Advertisement

ಪಾಕಿಸ್ತಾನ; ಅಪಹೃತ ಸಿಖ್ ಯುವತಿ ಮನೆಗೆ ಬಂದಿಲ್ಲ; ಸಂತ್ರಸ್ತೆ ಪೋಷಕರು

09:43 AM Sep 01, 2019 | Nagendra Trasi |

ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಸಿಖ್ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ಯುವತಿ ಮನೆಗೆ ವಾಪಸ್ ಆಗಿದ್ದಾಳೆಂಬ ವರದಿಯನ್ನು ಸಂತ್ರಸ್ತೆ ಕುಟುಂಬಿಕರು ನಿರಾಕರಿಸಿದ್ದಾರೆ. ಅಲ್ಲದೇ ಅಪಹೃತ ಯುವತಿ ಮನೆಗೆ ಬಂದಿದ್ದಾಳೆಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ನಾನ್ ಕಾನಾ ಸಾಹೀಬ್ ಪ್ರದೇಶದಿಂದ ಅಪಹೃತವಾಗಿದ್ದ ಸಿಖ್ ಯುವತಿ ಮನೆಗೆ ವಾಪಸ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಈ ಮೊದಲು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಪಾಕಿಸ್ತಾನದ ನಾನ್ ಕಾನಾ ಸಾಹೀಬ್ ನ ನಿವಾಸಿಯಾಗಿದ್ದ ಸಿಖ್ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ಯುವಕನ ಜೊತೆ ವಿವಾಹ ಮಾಡಿಸಲಾಗಿತ್ತು. ಶಿರೋಮಣಿ ಅಕಾಲಿ ದಳ(ಎಸ್ ಎ ಡಿ)ದ ಶಾಸಕ ಮನ್ ಜಿಂದರ್ ಸಿಂಗ್ ಸಿರ್ಸಾ ಅವರು ಗುರುವಾರ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿರುವ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next