Advertisement

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

12:12 AM May 09, 2021 | Team Udayavani |

ಹರಾರೆ : ಆರಂಭಕಾರ ಅಬಿದ್‌ ಅಲಿ ಅವರ ಚೊಚ್ಚಲ ದ್ವಿಶತಕ ಹಾಗೂ ವನ್‌ಡೌನ್‌ ಬ್ಯಾಟ್ಸ್‌ ಮನ್‌ ಅಜರ್‌ ಅಲಿ ಅವರ ಶತಕ ಸಾಹಸದಿಂದ ಜಿಂಬಾಬ್ವೆ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನ 8 ವಿಕೆಟಿಗೆ 510 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದೆ.

Advertisement

ಜವಾಬಿತ್ತ ಜಿಂಬಾಬ್ವೆ ಎರಡನೇ ದಿನದಾಟದ ಮುಕ್ತಾಯಕ್ಕೆ 4ಕ್ಕೆ 52 ರನ್‌ ಮಾಡಿ ಸಂಕಟಕ್ಕೆ ಸಿಲುಕಿದೆ.

ಅಬಿದ್‌ ಅಲಿ ಅಜೇಯರಾಗಿ ಉಳಿದು 215 ರನ್‌ ಬಾರಿಸಿದರು. 407 ಎಸೆತಗಳ ಈ ಮ್ಯಾರಥಾನ್‌ ಇನ್ನಿಂಗ್ಸ್‌ನಲ್ಲಿ 29 ಬೌಂಡರಿ ಒಳಗೊಂಡಿತ್ತು. ಅಜರ್‌ ಅಲಿ 126 ರನ್‌ ಹೊಡೆದರು. ಕೆಳ ಸರದಿಯ ಆಟಗಾರ ನೌಮಾನ್‌ ಅಲಿ 97 ರನ್ನಿಗೆ ಔಟ್‌ ಆದೊಡನೆ ಪಾಕಿಸ್ಥಾನ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next