Advertisement

ಬೆಂಗಳೂರಿನಲ್ಲಿ ಆತಂಕಕ್ಕೆ ಕಾರಣವಾದ ಸೂಟ್ ಕೇಸ್: ಒಳಗೇನಿತ್ತು ಗೊತ್ತಾ ?

04:27 PM Oct 13, 2021 | Team Udayavani |

ಬೆಂಗಳೂರು : ಸಿಲಿಕಾನ್ ಸಿಟಿಯ ಜನನಿಭಿಡ ಪ್ರದೇಶವಾಗಿರುವ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಅನಾಮಧೇಯ ಸೂಟ್ ಕೇಸ್ ಒಂದು ಜನರಲ್ಲಿ ಆತಂಕ ತಂದಿಟ್ಟ ಘಟನೆ ಬುಧವಾರ  ನಡೆದಿದೆ.

Advertisement

ಮಧ್ಯಾಹ್ನ 1  ಗಂಟೆಯ ವೇಳೆಗೆ ಪಾರ್ಕ್ ಮಾಡಲಾಗಿದ್ದ ಸ್ಕೂಟರ್ ನ ಫೂಟ್ ಬೋರ್ಡ್ ನಲ್ಲಿ ಕಪ್ಪು ಬಣ್ಣದ ಸೂಟ್ ಕೇಸ್ ಕಂಡು ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಅನುಮಾನಗೊಂಡು ಪೊಲೀಸರೀಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಹತ್ತಿರ ಬರದಂತೆ ತಡೆದಿದ್ದಾರೆ. ಸ್ಥಳಕ್ಕೆ ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಿಬ್ಬಂದಿ ಆಗಮಿಸಿ ಸೂಟ್ ಕೇಸ್ ತೆರೆದು ಪರೀಕ್ಷಿಸಿದ್ದಾರೆ.

ಸೂಟ್ ಕೇಸ್ ನಲ್ಲಿ ಸೀರೆ ಮತ್ತು ಬಟ್ಟೆಗಳು ಮಾತ್ರ ಪತ್ತೆಯಾಗಿದ್ದು ಇತರ ಅನುಮಾನಾಸ್ಪದ ವಸ್ತುಗಳಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ ಬಳಿಕ ಆತಂಕಕ್ಕೊಳಗಾಗಿದ್ದ ಜನರು ನಿರಾಳರಾದರು.

Advertisement

Udayavani is now on Telegram. Click here to join our channel and stay updated with the latest news.

Next