Advertisement
ಆದರೆ ಇದೀಗ ಉಚಿತ ಮಾಸ್ಕ್ ವಿತರಣಾ ಯೋಜನೆಯನ್ನು ನಿಲ್ಲಿಸುವಂತೆ ಸ್ವತ: ದೇಶದ ಪ್ರಜೆಗಳೇ ಒತ್ತಡ ಹೇರುತ್ತಿದೆ. ಯಾಕೆಂದರೆ ಕಳಪೆ ಗುಣಮಟ್ಟದ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ. ಅಂಥ ಮಾಸ್ಕ್ ಗಳೇ ಬೇಡ ಎಂದು ಅಭಿಯಾನ ಆರಂಭಿಸಿದ್ದಾರೆ.
ಜಪಾನ್ ಪ್ರಧಾನಿ ಶಿಂಜೊ ಅಬೆ ಪ್ರಾರಂಭಿಸಿದ ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ಪ್ರಶ್ನಿಸುತ್ತಿರುವ ಜನರು, “ಅಬೆನೋಮಾಸ್ಕ್” ಎಂದು ಗೇಲಿ ಮಾಡಲು ಪ್ರಾರಂಭಿಸಿದ್ದಾರೆ. ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ಮಾಸ್ಕ್ ಗಳ ಕೊರತೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ದೇಶದ ಪ್ರತಿ ಮನೆಗೆ ಎರಡು ಮುಖಗವಸು ಕಳುಹಿಸಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಶಿಂಜೊ ಅಬೆ ಘೋಷಿಸಿದ್ದರು. ಆದರೆ ಶಿಂಜೊ ಅವರ ಈ ನಡೆಯನ್ನು ಹಲವರು ಟೀಕಿಸತೊಡಗಿದ್ದಾರೆ.
ಮಾಸ್ಕ್ ಗಳು ಬಟ್ಟೆಯಿಂದ ಮಾಡಲ್ಪಟ್ಟಿದ್ದು, ಮೂಗು ಅಥವಾ ಮುಖದ ಕೆಳಭಾಗವನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ ಎಂಬುದು ಜನರ ಆರೋಪ. ಇನ್ನೂ ಕೆಲವರು ಮಾಸ್ಕ್ ನ ಗುಣಮಟ್ಟ ಹಾಗೂ ಪರಿಣಾಮಕಾರಿತ್ವದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಶಿಂಜೊ ಅಬೆ ಸ್ವತಃ ಮಾಸ್ಕ್ ಧರಿಸಿ ಕಾಣಿಸಿಕೊಂಡರೂ, ಅದರ ಕುರಿತು ಹಲವು ಜೋಕ್ ಹಾಗೂ ಮೀಮ್‌ಗಳು ಸೃಷ್ಟಿಯಾಗಿವೆ. ಹೀಗಾಗಿ ಜಪಾನ್ ಸರಕಾರವು ಮಾಸ್ಕ್ ವಿತರಣಾ ಕಾರ್ಯವನ್ನು ಸದ್ಯಕ್ಕೆ ನಿಲ್ಲಿಸಿದೆ.