Advertisement

ಕೋವಿಡ್‌ ಸಮಯದಲ್ಲಿ ಮನೆ ನಿರ್ವಹಣೆಗೆ ಸಾಲದ ಮೊರೆ ಹೋದ ಶೇ.50ರಷ್ಟು ಭಾರತೀಯರು

04:57 PM Nov 05, 2020 | sudhir |

ಹೊಸದಿಲ್ಲಿ: ಕೋವಿಡ್‌ -19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು ಅರ್ಧದಷ್ಟು ಭಾರತೀಯರು ತಮ್ಮ ಮನೆಗಳನ್ನು ನಡೆಸಲು ಸಾಲ ಪಡೆದ ಹಣದ ಮೇಲೆ ಅವಲಂಬಿತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Advertisement

ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ ಮತ್ತು ವೇತನ ಕಡಿತದಿಂದಾಗಿ ಕಡಿಮೆ-ಮಧ್ಯಮ-ಆದಾಯದವರ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಸಾಂಕ್ರಾಮಿಕವು ರೋಗವು ಸಾಲ ಮತ್ತು ಸಾಲ ಆಧಾರಿತ ಆದ್ಯತೆಗಳ ಕಡೆಗೆ ಬಲವಾಗಿ ತಳ್ಳುತ್ತಿದೆ ಎಂದು ಹೋಮ್‌ ಕ್ರೆಡಿಟ್‌ ಇಂಡಿಯಾದ ವರದಿ ತಿಳಿಸಿದೆ.

ಸಮೀಕ್ಷೆಯ ಆಧಾರದ ಮೇಲೆ ವರದಿಯಲ್ಲಿ, ಶೇ.46ರಷ್ಟು ಜನರು ತಮ್ಮ ಮನೆಗಳನ್ನು ನಡೆಸಲು ಮುಖ್ಯವಾಗಿ ಸಾಲ ಪಡೆದಿದ್ದಾರೆ ಎಂದು ವರದಿ ತೋರಿಸಿದ್ದು, ಕೋವಿಡ್‌ ವೈರಸ್‌ ಪ್ರೇರಿತ ಲಾಕ್‌ಡೌನ್‌ ಸಮಯದಲ್ಲಿ ಜನರ ಸಾಲ ಪಡೆಯುವ ವಿಧಾನಗಳನ್ನು ಅರ್ಥೈಸಿಕೊಳ್ಳಲು ಏಳು ನಗರಗಳಲ್ಲಿ ಸುಮಾರು ಸಾವಿರ ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ:ನನ್ನ ತಮ್ಮನ ಕೊಲೆಯಲ್ಲಿ ಇನ್ನೂ ಕೆಲ ಗಣ್ಯ ವ್ಯಕ್ತಿಗಳ ಕೈವಾಡ ಇದೆ: ಯೋಗೀಶ ಗೌಡ ಅಕ್ಕ ಸಹೋದರಿ

ವೇತನ ಕಡಿತ ಅಥವಾ ವಿಳಂಬ ಸಂಬಳ ಪರಿಣಾಮವಾಗಿ ಹೆಚ್ಚಿನ ಸಾಲಗಾರರು ಎರವಲನ್ನು ಆಶ್ರಯಿಸಿದ್ದು, ಶೇ.27ರಷ್ಟು ಜನರು ತಮ್ಮ ಮಾಸಿಕ ಕಂತುಗಳನ್ನು ಹಿಂದಿನ ಸಾಲದಿಂದ ಮರುಪಾವತಿಸುವುದು ಕ್ರೆಡಿಟ್‌ ಹಿಂದಿನ ಎರಡನೇ ಅತಿದೊಡ್ಡ ಕಾರಣವೆಂದು ಉಲ್ಲೇಖೀಸಿದ್ದಾರೆ.

Advertisement

ಇನ್ನು ಶೇ.14ರಷ್ಟು ಜನರು ಉದ್ಯೋಗ ನಷ್ಟ ಅನುಭವಿಸಿದ್ದರಿಂದ ಸಾಲ ಪಡೆದಿದ್ದು, ಸಾಮಾನ್ಯ ಸಮಯಕ್ಕಿಂತ ಭಿನ್ನವಾಗಿ ಕೋವಿಡ್‌ ಸಾಂಕ್ರಾಮಿಕ ವೇಳೆ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಹಣ ಎರವಲು ಪಡೆಯಲು ಆದ್ಯತೆ ನೀಡಿದ್ದಾರೆ. ಪರಿಸ್ಥಿತಿ ಸಾಮಾನ್ಯವಾದಾಗ ಮತ್ತು ಉದ್ಯೋಗಗಳು ಅಥವಾ ಸಂಬಳ ಪಡೆದಾಗ ಹಣವನ್ನು ಹಿಂದಿರುಗಿಸಲು ಸುಲಭವಾಗುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next