Advertisement

ಜಗತ್ತಿನ ಅರ್ಧದಷ್ಟು ಬಡವರ ಸಂಪತ್ತು 8 ಸಿರಿವಂತರ ಬಳಿ!

03:45 AM Jan 17, 2017 | Team Udayavani |

ದಾವೋಸ್‌: ಭಾರತದ ಆರ್ಥಿಕತೆ ಪ್ರಕಾಶಿಸುತ್ತಿದೆ, ಅಭಿವೃದ್ಧಿಯತ್ತ ಸಾಗುತ್ತಿದೆ, ಇನ್ನು ಕೆಲವೇ ದಿನಗಳಲ್ಲಿ ಚೀನವನ್ನೂ ಮೀರಿಸುವಂತೆ ಜಿಡಿಪಿಯಲ್ಲಿ ಸಾಧನೆ ಮಾಡಲಿದೆ ಎಂಬ ಸುದ್ದಿ ಕೇಳಿ ಕಿವಿಗೆ ಇಂಪು ಮಾಡಿಕೊಳ್ಳುತ್ತಿದ್ದವರೇ ಹೆಚ್ಚು. ಆದರೆ ಭಾರತದಂಥ ಅಸಮಾನ ಆರ್ಥಿಕತೆಯಲ್ಲಿ ಬಹುತೇಕ ಸಂಪತ್ತು ಶೇಖರಣೆಯಾಗಿ ಕುಳಿತಿರುವುದು ಶೇ. 1ರಷ್ಟು ಮಂದಿಯಲ್ಲಿ  ಮಾತ್ರ !

Advertisement

ಇದೇ ವೇಳೆ ಇದಕ್ಕಿಂತಲೂ ಅಚ್ಚರಿಯಾದ ಸಂಗತಿಯೆಂದರೆ ಇಡೀ ಜಗತ್ತಿನಲ್ಲಿನ ಶೇ. 50 ಕಡು ಬಡವರು ಹೊಂದಿರುವಷ್ಟು ಸಂಪತ್ತು ಕೂಡ ಕೇಂದ್ರೀಕೃತವಾಗಿರುವುದು ಕೇವಲ 8 ಶತಕೋಟ್ಯಧಿಪತಿಗಳ ಮುಷ್ಟಿಯಲ್ಲಿ. ಹೌದು… ಭಾರತವೂ ಸಹಿತ ಜಗತ್ತಿನ ಹಲವಾರು ದೇಶ ಮತ್ತು ಒಟ್ಟಾರೆಯಾಗಿ ಜಗತ್ತಿನ ಆರ್ಥಿಕತೆ ಮತ್ತು ಸಂಪತ್ತಿನ ಮೂಲದ ಬಗ್ಗೆ ಹಕ್ಕುಗಳ ಸಂಸ್ಥೆಯಾದ ಆಕ್ಸ್‌ಫಾಮ್‌ ವರದಿ ನೀಡಿದೆ.  ಇದಕ್ಕೆ  ಶೇ. 99  ಮಂದಿಯ ಆರ್ಥಿಕತೆ ಎಂಬ ಶೀರ್ಷಿಕೆಯನ್ನೂ ನೀಡಿದ್ದು, ಬಡವ ಮತ್ತು ಶ್ರೀಮಂತರ ನಡುವಿನ ಅಂತರಕ್ಕೆ ಕಾರಣಗಳ ಬಗ್ಗೆ ವಿವರಿಸಿದೆ. ಅದರಲ್ಲಿ ಈ ಸಂಗತಿಗಳಿವೆ.

ಭಾರತದ ಪೈಕಿ ರಿಲಯನ್ಸ್‌ ಕಂಪೆನಿಯ ಮಾಲಕ ಮುಕೇಶ್‌ ಅಂಬಾನಿ, ದಿಲೀಪ್‌ ಸಾಂ Ì, ಅಜೀಮ್‌ ಪ್ರೇಮ್‌ಜಿಯಂಥವರು ದೇಶದ ಹತ್ತಿರಹತ್ತಿರ ಶೇ.60ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಇಡೀ ಭಾರತದ ಶೇ.58ರಷ್ಟು ಸಂಪತ್ತು ಕ್ರೋಡೀಕೃತಗೊಂಡಿರುವುದು ಶೇ.1ರಷ್ಟು ಮಂದಿಯಲ್ಲಿ ಮಾತ್ರವಂತೆ. ಇನ್ನುಳಿದ ಶೇ.42ರಷ್ಟು ಸಂಪತ್ತನ್ನು ಉಳಿದ ಶೇ.99ರಷ್ಟು ಮಂದಿ ಹಂಚಿಕೊಂಡಿದ್ದಾರೆ. 

