ರಾಜಸ್ಥಾನ : ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿದನ್ನು ಅಖಿಲ ಭಾರತೀಯ ಅಖಾರ ಪರಿಷತ್ (ಎ ಬಿ ಎ ಪಿ )ನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗಿರಿ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಹೇಳಿರುವುದು ಸೂಕ್ತವಾಗಿದೆ. ಕೇಂದ್ರ ಸರ್ಕಾರ ಈ ಸಂಬಂಧಿ ಕಾನೂನನ್ನು ಅತಿ ಶೀಘ್ರದಲ್ಲಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ 13ನೇ ಸೀಸನ್ ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ
“ಕೇಂದ್ರ ಸರ್ಕಾರವು ಕಾನೂನನ್ನು ರೂಪಿಸಲು, ಸಂಸತ್ತಿನಲ್ಲಿ ಈ ವಿಚಾರದ ಕುರಿತು ಮಂಡಿಸಲು ಮತ್ತು ಇದನ್ನು ಅಂಗೀಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಸಂಬಂಧಿಸಂದೆ ಕೇಂದ್ರ ಸರ್ಕಾರ ಒಂದು ಕಾನೂನನ್ನು ಜಾರಿಗೊಳಿಸುವುದರಿಂದ ಹಾಗೂ ಹಸುಗಳು ರಾಷ್ಟ್ರೀಯ ಪ್ರಾಣಿಯಾದಾಗ ಜನರು ಗೋವುಗಳ ಮೇಲೆ ಹೆಚ್ಚು ಗೌರವ ಹಾಗೂ ಭಕ್ತಿ ಭಾವ ಬರುತ್ತದೆ” ಎಂದು ಅವರು ಹೇಳಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಗೋವು ಪ್ರಮುಖವಾದ ಭಾಗವಾಗಿದೆ ಎಂದು ತಿಳಿಸಿರುವ ಅಲಹಬಾದ್ ಹೈಕೋರ್ಟ್ ಪೀಠ, ಗೋ ಮಾಂಸ ಭಕ್ಷಣೆ ಮಾಡುವವರಿಗಷ್ಟೇ ಅದು ಮೂಲಭೂತ ಹಕ್ಕಲ್ಲ. ಆದರೆ ಗೋವುಗಳನ್ನು ಯಾರು ಪೂಜಿಸುತ್ತಾರೋ ಹಾಗೂ ಗೋವಿನ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವವರ ಮೂಲಭೂತ ಹಕ್ಕಾಗಿದೆ ಎಂದು ಅಲಹಾಬಾದ್ ಹೈ ಕೋರ್ಟ್ ಹೇಳಿರುವುದಕ್ಕೆ ಗಿರಿ ಸಂತೋಷ ವ್ಯಕ್ತ ಪಡಿಸಿದ್ದಲ್ಲದೇ, ಗೋವು ಕೇವಲ ಪ್ರಾಣಿ ಮಾತ್ರವಲ್ಲ. ಗೋವು ನಮ್ಮ ಮಾತೆ. ಹಸುಗಳನ್ನು ಪೂಜಿಸುವುದು ಮತ್ತು ಅವುಗಳ ಸೇವೆ ಮಾಡುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ಇನ್ನು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಯಾರು ಗೋವನ್ನು ಹತ್ಯೆಗೈಯುತ್ತಾರೋ ಅಂತವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನನ್ನು ರೂಪಿಸಬೇಕು ಎಂದು ಹೈಕೋರ್ಟ್ ಪೀಠದ ಜಸ್ಟೀಸ್ ಶೇಖರ್ ಕುಮಾರ್ ಯಾದವ್ ಸಲಹೆ ನೀಡಿರುವುದಾಗಿ ವರದಿ ಹೇಳಿದೆ.
ಕೊಲ್ಲುವ ಹಕ್ಕಿಗಿಂತ ಬದುಕುವ ಹಕ್ಕು ಎಲ್ಲಕ್ಕಿಂತ ದೊಡ್ಡದಾದದ್ದು. ಗೋ ಮಾಂಸ ತಿನ್ನುವುದನ್ನು ಯಾವುದೇ ಕಾರಣಕ್ಕೂ ಮೂಲಭೂತ ಹಕ್ಕು ಎಂದು ಪರಿಗಣಿಸಬಾರದು ಎಂದು ಹೈಕೋರ್ಟ್ನ ನ್ಯಾಯ ಪೀಠ ತಿಳಿಸಿದೆ.
ಇದನ್ನೂ ಓದಿ : ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಗೋ ಹತ್ಯೆಗೆ ಕಠಿಣ ಶಿಕ್ಷೆ; ಅಲಹಾಬಾದ್ ಹೈಕೋರ್ಟ್