Advertisement

ಐಒಸಿ ಆ್ಯತ್ಲೆಟಿಕ್ಸ್‌  ಸಮಿತಿ : ಶೂಟರ್‌ ಅಭಿನವ್‌ ಬಿಂದ್ರಾ ಆಯ್ಕೆ

08:28 AM Aug 11, 2018 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಆ್ಯತ್ಲೆಟಿಕ್ಸ್‌ ಸಮಿತಿಯ ಸದಸ್ಯರಾಗಿ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಆಯ್ಕೆಯಾಗಿದ್ದಾರೆ. ಬಿಂದ್ರಾ ಈ ಗೌರವ ಸಂಪಾದಿಸುತ್ತಿರುವ ಭಾರತದ 2ನೇ ಕ್ರೀಡಾಳು. ಈ ಹಿಂದೆ ಸೈನಾ ನೆಹ್ವಾಲ್‌ ಈ ಹುದ್ದೆ ಅಲಂಕರಿಸಿದ್ದರು. 

Advertisement

“ಐಒಸಿ ನೀಡಿರುವ ಗೌರವವನ್ನು ಕೃತಜ್ಞತೆಯಿಂದ ಸ್ವೀಕರಿಸಿದ್ದೇನೆ. ಆ್ಯತ್ಲೀಟ್‌ಗಳ ಪರವಾಗಿ ಕೆಲಸ ಮಾಡುವ, ಒಲಿಂಪಿಕ್ಸ್‌ ಸಂಬಂಧಪಟ್ಟ ಸಭೆಗಳಲ್ಲಿ ಭಾರತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅಭಿನವ್‌ ಬಿಂದ್ರಾ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next