Advertisement

ಭೂ ಸುಧಾರಣಾ ನೀತಿ ಕೈಬಿಡಿ

03:07 PM Aug 14, 2020 | Suhan S |

ಸಂಡೂರು: ದಲಿತರಿಗೆ ಮಾರಕವಾದ ಕೇಂದ್ರದ ಭೂ ಸುಧಾರಣಾ ನೀತಿಯನ್ನು ತಕ್ಷಣ ಕೈಬಿಡಬೇಕು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎಂದು ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಎ. ಸ್ವಾಮಿ ಒತ್ತಾಯಿಸಿದರು.

Advertisement

ಅವರು ಗುರುವಾರ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ತಾಲೂಕು ಘಟಕದ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಶೀಲ್ದಾರ್‌ ಎಚ್‌.ಜೆ. ರಶ್ಮಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಕೇಂದ್ರ ಸರ್ಕಾರ ಈ ಹಿಂದೆ ಇದ್ದ 1961 ಮತ್ತು 1974 ರಲ್ಲಿದ್ದು ಭೂ ಸುಧಾರಣೆ ಕಾಯಿದೆಯಿಂದ ಕೇವಲ 1.4 ಹೆಕ್ಟೇರ್‌ ಭೂಮಿಯೂ ಸಹ ದಲಿತ ಕುಟುಂಬಗಳಿಗೆ ದೊರೆಯುತ್ತಿಲ್ಲ, ಅದರೆ ಈಗ ಜಾರಿಗೆ ತಂದಿರುವ ನೀತಿಯಿಂದ ದಲಿತರಿಗೆ ಭೂಮಿಯೇ ಇಲ್ಲದಂಥ ಸ್ಥಿತಿ ಉಂಟಾಗುತ್ತದೆ. ಆದ್ದರಿಂದ ತಕ್ಷಣ ಇಂಥ ಭೂ ಸುಧಾರಣಾ ಕಾಯಿದೆ ಕೈಬಿಡಬೇಕು. ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನಾದರೂ ನೀಡುವ ಮೂಲಕ ಅವರಿಗೆ ಭೂಮಿ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ಸದಸ್ಯರುಗಳಾದ ದುರುಗಮ್ಮ, ಮೈಲಮ್ಮ, ಕಲ್ಲಮ್ಮ, ಮಂಜು, ಅಧ್ಯಕ್ಷ ಎ. ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next