ಹೊಸದಿಲ್ಲಿ: ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆ ಯಲ್ಲಿ ಬಿಜೆಪಿಯು ತಾನು ಸದ್ಯಕ್ಕೆ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಎಬಿಪಿ, ಸಿ-ವೋಟರ್ ಸಂಸ್ಥೆಗಳು ನಡೆಸಿರುವ ಜಂಟಿ ಸಮೀಕ್ಷೆ ತಿಳಿಸಿದೆ. ಇನ್ನು, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ:ಇಂದು ಅನಂತ್‌ನಾಗ್ ಬರ್ತ್‌ಡೇ: ಎವರ್‌ಗ್ರೀನ್ ಹೀರೋ ಕೈಯಲ್ಲಿ ವಿಭಿನ್ನ ಪಾತ್ರಗಳು
ಸಿಎಂ ಯೋಗಿ ಆಡಳಿತವನ್ನು ಜನ ಮೆಚ್ಚಿಕೊಂಡಿದ್ದರೂ ಚುನಾವಣೆಯಲ್ಲಿ ಬಿಜೆಪಿ, ಸುಮಾರು 60 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಬಿಜೆಪಿಗೆ 257ರಿಂದ 267, ಎಸ್‌ಪಿಗೆ 109ರಿಂದ 117, ಬಿಎಸ್‌ಪಿಗೆ 12ರಿಂದ 16 ಹಾಗೂ ಇತರರಿಗೆ 6ರಿಂದ10 ಸ್ಥಾನ ಸಿಗುವ ಸಾಧ್ಯತೆಗಳಿವೆ.
ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ. ಬಿಜೆಪಿಗೆ 22-26, ಆಪ್‌ಗೆ 4-8, ಕಾಂಗ್ರೆಸ್‌ಗೆ 3ರಿಂದ 7 ಮತ್ತು ಇತರರಿಗೆ 3-7 ಸ್ಥಾನ ಸಿಗಬಹುದು. ಮಣಿಪುರದಲ್ಲಿ ಬಿಜೆಪಿಗೆ 32-36, ಕಾಂಗ್ರೆಸ್‌ಗೆ 2-6,ಎನ್‌ಪಿಎಫ್ ಗೆ 0-4 ಸ್ಥಾನ ಸಿಗಬಹುದು. ಬಿಜೆಪಿ ನೇತೃತ್ವದ ಎನ್‌ಡಿಎಗೆ46 ಸ್ಥಾನ ಲಭ್ಯವಾಗಿ ಸರಕಾರ ರಚಿಸಬಹುದು.ಕಾಂಗ್ರೆಸ್21, ಆಪ್2 ಸ್ಥಾನ, ಇತರರು1 ಸ್ಥಾನ ಗೆಲ್ಲಬಹುದು.
ಆಪ್’ಗೆ ಪಂಜಾಬ್?
ಪಂಜಾಬ್‌ನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. “ಆಮ್ ಆದ್ಮಿ ಪಾರ್ಟಿ’ಗೆ 51-57, ಕಾಂಗ್ರೆಸ್‌ಗೆ 38-46 ಸ್ಥಾನ ಸಿಗಬಹುದು. ಆದರೆ ಸ್ಥಳೀಯ ಪಕ್ಷಗಳ ನೆರವಿನಿಂದ ಆಮ್ ಆದ್ಮಿ ಪಾರ್ಟಿ (ಆಪ್) ಅಲ್ಲಿ ಅಧಿಕಾರಕ್ಕೆ ಬರಬಹುದು ಎನ್ನಲಾಗಿದೆ.