ಮಾರ್ಪಟ್ಟಿತ್ತು. ಆದರೆ, ಕಳೆದ ಮೂರು ದಿನಗಳಿಗೆ ಹೋಲಿಸಿದರೆ, ಶುಕ್ರವಾರ ಮಳೆ ಪ್ರಮಾಣ ಕಡಿಮೆ ಆಗಿದೆ. ಮುಂದಿನ ಮೂರ್ ನಾಲ್ಕು ದಿನಗಳು ಮಳೆ ಅಬ್ಬರ ಮತ್ತಷ್ಟು ತಗ್ಗುವ ಸಾಧ್ಯತೆ ಇದೆ. ಒಡಿಶಾದಲ್ಲಿ ಉಂಟಾದ ವಾಯುಭಾರ ಕುಸಿತ ಮತ್ತು ಕರಾವಳಿ ಭಾಗದಲ್ಲಿನ ಕಡಿಮೆ ಒತ್ತಡದ ತಗ್ಗು (ಟ್ರಫ್) ಹಾದು ಹೋಗಿದ್ದರ ಪರಿಣಾಮ ರಾಜ್ಯದಲ್ಲಿ ಮಳೆ ಆಗುತ್ತಿದೆ. ಈಗ ಅದರ ಪ್ರಭಾವ ಕಡಿಮೆಯಾಗಿದೆ. ಹಾಗಾಗಿ, ಮಳೆ ಕೂಡ ತುಸು ಇಳಿಮುಖ ಆಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು
ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕೆಆರ್‌ಎಸ್‌ನಿಂದ 3000 ಕ್ಯೂಸೆಕ್ ನೀರು ಹೊರಕ್ಕೆ: ಕೊಡಗಿನಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆಯ ಪ್ರಮಾಣವನ್ನು 3 ಸಾವಿರ ಕ್ಯೂಸೆಕ್‌ಗಳಿಗೆ ಏರಿಸಲಾಗಿದೆ.ಜಲಾಶಯಕ್ಕೆ 20,108 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 3 ಸಾವಿರ ಕ್ಯೂಸೆಕ್ ನೀರನ್ನು ಹೊರ
ಬಿಡಲಾಗುತ್ತಿದೆ.
ಬೆಳಗಾವಿ: ಖಾನಾಪುರ, ಬೆಳಗಾವಿ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಶುಕ್ರವಾರವೂ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣಾ, ಘಟ
ಪ್ರಭಾ, ಹಿರಣ್ಯಕೇಶಿ ಹಾಗೂ ಮಲಪ್ರಭಾ ನದಿಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರು ಬರಲಾರಂಭಿಸಿದೆ. ಹಿಡಕಲ್ ಜಲಾಶಯಕ್ಕೆ
ಒಂದೇ ದಿನ ಐದು ಅಡಿಗಳಷ್ಟು (2,126 ಅಡಿ )ನೀರು ಬಂದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಲಪ್ರಭಾಕ್ಕೆ ಎರಡು
ಅಡಿಗಳಷ್ಟು ನೀರು ಬಂದಿದ್ದು, 2,079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,045 ಅಡಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಗೆ 1.34 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದ್ದು, ಹಿಪ್ಪರಗಿ ಜಲಾಶಯದಿಂದ ಎಲ್ಲ ಗೇಟ್‌ಗಳ ಮೂಲಕ
ಇಷ್ಟೇ ಪ್ರಮಾಣದಲ್ಲಿ ನೀರನ್ನು ಆಲಮಟ್ಟಿಗೆ ಬಿಡಲಾಗುತ್ತಿದೆ. ಕೃಷ್ಣಾ, ದೂಧಗಂಗಾ, ಘಟಪ್ರಭಾ ನದಿಗಳ ದಡದಲ್ಲಿರುವ ಚಿಕ್ಕೋಡಿ,
ರಾಯ ಬಾಗ ಮತ್ತು ಅಥಣಿ, ಗೋಕಾಕ ತಾಲೂ ಕಿನ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸನ್ನದ್ಧರಾಗಿರಬೇಕು
ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ದಡಗಳ ಮೇಲಿರುವ ಪಂಪ್‌ಸೆಟ್‌ಗಳನ್ನು ಹೊರತೆಗೆಯುವ ಪ್ರಯತ್ನ ಮಾಡಬಾರದು
ಎಂದು ರೈತರಿಗೆ ತಿಳಿಸಲಾಗಿದೆ. ಮಳೆ ಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ 3 ಮನೆ ಗಳು ಪೂರ್ಣವಾಗಿ ಹಾಗೂ 73 ಮನೆಗಳಿಗೆ
ಭಾಗಶಃ ಹಾನಿಯಾಗಿದೆ.
Related Articles
ರಾಯಚೂರು: ಇಲ್ಲಿನ ಬೃಹತ್ ಶಾಖೋ ತ್ಪನ್ನ ವಿದ್ಯುತ್ ಕೇಂದ್ರದ 4 ಘಟಕಗಳ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಶಾಖೋತ್ಪನ್ನ ವಿದ್ಯುತ್ ಬೇಡಿಕೆ ಕುಗ್ಗಿದ ಪರಿಣಾಮ ಹಾಗೂ ಘಟಕಗಳಲ್ಲಿ
ಕಾಣಿಸಿಕೊಂಡಿರುವ ತಾಂತ್ರಿಕ ತೊಂದರೆಯಿಂದ 210 ಮೆ.ವ್ಯಾ. ಸಾಮರ್ಥ್ಯದ 3, 4, 5 ಮತ್ತು 6ನೇ ಘಟಕಗಳಿಂದ ಕರೆಂಟ್
ಉತ್ಪಾದನೆ ನಿಲ್ಲಿಸಲಾಗಿದೆ.
Advertisement