ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಸಾರ್ಥಕ ಸಂಭ್ರಮ ಹಾಗೂ ನುಡಿ ನಮನ ಸಮಾರಂಭದಲ್ಲಿ ದಿ| ಈರಮ್ಮ ಪಾಟೀಲ ಸ್ಮರಣಾರ್ಥ ನೀಡುವ ಪ್ರತಿಷ್ಠಿತ ಅಬ್ಬೆ ಪ್ರಶಸ್ತಿಯನ್ನು ಮಾಜಿ ಸಚಿವೆ ರಾಣಿ ಸತೀಶ ಹಾಗೂ ದಿ| ರುದ್ರಗೌಡ ಪಾಟೀಲ ನೆನಪಿಗಾಗಿ ನೀಡುವ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ತಾಲೂಕಿನ ತುಂಬರಮಟ್ಟಿ ಗ್ರಾಮದ ಮಲ್ಲಣ್ಣ ಮೇಟಿ ಅವರಿಗೆ ಪ್ರದಾನ ಮಾಡಲಾಯಿತು.
Advertisement
ಪ್ರಶಸ್ತಿಗಳು ತಲಾ ಒಂದು ಲಕ್ಷ ರೂ. ನಗದು ಒಳಗೊಂಡಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅತ್ಯುನ್ನತ ಅಬ್ಬೆ ಪ್ರಶಸ್ತಿ ಮತ್ತು ಕಾಯಕ ತತ್ವದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತನಿಗೆ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಎಸ್.ಆರ್. ಪಾಟೀಲ ಎಜ್ಯುಕೇಶನ್ ಫೌಂಡೇಶನ್ ವತಿಯಿಂದ ಈ ವರ್ಷ ನೀಡುತ್ತಿರುವ ಅಬ್ಬೆ ಹಾಗೂ ಕೃಷಿ ಪ್ರಶಸ್ತಿ ಮೂರನೇಯದ್ದಾಗಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ, ಬಾಪೂಜಿ ಸಂಸ್ಥೆಯ ಆಡಳಿತಾಧಿಕಾರಿ ಎಚ್.ಬಿ. ಧರ್ಮಣ್ಣವರ, ಆವರಣ ನಿರ್ದೇಶಕ ಬೊಮ್ಮೇಗೌಡ,ಪ್ರಾಚಾರ್ಯ ಜಿ. ವೆಂಕಟೇಶ, ಹನುಮೇಶ ದುಡ್ಯಾಳ ಹಾಗೂ ಎಸ್.ಆರ್. ಪಾಟೀಲ ಕುಟುಂಬ ವರ್ಗದವರು ಇದ್ದರು.