Advertisement

44 ಲಕ್ಷ ಮಂದಿಗೆ ಡೆಂಘಿ ಚಿಕೂನ್‌ ಗುನ್ಯಾ ಆತಂಕ

07:55 AM Aug 02, 2017 | Team Udayavani |

ಬೆಂಗಳೂರು: ಮಾರಕ ಡೆಂಘಿ, ಚಿಕೂನ್‌ ಗುನ್ಯಾ ಮತ್ತು ಎಚ್‌1-ಎನ್‌1 ಕಾಯಿಲೆ ಇನ್ನಿಲ್ಲದಂತೆ ಕಾಡುತ್ತಿದ್ದು, ಇದರಿಂದ
ಬಳಲುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಅಲ್ಲದೇ ಬರೊಬ್ಬರಿ 44 ಲಕ್ಷಕ್ಕೂ ಹೆಚ್ಚು ಜನ ಡೆಂಗ್ಯೂ, ಚಿಕೂನ್‌ ಗುನ್ಯಾದ ಅಪಾಯದಲ್ಲಿದ್ದಾರೆ. ಇದು ಸರ್ಕಾರಿ ದಾಖಲೆಯಷ್ಟೇ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಲೆಕ್ಕಕ್ಕೂ ಸಿಗದು. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದ 147 ತಾಲೂಕುಗಳ 937 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 2,044 ಗ್ರಾಮಗಳು ಅಥವಾ ಪ್ರದೇಶಗಳ 43.89 ಲಕ್ಷ ಜನಸಂಖ್ಯೆ ಡೆಂ à ಮತ್ತು 107 ತಾಲೂಕುಗಳ 395 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 636 ಗ್ರಾಮ ಅಥವಾ
ಪ್ರದೇಶಗಳ 9.92 ಲಕ್ಷ ಜನಸಂಖ್ಯೆ ಚಿಕೂನ್‌ ಗುನ್ಯಾದ ಅಪಾಯದಲ್ಲಿದೆ.

Advertisement

ಖಾಸಗಿ ಆಸ್ಪತ್ರೆಗಳಲ್ಲಿನ ಡೆಂಘಿ ಸಾವಿನ ಪ್ರಕರಣಗಳನ್ನು ಮರೆಮಾಚಲಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಸಾವಿಗೆ ಬಹು ಅಂಗಾಗ ವೈಫ‌ಲ್ಯ ಸೇರಿದಂತೆ ಇನ್ನಿತರ ದೀರ್ಘ‌ಕಾಯಿಲೆಗಳ ಬಣ್ಣ ಕಟ್ಟಲಾಗುತ್ತಿದೆ. ಸರ್ಕಾರ ಎಷ್ಟೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಡೆಂಘಿ ಮತ್ತು ಚಿಕೂನ್‌ ಗುನ್ಯಾಗೆ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ರಾಜ್ಯದಲ್ಲಿ 43.89 ಲಕ್ಷ ಜನ ಡೆಂಘಿ ಹಾಗೂ 9.92 ಲಕ್ಷ ಮಂದಿ ಚಿಕೂನ್‌ ಗುನ್ಯಾದ ಅಪಾಯ ಎದುರಿಸುತ್ತಿದ್ದಾರೆ.

