ಗುರುತಿಸಿ ಬಿಟ್ಟೆ.ಸರ್..ನೀ..ವು..ಸವೇೂ೯ತ್ತಮ ಶೆಟ್ಟಿಯವರು ಅಲ್ವಾ ಕೇಳಿದೆ..ಹೌದು..ನೀವು? ಅಂತ ಅವರುಕೇಳಿದರು ನಾ..ನು..ಸುರೇಂದ್ರ ನಾಥ ಶೆಟ್ಟಿ ..ಓ..ಹೇೂ..ನನ್ನ ತಮ್ಮ ವಸಂತ ಮೊದಲೇ ಸುದ್ದಿ ಮುಟ್ಟಿಸಿದ್ದಾನೆ..ಅನ್ನುವ ಮಾತಿನೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಉಭಯ ಕುಶಲೇೂಪರಿಯ ಮಾತುಕತೆ ಮುಂದುವರಿದೆ ಬಿಟ್ಟಿತು.
ಅಬುಧಾಬಿಯಲ್ಲಿ ಕನ್ನಡದ ಸಾಂಸ್ಕೃತಿಕ ರಾಯ ಭಾರಿ ಎಂದೇ ಖ್ಯಾತರಾದ ಸವೇೂ೯ತ್ತಮಣ್ಣ ಪರೀಕದಿಂದ ಮುಂಬೈ ಮುಂಬೈ ಯಿಂದ ಅಬುಧಾಬಿಗೆ ತಮ್ಮ ಬದುಕಿನಲ್ಲಿ ಸಾಗಿ ಬಂದ ಸಾಧನೆಗಳ ಹೆಜ್ಜೆಗಳನ್ನೆ ತಮ್ಮ ಕವಿವಾಣಿಯ ಮೂಲಕ ನನ್ನ ಮುಂದೆ ತೆರೆದೇ ಬಿಟ್ಟರು.ಅವರ ಸಾಧನೆಯ ಪೂಣ೯ ಚಿತ್ರಣವನ್ನು ಮುಂದಿನ ನನ್ನ ವಿಶೇಷ ಲೇಖನದಲ್ಲಿ ಪ್ರಕಟಿಸಲಿದ್ದೇನೆ .
ಅಂತೂ ರಾತ್ರಿ ಸುಮಾರು 12.30 ಸಮಯಕ್ಕೆ ನಾನು ಮಳೆ ನಾಡಿನಿಂದ ಸೆಖೆಯ ಮರಳು ಭೂಮಿಯ ಶೀಮಂತ ದೇಶದಲ್ಲಿ ಇಳಿದು ಬಿಟ್ಟೆ.ಈಗ ಅಲ್ಲಿ ಸೆಕೆ ಕಾಲವಾದ ಕಾರಣ ಸುಮಾರು 35 ರಿಂದ 42.ಸೆಂಟಿಗ್ರೇಡ್ ಬಿಸಿತಾಪಮಾನ..ಆದರೆ ಅಲ್ಲಿನ ಪ್ರತಿಯೊಂದು ಸ್ಥಳದಲ್ಲಿ ಪ್ರವಾಸಿಗರ ಅನುಕೂಲಕ್ಕೆ ಎ.ಸಿಗಳ ಅಳವಡಿಕೆ ಸೇವೆಯೇ ನಮ್ಮನ್ನು ತಣ್ಣಾಗೆ ಮಾಡಿತ್ತು.
ಏರ್ ಪೇೂಟ೯ ಹೊರಗೆ ಬಂದ ಕೂಡಲೇ ಅತೀ ದೊಡ್ಡ ಟ್ಯಾಕ್ಸಿಗಳು ನಮಗಾಗಿಕಾಯುತ್ತಿರುತ್ತದೆ.ಅಲ್ಲಿ ಯಾವುದೆ ಚೌಕಾಸಿ ಇಲ್ಲ..ಎಲ್ಲವೂ ಕಂಪ್ಯೂಟರೇ ನಿಯಂತ್ರಣ ಮಾಡುವ ತರದಲ್ಲಿನ ವ್ಯವಹಾರ. ಕಾರು ಹೊರಟೇ ಬಿಟ್ಟಿತು.ವಿಶಾಲವಾದ ರಸ್ತೆಗಳಲ್ಲಿ ಅತೀ ವೇಗದಲ್ಲಿ ಚಲಿಸುವ ಕಾರುಗಳೇ ಜಾಸ್ತಿ.ಆ ರಸ್ತೆಯಲ್ಲಿ ಯಾವುದೇ ಲಾರಿಯಾಗಲಿ ಬಸ್ಸುಗಳು ಹಿಂದಿನಿಂದ ಮುಂದಿನಿಂದ ಓಡಿದು ನನಗೆ ಕಾಣಲೇ ಇಲ್ಲ..ರಸ್ತೆ ಬದಿಯಲ್ಲಿ ಎಲ್ಲಿಯೂ ಕೆಟ್ಟು ನಿಂತ ವಾಹನಗಳು ಕಂಡಿಲ್ಲ..ಹೆದ್ದಾರಿಗಳಲ್ಲಿ ಜನರು ಬಸ್ಸುಗಳಿಗೆ ಕಾಯುವ ಪರಿಸ್ಥಿತಿ ಅಲ್ಲಿ ನೇೂಡಿಲ್ಲ..ಹಾಗಂತ ಸವಿ೯ಸ್ ರಸ್ತೆಯಲ್ಲಿ ಅತ್ಯಂತ ವ್ಯವಸ್ಥಿತವಾದ ರಸ್ತೆ ಸುರಕ್ಷತಾ ವಿಧಾನ ವ್ಯವಸ್ಥೆ ಅಳವಡಿಸಲಾಗಿತು.ಈ ಕುರಿತಾಗಿಯೇ ಇನ್ನೊಂದು ಲೇಖನ ಬರೆಯ ಬಹುದು ಅಷ್ಟೊಂದು ಉಪಯುಕ್ತ ಮಾಹಿತಿಗಳು ಇದೆ.
ಅಂತೂ ನಮ್ಮ ಟ್ಯಾಕ್ಸಿ ಸರಿಯಾದ ಸಮಯಕ್ಕೆ ಯಾವುದೇ ಮಾತುಕತೆ ಇಲ್ಲದೆ ನಾವು ಇಳಿಯ ಬೇಕಾದ electro streetಗೆ ತಂದು ಇಳಿಸಿ ಬಿಟ್ಟ..ನಮಸ್ತೇ ಅನ್ನುವುದರ ಮೂಲಕ ತೆರಳಿ ಬಿಟ್ಟ ಟ್ಯಾಕ್ಸಿ ಡ್ರೈವರ್. ಇದೊಂದಿಷ್ಟು ನಾನು ಮೊದಲ ಬಾರಿಗೆ ವಿದೇಶಿ ಪ್ರವಾಸಕ್ಕಾಗಿ ರಾಜಧಾನಿ ಅಬುಧಾಬಿಗೆ ಬಂದು ಇಳಿದ ಸವಿ ಅನುಭವದ ಮಾತು.
ಪ್ರೊ|ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ. (ಅಬುದಾಭಿಯಿಂದ)