ಜಗತ್ತಿನ ಅರ್ಧ ಸಂಪತ್ತಿಗೆ ಬಿಲ್‌ಗೇಟ್ಸ್‌  ರಾಜ ಸಂಪತ್ತಿನ ಅಸಮಾನತೆ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. 
ಇದು ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಸಂಗತಿಯಾಗಿದೆ ಎಂದು ಈ ವರದಿ ವಿಶ್ಲೇಷಿಸಿದೆ. ಅಂದರೆ ಜಗತ್ತಿನ ಅರ್ಧದಷ್ಟು ಕಡುಬಡವರು ಹೊಂದಿರುವಷ್ಟು ಸಂಪತ್ತು ಕೇಂದ್ರೀಕೃತವಾಗಿರುವುದು 8 ಮಂದಿ ಶತಕೋಟ್ಯಧಿಪತಿಗಳ ಕೈಯಲ್ಲಿ.

ಈ ಪಟ್ಟಿಯಲ್ಲಿ ಬಿಲ್‌ಗೇಟ್ಸ್‌ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರ ಆಸ್ತಿ 5,107.87 ಶತಕೋಟಿ ರೂಪಾಯಿ ಇದ್ದರೆ, ಅಮಾನ್ಸಿಯೋ ಒರ್ಟೆಗೋ ಆಸ್ತಿ 4,563.03 ಶತಕೋಟಿ ರೂ. ಇದೆ. ಇನ್ನು ವಾರನ್‌ ಬಫೆಟ್‌ ಅವರದ್ದು 4,140.78 ಶತಕೋಟಿ ರೂ. ಆಗಿದೆ ಎಂದು ಈ ವರದಿ ಹೇಳಿದೆ.

Advertisement

ಇಡೀ ಜಗತ್ತಿನ ಒಟ್ಟಾರೆ ಆಸ್ತಿ ಮೌಲ್ಯ 17,414.45 ಲಕ್ಷ ಕೋಟಿ ರೂಪಾಯಿಯಾಗಿದೆ. ಇದರಲ್ಲಿ 442.68 ಲಕ್ಷ ರೂ. ಕೋಟಿ ಆಸ್ತಿಯನ್ನು ಈ 8 ಮಂದಿ ಹೊಂದಿದ್ದಾರೆ ಎಂದು ಈ ವರದಿ ಹೇಳಿದೆ. 

ಈ ವರದಿ ಕೇವಲ ಸಂಪತ್ತಿನ ಬಗ್ಗೆಯಷ್ಟೇ ಹೇಳಿಲ್ಲ. ನೌಕರರ ವೇತನದ ಅಸಮಾನತೆ ಬಗ್ಗೆಯೂ ಬೆಳಕು ಚೆಲ್ಲಿದೆ. ದೇಶದಲ್ಲಿನ ಪ್ರಮುಖ ಕಂಪೆನಿಗಳ ಸಿಇಓಗಳು ದೇಶದ ಸಾಮಾನ್ಯ ನೌಕರನಿಗಿಂತ ಸುಮಾರು 416 ಪಟ್ಟು ಹೆಚ್ಚು ವೇತನ ಪಡೆಯುತ್ತಿದ್ದಾರೆ ಎಂದಿದೆ.

ಭಾರತದಲ್ಲಿ 85 ಶತಕೋಟ್ಯಪತಿಗಳು
ಭಾರತದಲ್ಲಿರುವ ಶತಕೋಟ್ಯಪತಿಗಳ ಸಂಖ್ಯೆ ಸುಮಾರು 85. ಇವರ ಒಟ್ಟಾರೆ ಆಸ್ತಿ ಮೌಲ್ಯ 16.890 ಲಕ್ಷ ಕೋಟಿ ರೂಪಾಯಿ. ಆದರೆ ಭಾರತದ ಒಟ್ಟಾರೆ ಸಂಪತ್ತಿನ ಮೌಲ್ಯ 2ಧಿ0 ಲಕ್ಷ  ಕೋಟಿ ರೂಪಾಯಿ. ಇದರಲ್ಲಿ ಮುಕೇಶ್‌ ಅಂಬಾನಿ (1.314 ಲಕ್ಷ ಕೋಟಿ ರೂ.), ದಿಲೀಪ್‌ ಸಾಂ Ì (1.137 ಲಕ್ಷ ಕೋಟಿ ರೂ.) ಮತ್ತು ಅಜೀಮ್‌ ಪ್ರೇಮ್‌ಜಿ (1.021 ಲಕ್ಷ ಕೋಟಿ ರೂ.) ಪಾಲು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next