ಜನವರಿಯಿಂದ ಆಗಸ್ಟ್‌ 1ರವರೆಗೆ ರಾಜ್ಯದಲ್ಲಿ ಒಟ್ಟು 4,339 ಡೆಂಘಿ ಹಾಗೂ 1,087 ಚಿಕೂನ್‌ಗುನ್ಯಾ ಪೀಡಿತ
ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಡೆಂಘಿ ಪೀಡಿತ ಐದು ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಎಚ್‌1ಎನ್‌1 ಪೀಡಿತ 2,746 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇಲ್ಲಿವರೆಗೆ 26,720 ಶಂಕಿತ ಡೆಂಘಿ ಪ್ರಕರಣಗಳಲ್ಲಿ 17 ಪ್ರಕರಣಗಳ ರಕ್ತದ ಮಾದರಿಯನ್ನು
ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 4,339 ಪ್ರಕರಣಗಳು ದೃಢಪಟ್ಟಿವೆ. ಅದೇ ರೀತಿ 10 ಸಾವಿರ ಶಂಕಿತ
ಚಿಕೂನ್‌ಗುನ್ಯಾ ಪ್ರಕರಣಗಳಲ್ಲಿ 6 ಸಾವಿರ ಪ್ರಕರಣಗಳ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, 1,087 ಪ್ರಕರಣಗಳು
ದೃಢಪಟ್ಟಿವೆ. ಜೊತೆಗೆ 10 ಸಾವಿರ ಎಚ್‌ 1ಎನ್‌1 ಶಂಕಿತ ಪ್ರಕರಣಗಳಲ್ಲಿ 2,700 ಪ್ರಕರಣಗಳಗಳು ದೃಢಪಟ್ಟಿವೆ. ಡೆಂ àಗೆ 5 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಎಚ್‌1ಎನ್‌1 ಗೆ 15 ಜನ ಸಾವನ್ನಪ್ಪಿದ್ದಾರೆ.

ಚಿಕೂನ್‌ಗುನ್ಯಾ ಇಲ್ಲಿವರೆಗೆ ಯಾವುದೇ ಆಹುತಿ ಪಡೆದುಕೊಂಡಿಲ್ಲ ಅನ್ನುವುದು ಸಮಧಾನದ ಸಂಗತಿ.

Advertisement

ಮಂಡ್ಯ ಜಿಲ್ಲೆಗೆ ಹೆಚ್ಚು ಅಪಾಯ
ಮಂಡ್ಯ ಜಿಲ್ಲೆ ಅತಿ ಹೆಚ್ಚು ಅಪಾಯದಲ್ಲಿದ್ದು, ಅಲ್ಲಿನ 4 ಲಕ್ಷ ಮಂದಿ ಡೆಂಘಿ ಹಾಗೂ 2.27 ಲಕ್ಷ ಜನ ಚಿಕೂನ್‌ಗುನ್ಯಾದ
ಅಪಾಯದಲ್ಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಡೆಂಘಿಯ 2,253 ಶಂಕಿತ ಪ್ರಕರಣಗಳಲ್ಲಿ ಅತಿ ಹೆಚ್ಚು 564 ಪ್ರಕರಣಗಳು ದೃಢಪಟ್ಟಿವೆ. ಅದೇ ರೀತಿ ಚಿಕೂನ್‌ಗುನ್ಯಾದ 1,200 ಪ್ರಕರಣಗಳಲ್ಲಿ 284 ಪ್ರಕರಣಗಳು ದೃಢಪಟ್ಟಿವೆ. ಶಂಕಿತ
ಪ್ರಕರಣಗಳಲ್ಲಿ ತುಮಕೂರು ಜಿಲ್ಲೆ ಮುಂದೆ ಇದ್ದು, ಇಲ್ಲಿ 2,365 ಡೆಂಘಿ ಹಾಗೂ 1,695 ಶಂಕಿತ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.

ಮೈಸೂರು 402, ದಾವಣಗೆರೆ 361, ಶಿವಮೊಗ್ಗ 295, ಹಾಸನ 265, ಉಡುಪಿ 232, ಚಿತ್ರದುರ್ಗ 204, ಚಾಮರಾಜನಗರ 182, ಚಿಕ್ಕಮಗಳೂರು 166, ಕೊಡಗು 155, ಕೋಲಾರ 150, ಬೆಂಗಳೂರು ನಗರ 120 ಡೆಂಘಿ ಪ್ರಕರಣಗಳು ದೃಢಪಟ್ಟಿವೆ. ಮಂಡ್ಯದಲ್ಲಿ 284, ಚಾ.ನಗರ 162, ತುಮಕೂರು 127, ತುಮಕೂರಿನಲ್ಲಿ 105 ಚಿಕೂನ್‌
ಗುನ್ಯಾ ಪ್ರಕರಣಗಳು ದೃಢಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next