Advertisement

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

10:26 AM Jun 07, 2023 | Team Udayavani |

ಜೈಪುರ: ವ್ಯಕ್ತಿಯೊಬ್ಬ ಬಲವಂತವಾಗಿ ಯುವತಿಯನ್ನು ಅಪಹರಣ ಮಾಡಿ ಸಪ್ತಪದಿಯ ವಿಧಾನವನ್ನು ನೆರವೇರಿಸುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪುಷ್ಪೇಂದ್ರ ಸಿಂಗ್‌ ಎಂಬಾತ 15-20 ಜನರ ಸಹಾಯದಿಂದ ರಾಜಸ್ಥಾನದ ಜೈಸಲ್ಮೇರ್‌ ನ ಸಂಖ್ಲಾ ಗ್ರಾಮದಿಂದ ಯುವತಿಯನ್ನು ಅವಳ ಕುಟುಂಬದ ಮುಂದೆಯೇ ಅಪಹರಿಸಿಕೊಂಡು ಬಂದಿದ್ದಾನೆ. ಇದಾದ ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಯುವತಿಯನ್ನು ಎತ್ತಿಕೊಂಡು ಅಲ್ಲಿ ಬೆಂಕಿಯನ್ನು ಹಾಕಿ ಸಪ್ತಪದಿ ವಿಧಿ ವಿಧಾನವನ್ನು ಬಲವಂತವಾಗಿ ನೆರವೇರಿಸಿದ್ದಾನೆ. ಯುವತಿ ಜೋರಾಗಿ ಆಳುತ್ತಿದ್ದರೂ, ಅವಳ ಮಾತನ್ನು ಕೇಳದೇ ಬಲವಂತವಾಗಿ ಈ ಪ್ರಕ್ರಿಯೆಯನ್ನು ಆತ ನೆರವೇರಿಸಿದ್ದಾನೆ.

ಯುವಕನ ಪಕ್ಕದಲ್ಲಿ ಒಂದಷ್ಟು ಜನರ ಗುಂಪು ಹಾಗೂ ಯುವಕನ ಮನೆಯವರು ಕೂಡ ಕಾಣಿಸುತ್ತಾರೆ. ಕೆಲವರು ಈ ಘಟನೆಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜೂ.1 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಅವರಿಗೆ ಟ್ವಿಟರ್‌ ನಲ್ಲಿ ಟ್ಯಾಗ್ ಮಾಡಿ ಘಟನೆಯ ಬಗ್ಗೆ ಖಂಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಾದ ಬಳಿಕ ಜೈಸಲ್ಮೇರ್‌ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಘಟನೆ ಜೂನ್‌ 1 ರಂದು ನಡೆದಿದೆ. ಕೃತ್ಯದ ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಇತರ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಸಂಬಂಧ ಪಟ್ಟ ಕಾಯ್ದೆಗಳ ಅಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಈ ಮೊದಲು ಘಟನೆ ನಡೆದ ಬಳಿಕ ಯುವತಿಯ ಮನೆಯವರು ಪೊಲೀಸರಿಗೆ ಕ್ರಮಕ್ಕೆ ಆಗ್ರಹ ಮಾಡಿದಾಗ, ಪೊಲೀಸರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ ಎಂದು ಯುವತಿಯ ತಂದೆ ಮಾಧ್ಯಮದ ಮುಂದೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next