ಶ್ರೀನಗರ: ಭಾರತ-ಪಾಕಿಸ್ಥಾನ ಗಡಿಯಾಚೆಗೆ ಸುಮಾರು 135 ಉಗ್ರರಿರುವ ತಂಡವೊಂದು ಭಾರತದೊಳಕ್ಕೆ ನುಸುಳಲು ಸಜ್ಜಾಗಿದೆ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮಹಾ ನಿರ್ದೇಶಕ (ಕಾಶ್ಮೀರ ವಲಯ) ರಾಜಾಬಾಬು ಸಿಂಗ್ ತಿಳಿಸಿದ್ದಾರೆ.
ಪರಿಸ್ಥಿತಿ ಹೀಗಿದ್ದರೂ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಅವರು ತಿಳಿಸಿದ್ದಾರೆ.
“ಉಗ್ರರ ಹಿಮ್ಮೆಟ್ಟಿಸಿದ್ದೆವು’: ಹಿಂದಿನ ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಉಗ್ರರ ಒಳನುಸುಳುವಿಕೆ ಯನ್ನು ಗಣನೀಯ ಮಟ್ಟದಲ್ಲಿ ಹತ್ತಿಕ್ಕಲಾಗಿದೆ ಎಂದು ಅವರು ಹೇಳಿರುವ ಅವರು, 2021ರಲ್ಲಿ ಉಗ್ರರ ಒಳನುಸುಳುವಿಕೆ ಪ್ರಕರಣಗಳು ಸುಮಾರು 58 ನಡೆದಿದ್ದವು. ಆಗ ಉಗ್ರರ ವಿರುದ್ಧ ನಡೆಸಲಾದ ಕಾರ್ಯಾಚರಣೆಗಾಗಿ 21 ಉಗ್ರರನ್ನು ಹೊಡೆದೋಡಿಸಲಾಗಿತ್ತು. ಒಬ್ಬ ಉಗ್ರ ಶರಣಾಗಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ
ಶಸ್ತ್ರಾಸ್ತ್ರ ವಶ: ಬಿಎಸ್‌ಎಫ್ ವತಿಯಿಂದ 2021ರಲ್ಲಿ ಉಗ್ರರಿಂದ ಮೂರು ಎಕೆ-47 ಬಂದೂಕುಗಳು, ಆರು 9 ಎಂ.ಎಂ. ಪಿಸ್ತೂಲುಗಳು, 1,071 ಶಸ್ತ್ರಾಸ್ತ್ರಗಳು, 20 ಹ್ಯಾಂಡ್ ಗ್ರೆನೇಡ್‌ಗಳು, 2 ಸುಧಾರಿತ ಸ್ಫೋಟಕಗಳು ಹಾಗೂ 88 ಕೋಟಿ ರೂ. ಮೌಲ್ಯದ 17.3 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾ ಗಿತ್ತು ಎಂದು ಸಿಂಗ್ ವಿವರಿಸಿದ್ದಾರೆ.
ಎರಡು ಸುರಂಗ ಪತ್ತೆ : ಈ ನಡುವೆ, ಇತ್ತೀಚೆಗೆ ಬಿಎಸ್‌ಎಫ್ ನಡೆಸಿದ್ದ ಆ್ಯಂಟಿ-ಟನೆಲ್ ಡ್ರೈವ್ ಕಾರ್ಯಾಚರಣೆ ಯಲ್ಲಿ ಪಾಕಿಸ್ಥಾನದ ವತಿಯಿಂದ ನಿರ್ಮಿಸಲಾಗಿದ್ದ ಎರಡು ಸುರಂಗಗಳನ್ನು ಪತ್ತೆ ಹಚ್ಚಲಾಗಿತ್ತೆಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.