Advertisement

ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆದ 12 ವರ್ಷದ ಅಭಿಮನ್ಯು ಮಿಶ್ರಾ

11:29 AM Jul 01, 2021 | Team Udayavani |

ಬುಡಾಪೆಸ್ಟ್: ಭಾರತ ಮೂಲದ 12 ವರ್ಷದ ಬಾಲಕ ಅಭಿಮನ್ಯು ಮಿಶ್ರಾ ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆ ಬರೆದಿದ್ದಾರೆ.

Advertisement

ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಜಯಿಸಿದ ಅಭಿಮನ್ಯು ಮಿಶ್ರಾ ಈ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಶುಭ್ಮನ್ ಗಿಲ್; ಅಭಿಮನ್ಯು ಈಶ್ವರನ್ ಬದಲಿ ಆಯ್ಕೆ

ಇದೇ ವೇಳೆ ಅಭಿಮನ್ಯು ಮಿಶ್ರಾ 19 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 2002ರ ಆಗಸ್ಟ್ 12ರಂದು ಕಜಕಿಸ್ತಾನದ ಸರ್ಗೆ ಕರ್ಜಾಕಿನ್‌ ಅವರು ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ದಾಖಲೆ ಬರೆದಿದ್ದರು. ಈ ವೇಳೆ ಸರ್ಗೆ ಕರ್ಜಾಕಿನ್‌ ಗೆ 12 ವರ್ಷ ಏಳು ತಿಂಗಳು ಪ್ರಾಯವಾಗಿತ್ತು. ಆದರೆ ಈ ದಾಖಲೆಯನ್ನು 12 ವರ್ಷ ನಾಲ್ಕು ತಿಂಗಳು ಪ್ರಾಯದ ಅಭಿಮನ್ಯು ಮಿಶ್ರಾ ಮುರಿದಿದ್ದಾರೆ.

ಭಾರತೀಯ ಮೂಲದ ಅಭಿಮನ್ಯು ಮಿಶ್ರಾ ಅಮೆರಿಕದಲ್ಲಿ ಜನಿಸಿದವರು. ಕಳೆದ ಕೆಲವು ತಿಂಗಳಿನಿಂದ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸತತ ಕೂಟಗಳಲ್ಲಿ ಅಭಿಮನ್ಯು ಮಿಶ್ರಾ ಆಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next