Advertisement

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

08:10 PM Dec 27, 2024 | Team Udayavani |

ಮೋಕ್ಷದ ಮೊದಲ ಮೆಟ್ಟಿಲೇ ಅಭಿಮಾನತ್ಯಾಗ. “ಇದು ನಮ್ಮದು’ ಎಂಬ ಅಟ್ಯಾಚ್ ಮೆಂಟ್ ಬಿಡಬೇಕು. ಯಾವುದೇ ಕೆಲಸವನ್ನು ಅಭಿಮಾನದಿಂದಲೂ, ಕರ್ತವ್ಯಪ್ರಜ್ಞೆಯಿಂದಲೂ ಮಾಡಬಹುದು. ಕರ್ತವ್ಯಪ್ರಜ್ಞೆಯಿಂದ ಮಾಡಿದರೆ ತೊಂದರೆ ಇಲ್ಲ. ತಾಯಿಯೂ, ಕೆಲಸದಾಕೆಯೂ ಮಗುವಿನ ಸೇವೆ ಮಾಡುತ್ತಾರೆ. ಇವರಲ್ಲಿ ವ್ಯತ್ಯಾಸವೇನು? ತಾಯಿ ಸಂಬಳಕ್ಕೆ ಮಾಡುವುದಲ್ಲ, ಮೋಹದಿಂದ ಮಾಡುತ್ತಾಳೆ. ಕೆಲಸದವರು ಸಂಬಳಕ್ಕಾಗಿ ಮಾಡುತ್ತಾರೆ. ಕರ್ತವ್ಯ ಎಂದು ಮಾಡಿದರೆ ಅಭಿಮಾನವಿರುವುದಿಲ್ಲ. ಯಾವುದೇ ಅಪೇಕ್ಷೆ ಇಲ್ಲದೆ ಮಾಡಬೇಕೆಂದು ಕೃಷ್ಣ ಹೇಳುವುದು. ಇವೆರಡರಲ್ಲಿ ಬಹಳ ಸೂಕ್ಷ್ಮ ಅಂತರವಿದೆ. ಕೆಲಸ ಎರಡೂ ಒಂದೇ.

Advertisement

ಆಂತರಿಕ ದೃಷ್ಟಿಯಲ್ಲಿ ಬೇರೆ. “ನಾನು ಕರ್ತವ್ಯ ಮಾಡುತ್ತಿದ್ದೇನೆ. ದೇವರು ನನಗೆ ಎಲ್ಲ ಶಕ್ತಿ ಕೊಟ್ಟಿದ್ದಾನೆ’ ಎಂದು ತಿಳಿದು ಕೆಲಸ ಮಾಡಬೇಕು. ನಾವು ಹುಟ್ಟುವಾಗ ಏನನ್ನಾದರೂ ತಂದಿದ್ದೇವೆಯೋ? ಹುಟ್ಟಿದ ಬಳಿಕವಾದರೂ ನಿಯಂತ್ರಣ ಇದೆಯೆ? ಅದಕ್ಕಾಗಿಯೇ ಮಧ್ವಾಚಾರ್ಯರು “ಹರಿರೇವ ಪರಃ…’ ಎಂಬ ಸಂದೇಶವನ್ನು ಕೊಟ್ಟದ್ದು. ಹೋಗಲಿ ನಾವು ನಮ್ಮದು ಎಂದು ತಿಳಿದುಕೊಳ್ಳಿ. ಮುಂದಾದರೂ ನಾವು ಹೇಳಿದಂತೆ ಕೇಳುತ್ತದೆಯೆ? ತಲೆ ಬೋಳಾಗುವುದು, ವೃದ್ಧಾಪ್ಯ ಯಾರಿಗೂ ಇಷ್ಟವಿಲ್ಲ, ಆದರೂ ಬೋಳಾಗುವುದನ್ನು, ವೃದ್ಧಾಪ್ಯ ಬರುವುದನ್ನು ನಿಲ್ಲಿಸಲು ಆಗುತ್ತದೋ? ಆಗಿಯೇ ಆಗುತ್ತದೆ. “ನೀನು’, “ನಿನ್ನದು’ ಅಂತಾದರೆ ನಿಯಂತ್ರಣ ಬೇಕಿತ್ತಲ್ಲ?

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next