Advertisement

ಲಾಲ್‌ಬಾಗ್‌ಗೆ 80 ಸಾವಿರ ಮಂದಿ ಭೇಟಿ

12:40 PM Aug 13, 2018 | |

ಬೆಂಗಳೂರು: ರಜಾ ದಿನವಾದ ಭಾನುವಾರ ಲಾಲ್‌ಬಾಗ್‌ಗೆ ಬರೊಬ್ಬರಿ 80 ಸಾವಿರ ಜನ ಭೇಟಿಕೊಟ್ಟಿದ್ದು, 45 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ. ವಾರದ ದಿನಗಳಿಗೆ ಹೋಲಿಸಿದರೆ ಭಾನುವಾರ ವೀಕ್ಷಕರ ಸಂಖ್ಯೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ಟಿಕೆಟ್‌ ವಿತರಣೆ ಸ್ಥಳಗಳಲ್ಲಿ ಹಾಗೂ ಪ್ರವೇಶ ದ್ವಾರದಲ್ಲಿ ಆಯೋಜಕರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.

Advertisement

ಪೊಲೀಸರು ಮೈಕ್‌ನಲ್ಲಿ ವಾಹನ ನಿಲುಗಡೆ ಹಾಗೂ ಕಳ್ಳರ ಕುರಿತ ಎಚ್ಚರಿಕೆಯ ಮಾಹಿತಿಗಳು ನಿರಂತರವಾಗಿ ನೀಡುತ್ತಿದ್ದರು. ಮುಖ್ಯವಾಗಿ ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನ ಹೆಚ್ಚಾಗಿ ಸೇರಿದ್ದು ಕಂಡುಬಂದಿತು. 

ಉದ್ಯಾನವನು ಸ್ವತ್ಛತಾ ಕಾರ್ಯದಲ್ಲಿ ಹಸಿರು ದಳ, ಬ್ಯೂಟಿಫುಲ್‌ ಬೆಂಗಳೂರು ಮತ್ತಿತರ ಸಂಘಟನೆಗಳು ತೊಡಗಿದ್ದರು. ವಿಶೇಷವಾಗಿ ಬಿಎಸ್‌ಎಫ್ನಿಂದ ಮ್ಯೂಜಿಕ್‌ಬ್ಯಾಂಡ್‌ ಪ್ರದರ್ಶನ, ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಸಂಜೆ ಮಳೆ ಆರಂಭವಾಗುತ್ತಿದ್ದಂತೆ ಜೋಡಿ ರಸ್ತೆ, ಹೊಸೂರು ರಸ್ತೆಯ ಕೆಲವೆಡೆ ಹಾಗೂ ಸಿದ್ದಾಪುರ ಗೇಟ್‌ ಬಳಿ ವಾಹನ ದಟ್ಟಣೆ ಉಂಟಾಗಿತ್ತು. ಭಾನುವಾರ 75,000 ವಯಸ್ಕರು, 5,000 ಮಕ್ಕಳು ಭೇಟಿಕೊಟ್ಟಿದ್ದಾರೆ. ಆ.12ರವರೆಗೂ ಒಟ್ಟು 2.8 ಲಕ್ಷ ಜನ ಭೇಟಿಕೊಟ್ಟಿದ್ದು, 1.4 ಕೋಟಿ ಶುಲ್ಕ ಸಂಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next