Advertisement

ಅಪಹರಣ ಪ್ರಕರಣ: ಪಾಲಿಕೆ ಸದಸ್ಯೆ ಪತಿ ಬಂಧನ

03:02 PM May 05, 2022 | Team Udayavani |

ಬಳ್ಳಾರಿ: ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ವಾರ್ಡ್‌ ಪಾಲಿಕೆ ಸದಸ್ಯರ ಪತಿ ಬಿ.ಆರ್.ಎಲ್‌. ಶ್ರೀನಿವಾಸ್‌ ಅವರನ್ನು ಬ್ರೂಸ್‌ಪೇಟೆ ಠಾಣೆ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ನಗರದ ಅಗಡಿ ಮಾರೆಪ್ಪ ಕಾಂಪೌಂಡ್‌ ನಿವಾಸಿ ಕೆ. ವೆಂಕಟೇಶ್‌ ಎನ್ನುವವರು ಏ. 9ರಂದು ಸಂಜೆ 4 ಗಂಟೆಗೆ ಠಾಣೆಗೆ ಹಾಜರಾಗಿ ಏ. 4ರಂದು ತನ್ನನ್ನು ಬಿ.ಆರ್.ಎಲ್‌. ಶ್ರೀನಿವಾಸ್‌ ಮತ್ತಿತರೆ ಆರೋಪಿತರು ಗುಗ್ಗರಹಟ್ಟಿಯಲ್ಲಿರುವ ಜಾಗಗಳ ವಿಷಯಕ್ಕೆ ಸಂಬಂಧಿಸಿದಂತೆ ಅಪಹರಣ ಮಾಡಿ, ಕೊಲೆ ಮಾಡಲು ಯತ್ನಿಸಿ, ಖಾಲಿ ಬಾಂಡ್‌ಗಳ ಮೇಲೆ ಸಹಿ ಮಾಡಿಸಿಕೊಂಡಿದ್ದರು ಎಂದು ಇನ್ನಿತರೆ ವಿಷಯಗಳ ಕುರಿತು ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ರೂಸ್‌ಪೇಟೆ ಠಾಣೆ ಪೊಲೀಸರು, ಏ. 13ರಂದು ಪ್ರಕರಣ ಆರೋಪಿಗಳಾದ ಧನರಾಜ್‌, ಮುನಾವರ್‌ ಅವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಅದರಂತೆ ಏ. 2ರಂದು ಪ್ರಕರಣ ಪ್ರಮುಖ ಆರೋಪಿ ಬಿ.ಆರ್.ಎಲ್‌. ಸೀನಾ ಅಲಿಯಾಸ್‌ ಶ್ರೀನಿವಾಸ್‌ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದು ಎಸ್‌ಪಿ ಸೈದುಲು ಅಡಾವತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next