Advertisement

12 ದಿನದ ಮಗುವಿಗೆ ಅಭಿನಂದನ್‌ ಹೆಸರು

12:30 AM Mar 06, 2019 | |

ಸಿಂಧನೂರು: ಭಾರತದ ವೀರಯೋಧ ವಾಯುದಳದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಹೆಸರನ್ನು ತಮ್ಮ ಹನ್ನೆರಡು ದಿನದ ಮಗುವಿಗೆ ಇಡುವ ಮೂಲಕ ದಿದ್ದಿಗಿ ಗ್ರಾಮದ ಸುರೇಶ ಮತ್ತು ಶ್ರೀದೇವಿ ದಂಪತಿ ದೇಶಪ್ರೇಮ ಮೆರೆದಿದ್ದಾರೆ.

Advertisement

ತಾಯಿ ಶ್ರೀದೇವಿ ಮಾತನಾಡಿ, ನನ್ನ ಮಗ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರಂತೆ ದೇಶ ಸೇವೆಗೆ ಮುಂದಾಗಲಿ. ಸೈನ್ಯದಲ್ಲಿ ಸೇರಿ ದೇಶ ರಕ್ಷಣೆಯಲ್ಲಿ ತೊಡಗಲಿ ಎಂಬ ಉದ್ದೇಶದಿಂದ ಅಭಿನಂದನ್‌ ಎಂದು ನಾಮಕರಣ ಮಾಡಿದ್ದೇನೆ ಎಂದರು. ತಂದೆ ಸುರೇಶ ಮಾತನಾಡಿ, ಪಾಕಿಸ್ತಾನದಲ್ಲಿ ಸೈನಿಕರು ನಮ್ಮ ವಾಯುಪಡೆಯ ಕಮಾಂಡರ್‌ ಅಭಿನಂದನ್‌ನ್ನು ಸೆರೆಹಿಡಿದು ದೇಶದ ಗುಪ್ತ ಮಾಹಿತಿ ಪಡೆಯಲು ಹಿಂಸೆ ಕೊಟ್ಟಿದ್ದಾರೆ. ಅದರೂ ಅಭಿನಂದನ್‌ ಯಾವುದೇ ಮಾಹಿತಿ ಬಿಟ್ಟು ಕೊಡದೇ ದೇಶಪ್ರೇಮ ಮೆರೆದಿದ್ದಾರೆ. ಅವರಂತೆ ನನ್ನ ಮಗ ಸಹ ಸೇನೆ ಸೇರಿ ಭಾರತದ ಪರ ಹೋರಾಡಲಿ ಎಂಬ ಉದ್ದೇಶದಿಂದ ಅಭಿನಂದನ್‌ ಹೆಸರಿಟ್ಟಿದ್ದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next