Advertisement

Asian Cup ಫುಟ್‌ಬಾಲ್‌ಗೆ ಅಬ್ದುಲ್‌ ಸಮದ್‌

11:28 PM Dec 31, 2023 | Team Udayavani |

ಹೊಸದಿಲ್ಲಿ: ಎಎಫ್ಸಿ ಏಷ್ಯನ್‌ ಕಪ್‌ ಫುಟ್‌ಬಾಲ್‌ ಪಂದ್ಯಾ ವಳಿಗಾಗಿ ಭಾರತ ತಂಡವನ್ನು ಕೋಚ್‌ ಐಗರ್‌ ಸ್ಟಿಮ್ಯಾಕ್‌ ಪ್ರಕಟಿಸಿದರು.

Advertisement

ಸಹಾಲ್‌ ಅಬ್ದುಲ್‌ ಸಮದ್‌ ಗಾಯ ದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಆದರೆ ಗಾಯಾಳಾ ಗಿರುವ ಜೀಕ್ಸನ್‌ ಸಿಂಗ್‌ ಮತ್ತು ಗ್ಲ್ಯಾನ್‌ ಮಾರ್ಟಿನ್ಸ್‌ ಹೊರಗುಳಿದಿದ್ದಾರೆ.

ಗ್ರೂಪ್‌ “ಬಿ’ಯಲ್ಲಿರುವ ಭಾರತ, ಜ. 13ರ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಜ. 18ರಂದು ಉಜ್ಬೆಕಿಸ್ಥಾನದ ವಿರುದ್ಧ ಆಡಲಿದೆ. ಈ ಎರಡೂ ಪಂದ್ಯಗಳು ಅಲ್‌ ರಯಾನ್‌ನ “ಅಹ್ಮದ್‌ ಬಿನ್‌ ಅಲಿ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಜ. 23ರ ಸಿರಿಯಾ ಎದುರಿನ ಮುಖಾಮುಖೀ ಅಲ್‌ ಖೋರ್‌ನ “ಅಲ್‌ ಬೈಟ್‌ ಸ್ಟೇಡಿಯಂ’ನಲ್ಲಿ ಸಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next