Advertisement
ನಗರದ ಶಿವಕುಮಾರಸ್ವಾಮಿ ಭವನದ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಂದು ರಾಜಕಾರಣದಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾಗಿದೆ. ನಾನು ಕಳೆದ ಸಂಸತ್ ಚುನಾವಣೆಯಲ್ಲಿ ಸೋಲುವುದಕ್ಕೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದೆ ಎಂದು ಅವರು ಪ್ರಚಾರ ಮಾಡಿದರು. ನೆಹರು ಸಚಿವ ಸಂಪುಟದಲ್ಲಿ ಡಾ. ಅಂಬೇಡ್ಕರ್ ಅವ ರಿಗೆ ಕಾನೂನು ಸಚಿವ ಸ್ಥಾನ ನೀಡಲಾಗಿತ್ತು. ಹಿಂದೂ ಕೋಡ್ ಬಿಲ್ ಪಾಸಾಗಲಿಲ್ಲ. ಅದನ್ನು ವಿರೋಧಿಸಿದವರು ಇದೇ ಆರೆಸ್ಸೆಸ್, ಜನಸಂಘ ದವರು. ಪಾರ್ಲಿಮೆಂಟ್‌ನಲ್ಲಿ ಸೋತ ಕಾರಣ ರಾಜೀನಾಮೆ ನೀಡಿದರು. ಆದರೆ ಇದಕ್ಕೆ ಕಾಂಗ್ರೆಸ್ ಕಾರಣ ಎಂದು ಬಿವಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇವತ್ತಿಗೂ ಕೂಡ ಆರ್‌ಎಸ್‌ಎಸ್ ನಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ. ಅವರ ಕಚೇರಿ ಗಳಲ್ಲಿ ಮಹಾತ್ಮಗಾಂಧಿ ಫೋಟೋ ಹಾಕುವುದಿಲ್ಲ ಎಂದರು.
Related Articles
Advertisement
ಸಂಸತ್‌ನಲ್ಲಿ ಪ್ರಸಾದ್ ದನಿ ಎತ್ತಲಿ : ಬಸವೇಶ್ವರರ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಜಮೀನಿನಲ್ಲಿ ಮಣ್ಣು ಹದ ಮಾಡಿ, ದುಡಿಯದಿದ್ದರೆ ಫಲ ದೊರಕುವುದಿಲ್ಲ. ಹಾಗೆ ರಾಜಕಾರಣದಲ್ಲಿ ಸಹ ಶ್ರಮ ಮುಖ್ಯ. ಶಾಸಕನಾಗಿ, ಸಂಸದನಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ನಮ್ಮ ಹಲವಾರು ಯೋಜನೆಗಳುಈಗ ನನೆಗುದಿಗೆ ಬಿದ್ದಿವೆ. ರಾ.ಹೆದ್ದಾರಿ 209ರಕಾಮಗಾರಿ 2019ರಲ್ಲೇ ಮುಗಿಯಬೇಕಿತ್ತು. ಇವತ್ತು ಮಂದಗತಿಯಲ್ಲಿ ಸಾಗುತ್ತಿದೆ. ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಮನವಿಮಾಡುತ್ತೇನೆ. ಇನ್ನೂ 3 ವರ್ಷ ಅಧಿಕಾರ ಇದೆ.ಅವರು ಇಲ್ಲಿ ಪತ್ರಿಕಾಗೋಷ್ಠಿ ಮಾಡಿದರೆಪ್ರಯೋಜನವಿಲ್ಲ. ದೆಹಲಿಯಲ್ಲಿ ಧ್ವನಿ ಎತ್ತಬೇಕು.ಬಜೆಟ್‌ನಲ್ಲಿ ಕೇಂದ್ರ ತ.ನಾಡು, ಪ.ಬಂಗಾಳ,ಕೇರಳಕ್ಕೆ ಸಾವಿರಾರು ಕೋಟಿ ರೂ. ಕೊಟ್ಟಿದೆ. ಕರ್ನಾಟಕದ ರಸ್ತೆ ಗಳ ಅಭಿವೃದ್ಧಿಗೆ ಅನುದಾನನೀಡಿಲ್ಲ. ಹಿರಿಯ ಸಂಸದರಾಗಿ ಇವರು ದನಿಯೆತ್ತಬೇಕಿತ್ತು ಎಂದು ಧ್ರುವನಾರಾಯಣ ತಿಳಿಸಿದರು.